Rohit Sharma on Rahul Dravid: ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ 7 ತಿಂಗಳೊಳಗೆ 2 ವಿಶ್ವಕಪ್ ಫೈನಲ್ʼಗಳನ್ನು ಆಡಿದೆ. 2023ರ ಏಕದಿನ ವಿಶ್ವಕಪ್ʼನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಇಡೀ ಭಾರತೀಯ ಪಾಳೆಯವು ನಿರಾಶೆಗೊಂಡಿತು. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ಈ ಜೋಡಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿತ್ತು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
ರೋಹಿತ್ ಶರ್ಮಾ ಮತ್ತು ರಾಹುಲ್ ದ್ರಾವಿಡ್ ಜೋಡಿ 7 ತಿಂಗಳೊಳಗೆ 2 ವಿಶ್ವಕಪ್ ಫೈನಲ್ʼಗಳನ್ನು ಆಡಿದೆ. 2023ರ ಏಕದಿನ ವಿಶ್ವಕಪ್ʼನ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಸೋಲಿನ ನಂತರ ಇಡೀ ಭಾರತೀಯ ಪಾಳೆಯವು ನಿರಾಶೆಗೊಂಡಿತು. ಆದರೆ 2024ರ ಟಿ20 ವಿಶ್ವಕಪ್‌ನಲ್ಲಿ ಈ ಜೋಡಿ ಭಾರತವನ್ನು ವಿಶ್ವ ಚಾಂಪಿಯನ್ ಮಾಡುವಲ್ಲಿ ಕೊನೆಗೂ ಯಶಸ್ವಿಯಾಗಿತ್ತು.
ಈಗ ರೋಹಿತ್ ಇನ್‌ಸ್ಟಾಗ್ರಾಂನಲ್ಲಿ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದು, ಭಾವನಾತ್ಮಕ ರೀತಿಯಲ್ಲಿ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.
"ಬಾಲ್ಯದಿಂದಲೂ ರಾಹುಲ್ ದ್ರಾವಿಡ್ ಅವರನ್ನು ಸ್ಫೂರ್ತಿಯ ಮೂಲವಾಗಿ ಪರಿಗಣಿಸುತ್ತಿದ್ದೇನೆ" ಎಂದು ರೋಹಿತ್ ಹೇಳಿದ್ದಾರೆ. T20 ವಿಶ್ವಕಪ್ ಗೆದ್ದ ನಂತರ ರೋಹಿತ್ ಶರ್ಮಾ ಈ ಸ್ವರೂಪದಿಂದ ನಿವೃತ್ತಿ ಪಡೆದಿದ್ದಾರೆ.
ರೋಹಿತ್ ಶರ್ಮಾ, "ನಿಮ್ಮಿಂದ ಸ್ಫೂರ್ತಿ ಪಡೆದ ಸಾವಿರಾರು ಮತ್ತು ಲಕ್ಷ ಮಕ್ಕಳಂತೆ, ನಾನು ಕೂಡ ಅವರಲ್ಲಿ ಒಬ್ಬ. ಆದರೆ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ನೀವು ಕ್ರೀಡಾ ಜಗತ್ತಿನ ಶ್ರೇಷ್ಠ ವ್ಯಕ್ತಿಗಳಲ್ಲಿ ಒಬ್ಬರು. ನಿಮ್ಮ ವೈಯಕ್ತಿಕ ಸಾಧನೆಗಳನ್ನು ಬದಿಗಿಟ್ಟು, ನೀವು ಟೀಮ್ ಇಂಡಿಯಾಗೆ ಕೋಚ್ ಆಗಿ ಸೇರಿಕೊಂಡಿದ್ದೀರಿ ಮತ್ತು ನಾವು ನಿಮ್ಮೊಂದಿಗೆ ಯಾವುದೇ ಹಿಂಜರಿಕೆಯಿಲ್ಲದೆ ಮಾತನಾಡಬಹುದಾದಂತಹ ವ್ಯಕ್ತಿತ್ವವನ್ನು ಅಳವಡಿಸಿಕೊಂಡಿದ್ದೀರಿ. ನಿಮ್ಮ ನಮ್ರತೆಯೇ ನೀವು ದೇವರಿಂದ ಪಡೆದ ದೊಡ್ಡ ಕೊಡುಗೆಯಾಗಿದೆ. ಈ ಆಟದ ಮೇಲಿನ ನಿಮ್ಮ ಪ್ರೀತಿ ಕಡಿಮೆಯಾಗದಿರಲಿ" ಎಂದು ಬರೆದುಕೊಂಡಿದ್ದಾರೆ.
ರೋಹಿತ್ ಶರ್ಮಾ ತಮ್ಮ ಪೋಸ್ಟ್ʼನಲ್ಲಿ ತಮ್ಮ ಪತ್ನಿ ರಿತಿಕಾ ಸಜ್ದೇಹ್ ಹೇಳಿಕೆಯನ್ನೂ ಉಲ್ಲೇಖಿಸಿದ್ದು, "ನಾನು ನಿಮ್ಮಿಂದ ಬಹಳಷ್ಟು ಕಲಿತಿದ್ದೇನೆ ಮತ್ತು ಪ್ರತಿ ಕ್ಷಣವನ್ನು ಮಿಸ್ ಮಾಡಿಕೊಳ್ಳುತ್ತೇನೆ. ನನ್ನ ಹೆಂಡತಿ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಎಂದು ಕರೆಯುತ್ತಾಳೆ. ಹೀಗೆ ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ ಎಂಬುದು ನನ್ನ ಅದೃಷ್ಟ" ಎಂದು ಬರೆದುಕೊಂಡಿದ್ದಾರೆ.
"ನಿಮ್ಮನ್ನು ನನ್ನ ವಿಶ್ವಾಸಾರ್ಹ, ತರಬೇತುದಾರ ಮತ್ತು ಸ್ನೇಹಿತ ರಾಹುಲ್ ಭಾಯ್ ಎಂದು ಕರೆಯಲು ನನಗೆ ಗೌರವವಾಗುತ್ತಿದೆ" ಎಂದು ಭಾವನಾತ್ಮಕ ಕ್ಯಾಪ್ಶನ್ ನೀಡಿದ್ದಾರೆ.