Ram Mandir inauguration: ರಾಮಮಂದಿರದ ಅಂಚೆ ಚೀಟಿ ಬಿಡುಗಡೆ ಮಾಡಿದ ಪ್ರಧಾನಿ ಮೋದಿ

Ayodhya Ram Mandir Live Updates: ಇಂದು ಬಿಡುಗಡೆಯಾಗಿರುವ 6 ಸ್ಮರಣಾರ್ಥ ಅಂಚೆಚೀಟಿಗಳು ಅಯೋಧ್ಯೆಯಲ್ಲಿನ ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಶಬರಿಯನ್ನು ಒಳಗೊಂಡಿವೆ. ಪ್ರತಿಯೊಂದೂ ಭಗವಾನ್ ರಾಮನಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಸುತ್ತವೆ.

Ram Mandir Inauguration: ಅಯೋಧ್ಯೆಯ ರಾಮ ಮಂದಿರದ ಸ್ಮರಣಾರ್ಥ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಅಂಚೆ ಚೀಟಿಗಳು ಐತಿಹಾಸಿಕ ಘಟನೆಯ ಮಾಹಿತಿಯನ್ನು ಹೊಂದಿದ್ದು, ಈ ವಿಚಾರಗಳನ್ನು ಭವಿಷ್ಯಕ್ಕೆ ತಿಳಿಸುವ ಸಂಕೇತಗಳಾಗಿ ಉಳಿಯಲಿವೆ ಎಂದು ಹೇಳಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಪ್ರಧಾನಿ ಮೋದಿಯವರು ಗುರುವಾರ ರಾಮಮಂದಿರದ ಸ್ಮರಣಾರ್ಥ ಹೊರತಂದಿರುವ ಅಂಚೆ ಚೀಟಿಗಳು ಮತ್ತು ಭಗವಾನ್ ರಾಮನ ಕುರಿತ ಅಂಚೆಚೀಟಿಗಳ ಪುಸ್ತಕವನ್ನು ಬಿಡುಗಡೆ ಮಾಡಿದರು. ಬಳಿಕ ಮಾತನಾಡಿದ ಅವರು, ಈ ಅಂಚೆ ಚೀಟಿಗಳು ಭವಿಷ್ಯದ ಪೀಳಿಗೆಗೆ ಇತಿಹಾಸ ಮತ್ತು ರಾಮಮಂದಿರದ ಕುರಿತ ಐತಿಹಾಸಿಕ ಮಾಹಿತಿ ತಲುಪಿಸಲಿವೆ ಎಂದು ಹೇಳಿದ್ದಾರೆ.

2 /5

ಈ ಅಂಚೆ ಚೀಟಿಗಳು ಕೇವಲ ಕಾಗದದ ತುಣುಕುಗಳು ಅಥವಾ ಕಲಾಕೃತಿಗಳಲ್ಲ. ಇವು ರಾಮಾಯಣ ಕುರಿತ ತಮ್ಮದೇಯಾದ ವಿಶಿಷ್ಟ ಗುರುತುಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

3 /5

ಬಿಡುಗಡೆ ಮಾಡಲಾಗಿರುವ ಅಂಚೆ ಚೀಟಿಗಳಿಂದ ಯುವಕರು ಬಹಳಷ್ಟು ಕಲಿಯಲಿದ್ದಾರೆ. ಅಂಚೆ ಚೀಟಿಯಲ್ಲಿ ರಾಮಚರಿತ ಮಾನಸದ ಶ್ಲೋಕವಿದೆ. ದೇಶಕ್ಕೆ ಸಕಾರಾತ್ಮಕ ಸಂದೇಶ ನೀಡುವ ಸೂರ್ಯನ ಚಿತ್ರವಿದೆ. ಅಲ್ಲದೇ ಸರಯು ನದಿಯ ಚಿತ್ರಣವೂ ಇದರಲ್ಲಿದೆ. ಇದರೊಂದಿಗೆ ಭಗವಾನ್ ರಾಮನ, ಪಂಚತಂತ್ರದ ತತ್ತ್ವವನ್ನು ಆಲ್ಬಮ್‍ನಲ್ಲಿ ಚಿಕಣಿ ರೂಪದಲ್ಲಿ ಚಿತ್ರಿಸಲಾಗಿದೆ  ಎಂದ ಪ್ರಧಾನಿ ಮೋದಿ ತಿಳಿಸಿದ್ದಾರೆ.

4 /5

ಇಂದು ಬಿಡುಗಡೆಯಾಗಿರುವ 6 ಸ್ಮರಣಾರ್ಥ ಅಂಚೆಚೀಟಿಗಳು ಅಯೋಧ್ಯೆಯಲ್ಲಿನ ರಾಮಮಂದಿರ, ಗಣೇಶ, ಹನುಮಾನ್, ಜಟಾಯು, ಕೇವತ್ರಾಜ್ ಮತ್ತು ಶಬರಿಯನ್ನು ಒಳಗೊಂಡಿವೆ. ಪ್ರತಿಯೊಂದೂ ಭಗವಾನ್ ರಾಮನಿಗೆ ಸಂಬಂಧಿಸಿದ ವಿಚಾರಗಳನ್ನು ತಿಳಿಸುತ್ತವೆ.

5 /5

ಇದಲ್ಲದೇ ಭಗವಾನ್ ರಾಮನ ಕುರಿತ 48 ಪುಟಗಳ ಪುಸ್ತಕದಲ್ಲಿ ಅಮೆರಿಕ, ನ್ಯೂಜಿಲ್ಯಾಂಡ್, ಸಿಂಗಾಪುರ, ಕೆನಡಾ ಮತ್ತು ಕಾಂಬೋಡಿಯಾ ಸೇರಿದಂತೆ 20ಕ್ಕೂ ಹೆಚ್ಚು ದೇಶಗಳು ಹೊರಡಿಸಿರುವ ಅಂಚೆಚೀಟಿಗಳನ್ನು ಒಳಗೊಂಡಿದೆ. ಇವೆಲ್ಲಾ ದೇಶಗಳ ನಡುವಿನ ಗಡಿಗಳನ್ನೂ ಮೀರಿ ಸಂಪರ್ಕ ಸಾಧಿಸಲು ಸಹಕಾರಿಯಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ.