50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್‌ ಹೊಡೆಯಲಿದೆ!

Rahu Nakshatra Transit 2024: ರಾಹು 18 ತಿಂಗಳುಗಳ ಕಾಲ ಒಂದೇ ರಾಶಿಯಲ್ಲಿರುತ್ತದೆ. ಯಾವಾಗಲೂ ವಕ್ರ ಸ್ಥಾನದಲ್ಲಿ ಸಂಚರಿಸುತ್ತದೆ. ರಾಹುವಿಗೆ ಯಾವುದೇ ರೀತಿಯ ಸ್ವಂತ ರಾಶಿಯಿಲ್ಲ. ಈ ರಾಹು ಕಳೆದ ಜುಲೈ 8ರಂದು ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದೆ. ​

Rahu Nakshatra Transit 2024: ಜ್ಯೋತಿಷ್ಯದಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಭವಿಷ್ಯವನ್ನು ನವಗ್ರಹಗಳ ಸ್ಥಾನಗಳಿಂದ ಊಹಿಸಲಾಗುತ್ತದೆ. ಪ್ರತಿಯೊಂದು ಗ್ರಹಗಳು ನಿಯಮಿತ ಸಮಯದಲ್ಲಿ ರಾಶಿ ಮತ್ತು ನಕ್ಷತ್ರಗಳನ್ನು ಬದಲಾಯಿಸುತ್ತಿರುತ್ತವೆ. ಹೀಗೆ ರಾಶಿ ಬದಲಾವಯಿಂದ ಎಲ್ಲಾ ರಾಶಿಗಳ ಮೇಲೂ ಪರಿಣಾಮ ಉಂಟಾಗಲಿದೆ. ಜ್ಯೋತಿಷ್ಯದಲ್ಲಿ ರಾಹುವನ್ನು ಛಾಯಾಗ್ರಹವೆಂದು ಪರಿಗಣಿಸಲಾಗುತ್ತದೆ. ಈ ರಾಹು 18 ತಿಂಗಳುಗಳ ಕಾಲ ಒಂದೇ ರಾಶಿಯಲ್ಲಿರುತ್ತದೆ. ಯಾವಾಗಲೂ ವಕ್ರ ಸ್ಥಾನದಲ್ಲಿ ಸಂಚರಿಸುತ್ತದೆ. ರಾಹುವಿಗೆ ಯಾವುದೇ ರೀತಿಯ ಸ್ವಂತ ರಾಶಿಯಿಲ್ಲ. ಈ ರಾಹು ಕಳೆದ ಜುಲೈ 8ರಂದು ಉತ್ತರ ಭಾದ್ರಪದ ನಕ್ಷತ್ರವನ್ನು ಪ್ರವೇಶಿಸಿದೆ. 50 ವರ್ಷಗಳ ನಂತರ ರಾಹುವಿನ ಈ ಪ್ರವೇಶವು ಕೆಲವು ರಾಶಿಗಳ ಮೇಲೆ ಅಶುಭ ಪರಿಣಾಮವನ್ನುಂಟು ಮಾಡಿದ್ರೆ, ಇನ್ನು ಕೆಲವು ರಾಶಿಗಳಿಗೆ ಭರ್ಜರಿ ಲಾಭವನ್ನು ನೀಡುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ಉತ್ತರ ಭಾದ್ರಪದ ನಕ್ಷತ್ರ ಶನಿದೇವನ ನಕ್ಷತ್ರವಾಗಿದೆ. ರಾಹು ಮತ್ತು ಶನಿಯು ಸ್ನೇಹಪರವಾಗಿಲ್ಲದಿದ್ದರೂ ರಾಹುವಿನ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ. ಆ ರಾಶಿಯವರ ಆರ್ಥಿಕ ಪರಿಸ್ಥಿತಿಯು ಸುಧಾರಿಸಲಿದೆ. ಇದೀಗ ರಾಹು ಉತ್ತರ ಭಾದ್ರಪದ ನಕ್ಷತ್ರಕ್ಕೆ ತೆರಳಿದ್ದು, ಯಾರಿಗೆ ಅದೃಷ್ಟ ತರಲಿದೆ ಎಂಬುದರ ಬಗ್ಗೆ ತಿಳಿಯಿರಿ...

2 /4

ರಾಹುವಿನ ನಕ್ಷತ್ರ ಸಂಚಾರ ವೃಷಭ ರಾಶಿಯವರ ಆದಾಯದಲ್ಲಿ ಹೆಚ್ಚಳ ನೀಡುತ್ತದೆ. ಕೆಲಸ & ವ್ಯವಹಾರದಲ್ಲಿ ಅನಿರೀಕ್ಷಿತ ಪ್ರಗತಿ ಕಾಣಬಹುದು. ಕೆಲವರಿಗೆ ಉದ್ಯೋಗ ಬದಲಾವಣೆಗೆ ಅವಕಾಶಗಳಿರುತ್ತವೆ. ಆದರೆ ಈ ಬದಲಾವಣೆಯು ಜೀವನದಲ್ಲಿ ಉತ್ತಮ ಫಲಿತಾಂಶ ತರುತ್ತದೆ. ವ್ಯಾಪಾರಸ್ಥರು ಆರ್ಥಿಕ ಲಾಭ ತರುವ ಹೊಸ ಒಪ್ಪಂದ ಮಾಡಿಕೊಳ್ಳಬಹುದು. ವ್ಯಾಪಾರ ವಿಸ್ತರಣೆಯಾಗುವ ಸಾಧ್ಯತೆ ಇರುತ್ತದೆ. ಉದ್ಯೋಗಾಕಾಂಕ್ಷಿಗಳಿಗೆ ಅಂದುಕೊಂಡ ಉದ್ಯೋಗ ದೊರೆಯಲಿದೆ.

3 /4

ರಾಹುವಿನ ನಕ್ಷತ್ರ ಸಂಚಾರವು ಮಿಥುನ ರಾಶಿಯವರಿಗೆ ಉತ್ತಮ ಲಾಭ ತರುತ್ತದೆ. ಈ ಸಮಯದಲ್ಲಿ ನಿಮ್ಮ ಆದಾಯ ಹೆಚ್ಚಲಿದೆ. ನಿಮ್ಮ ಕೆಲಸ ಬದಲಾಯಿಸಲು ಬಯಸಿದರೆ, ಈ ಅವಧಿಯಲ್ಲಿ ಪ್ರಯತ್ನಿಸಿರಿ. ಕೆಲಸದಲ್ಲಿ ನೀವು ಉತ್ತಮ ಫಲಿತಾಂಶ ಪಡೆಯುತ್ತೀರಿ. ಕೆಲವರಿಗೆ ಹೊಸ ಉದ್ಯೋಗಾವಕಾಶ ಸಿಗಲಿವೆ. ಈ ಅವಧಿಯಲ್ಲಿ ಹೂಡಿಕೆ ಮಾಡಿದರೆ ದುಪ್ಪಟ್ಟು ಲಾಭ ಸಿಗುತ್ತದೆ. ವಿವಾಹಿತರಿಗೆ ಸಂತಾನ ಭಾಗ್ಯ ದೊರಕಲಿದೆ.

4 /4

ಮಕರ ರಾಶಿಯ 3ನೇ ಮನೆಯಲ್ಲಿ ರಾಹು ಮತ್ತು 2ನೇ ಮನೆಯಲ್ಲಿ ಶನಿ ಇದ್ದಾರೆ. ರಾಹುವಿನ ಈ ನಕ್ಷತ್ರ ಸಂಕ್ರಮದಿಂದ ಮಕರ ರಾಶಿಯವರ ಧೈರ್ಯ ಹೆಚ್ಚುತ್ತದೆ. ನಿಮ್ಮ ಕೆಲಸ ತೃಪ್ತಿಕರವಾಗಿರುತ್ತದೆ & ಲಾಭದಾಯಕವಾಗಿರುತ್ತದೆ. ವ್ಯಾಪಾರಿಗಳಿಗೆ ಅನಿರೀಕ್ಷಿತ ಲಾಭ ದೊರೆಯಲಿದೆ. ಬಹಳ ದಿನಗಳಿಂದ ಬೇರೆಡೆ ಸಿಲುಕಿರುವ ಹಣ ಕೈಗೆ ಸಿಗಲಿದೆ. ಸ್ನೇಹಿತರಿಂದ ನಿಮಗೆ ಉತ್ತಮ ಬೆಂಬಲ ದೊರೆಯಲಿದೆ. ಉದ್ಯೋಗಿಗಳಿಗೆ ಬಡ್ತಿ ದೊರೆಯುವ ಸಾಧ್ಯತೆ ಇರುತ್ತದೆ.