30 ವರ್ಷಗಳ ನಂತರ, ಮಕರ ಸಂಕ್ರಾಂತಿ ದಿನದಂದು ಮೂರೂ ರಾಜಯೋಗ ನಿರ್ಮಾಣವಾಗುತ್ತಿದೆ. ಅದರಲ್ಲಿ ಅದ್ಭುತವಾದ ಧನಯೋಗ ಕೂಡಾ ಒಂದು.
ಬೆಂಗಳೂರು : 30 ವರ್ಷಗಳ ನಂತರ, ಮಕರ ಸಂಕ್ರಾಂತಿಯಂದು, ಶನಿಗ್ರಹವು ತನ್ನ ಮೂಲ ತ್ರಿಕೋನ ಚಿಹ್ನೆಯಾದ ಕುಂಭ ರಾಶಿಯಲ್ಲಿಯೇ ಇದ್ದಾನೆ. ಶನಿಯು ಸ್ವರಾಶಿಯಲ್ಲಿದ್ದಾಗ ಶಶ ರಾಜಯೋಗ ಉಂಟಾಗುತ್ತದೆ. ಇದರೊಂದಿಗೆ, ಸೂರ್ಯ ಮಕರ ರಾಶಿಯನ್ನು ಪ್ರವೇಶಿಸುವುದರೊಂದಿಗೆ ಸೂರ್ಯ ಮತ್ತು ಗುರುವಿನ ನವಪಂಚಮ ಯೋಗವು ರೂಪುಗೊಳ್ಳುತ್ತದೆ.ಜೊತೆಗೆ ಧನ ಯೋಗ ಕೂಡಾ ನಿರ್ಮಾಣವಾಗುತ್ತಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮೇಷ ರಾಶಿ : ಆದಾಯವನ್ನು ಹೆಚ್ಚಿಸುವ ಪ್ರಯತ್ನಗಳು 100 ಪ್ರತಿಶತ ಯಶಸ್ವಿಯಾಗುತ್ತದೆ. ಇನ್ನು ಮುಂದೆ ಅದೃಷ್ಟ ನಿಮ್ಮ ಕಡೆಗೆ ಇರುತ್ತದೆ. ಎಲ್ಲಾ ಕ್ಷೇತ್ರಗಳಲ್ಲಿ ಲಾಭ ಗಳಿಸುವಿರಿ.
ವೃಷಭ ರಾಶಿ: ಇಂದಿನಿಂದ ನಿಮ್ಮ ಜೀವನದಲ್ಲಿ ಸಿಹಿ ಆರಂಭ. ಸಂಗಾತಿಯೊಂದಿಗೆ ಇದ್ದ ಮನಸ್ತಾಪ ದೂರವಾಗುವುದು. ನಿಮ್ಮ ಜೀವನದಲ್ಲಿಯೂ ಸಂಕ್ರಾಂತಿ ಮೂಡುವುದು.
ಮಿಥುನ ರಾಶಿ : ಪೂರ್ವಜರ ಆಸ್ತಿ ಕೈ ಸೇರುವ ಸಮಯ. ಆದರೆ ನಿಮ್ಮ ಮಾತಿನ ಮೇಲೆ ನಿಗಾ ಇರಲಿ. ಬೇಕಾದಲ್ಲಿ ಮಾತ್ರ ಮಾತನಾಡಿದರೆ ನಿಮಗೆ ಲಾಭ. ಮನಸ್ಸು ಶಾಂತವಾಗಿರುವುದು.
ಕರ್ಕ ರಾಶಿ : ಸ್ಥಿರ ಆಸ್ತಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಉತ್ತಮ ಲಾಭವಿದೆ. ನಿಮ್ಮ ತಂದೆಯ ಆಶೀರ್ವಾದದಿಂದ ಸರ್ಕಾರದಿಂದ ಗೌರವ ಸಿಗುವ ಸಾಧ್ಯತೆ ಇರುತ್ತದೆ.
ಸಿಂಹ ರಾಶಿ : ಸಾಲ ಕೊಟ್ಟು ಕೈ ಸೇರದೆ ಇರುವ ಹಣ ಈ ಬಾರಿ ನಿಮ್ಮ ಕೈ ಸೇರುವುದು. ಬುದ್ಧಿವಂತಿಕೆಯಿಂದ ತೆಗೆದುಕೊಳ್ಳುವ ನಿರ್ಧಾರಗಳು ಪ್ರಯೋಜನಕಾರಿಯಾಗುತ್ತವೆ. ನಿಮ್ಮ ಗುರಿ ಮುಟ್ಟುವುದಕ್ಕೆ ಸಹಾಯ ಮಾಡುತ್ತದೆ.
ಕನ್ಯಾ ರಾಶಿ : ಅದೃಷ್ಟದ ದೃಷ್ಟಿಯಿಂದ ಉತ್ತಮವಾಗಿರಲಿದೆ. ಕಳೆದ ಕೆಲವು ದಿನಗಳಿಂದ ಬಾಧಿಸುತ್ತಿದ್ದ ಸಮಸ್ಯೆಗಳು ಇಂದಿನಿಂದ ದೂರವಾಗುವುದು. ಮಾತಿನ ಮೇಲೆ ಸ್ವಲ್ಪ ಹಿಡಿತ ಇದ್ದರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.
ತುಲಾ ರಾಶಿ : ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವುದು. ಸಾಂಸಾರಿಕ ವಸ್ತುಗಳ ಮೇಲಿನ ಖರ್ಚು ಹೆಚ್ಚಾಗಲಿದೆ. ಶತ್ರುಗಳು ನಿಮ್ಮ ಮುಂದೆ ಮಂಡಿಯೂರುವ ಕಾಲ. ನಿಮ್ಮ ಜೀವನದ ಸುಖ ಸಂತೋಷ ಹೆಚ್ಚುವುದು.
ವೃಶ್ಚಿಕ ರಾಶಿ : ನಿಮ್ಮ ಮೇಲೆ ಯಾವುದಾದರೂ ವಿಷಯದಿಂದಾಗಿ ಆರೋಪ ಬರಬಹುದು. ಆದರೆ ಚಿಂತಿಸಬೇಡಿ, ನಿಮ್ಮ ಮೇಲಿನ ಆರೋಪ ನಿರಾಧಾರವಾಗಿ ಹೋಗುವುದು.
ಧನು ರಾಶಿ : ಆತ್ಮವಿಶ್ವಾಸದಿಂದ ಮುನ್ನುಗ್ಗಿ. ಮಾಡುವ ಪ್ರತಿ ಕೆಲಸ ಯಶಸ್ಸು ತಂದು ಕೊಡುವುದು. ಹೊಸ ಯೋಜನೆಗಳ ಕೆಲಸ ಇಂದಿನಿಂದಲೇ ಪ್ರಾರಂಭವಾಗಲಿ. ಗೆಳುವುದ್ ನಿಮ್ಮದೇ ಆಗುವುದು.
ಮಕರ ರಾಶಿ : ಸಂಪತ್ತು ಹೆಚ್ಚಾಗುತ್ತದೆ. ಹೋದಲ್ಲಿ ಬಂದಲ್ಲಿ ನಿಮ್ಮ ಗೌರವ ಹೆಚ್ಚಾಗುವುದು. ನೀವು ಮಾಡುವ ಕೆಲಸಕ್ಕೆ ಮೇಲಾಧಿಕಾರಿಗಳಿಂದ ಪಶಂಸೆ ಸಿಗುವುದು.
ಕುಂಭ ರಾಶಿ : ನಿಮ್ಮ ತಾಳ್ಮೆ ಮತ್ತು ಪ್ರತಿಭೆಯಿಂದ ಶತ್ರುಪಕ್ಷವನ್ನು ಸೋಲಿಸುವಲ್ಲಿ ಯಶಸ್ವಿಯಾಗುತ್ತದೆ. ವರ್ಷ ಪೂರ್ತಿ ನೆಮ್ಮದಿಯಿಂದ ದಿನ ಕಳೆಯುವಿರಿ.
ಮೀನ ರಾಶಿ : ಇಂದು ಬುದ್ಧಿವಂತಿಕೆ ಮತ್ತು ಜ್ಞಾನವು ಹೆಚ್ಚಾಗುತ್ತದೆ. ಮಹತ್ತರವಾದ ಪ್ರಯತ್ನಗಳು ಆಸೆಯನ್ನು ಈಡೇರಿಸುತ್ತವೆ. ಗೌರವ ಹೆಚ್ಚಾಗುತ್ತದೆ.