Rahu Transit 2024: ಮುಂದಿನ 8 ತಿಂಗಳು ಈ 4 ರಾಶಿಗೆ ಸುಖ-ಸಂಪತ್ತು ನೀಡಲಿರುವ ರಾಹು!

Rahu Transit 2024: ಮುಂದಿನ 8 ತಿಂಗಳವರೆಗೆ ಅಂದರೆ ಮಾರ್ಚ್ 8ರವರೆಗೆ ರಾಹು ಉತ್ತರಾಷಾಢ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಪ್ರಸ್ತುತ ರಾಹು ಮೀನ ರಾಶಿಯಲ್ಲಿ ಸಂಕ್ರಮಿಸುತ್ತಿದ್ದು, ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ.

Rahu Transit 2024: ರಾಹುವನ್ನು ನೆರಳು ಗ್ರಹವೆಂದು ಪರಿಗಣಿಸಲಾಗುತ್ತದೆ. ರಾಹು ಒಂದು ರಾಶಿಗೆ ಆಗಮಿಸುವುದನ್ನು ಅಶುಭವೆಂದು ಕರೆಯಲಾಗುತ್ತದೆ. ರಾಹು ಪ್ರತಿಯೊಬ್ಬರ ಜೀವನದಲ್ಲಿಯೂ ದೋಷ ತರುತ್ತದೆ. ಮುಂದಿನ 8 ತಿಂಗಳವರೆಗೆ ಅಂದರೆ ಮಾರ್ಚ್ 8ರವರೆಗೆ ರಾಹು ಉತ್ತರಾಷಾಢ ನಕ್ಷತ್ರದಲ್ಲಿ ಸಂಕ್ರಮಿಸಲಿದೆ. ಇದರ ಜೊತೆಗೆ ರಾಹು ಮೀನ ರಾಶಿಯಲ್ಲಿ ಸಾಗಲಿದೆ. ಮೀನ ರಾಶಿಯಲ್ಲಿ ರಾಹು ಉತ್ತರಾಷಾಢ ನಕ್ಷತ್ರವನ್ನು ತಲುಪಲಿದೆ. ಪ್ರಸ್ತುತ ರಾಹು ಮೀನ ರಾಶಿಯಲ್ಲಿ ಸಂಕ್ರಮಿಸುತ್ತಿದ್ದು, ಎಲ್ಲಾ 12 ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಹಾಗಾದ್ರೆ ಯಾವ ರಾಶಿಗಳು ಇದರಿಂದ ಅದೃಷ್ಟದ ಫಲಿತಾಂಶ ಪಡೆಯಲಿವೆ ಅನ್ನೋದರ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /4

ನೆರಳು ಗ್ರಹ ರಾಹುವಿನ ಈ ನಕ್ಷತ್ರ ಸಂಕ್ರಮಣವು ತುಲಾ ರಾಶಿಯವರಿಗೆ ಅನೇಕ ಲಾಭಗಳನ್ನು ತರುತ್ತದೆ. ಈ ಅವಧಿಯಲ್ಲಿ ಇವರು ಅದೃಷ್ಟ ಪಡೆಯುತ್ತಾರೆ. ಕೆಲಸದಲ್ಲಿ ಬಡ್ತಿ & ಸಂಬಳ ಹೆಚ್ಚಳವಾಗಲಿದೆ. ನಿಮ್ಮ ಜೀವನದಲ್ಲಿ ಅನಿರೀಕ್ಷಿತ ವೃತ್ತಿ ಬದಲಾವಣೆ ಸಂಭವಿಸಲಿದೆ. ವಿದೇಶ ಪ್ರಯಾಣ ಹೆಚ್ಚಾಗಲಿದ್ದು, ಕುಟುಂಬದಲ್ಲಿ ಸಂತೋಷ & ಶಾಂತಿ ಇರುತ್ತದೆ. ವಿವಾಹಿತ ದಂಪತಿಗಳ ನಡುವೆ ಅನ್ಯೋನ್ಯತೆ ಹೆಚ್ಚಾಗುತ್ತದೆ. ಹೊಸದಾಗಿ ಮದುವೆಯಾದ ದಂಪತಿಗಳು ಮಗು ಹೊಂದುವ ಸಾಧ್ಯತೆಯಿದೆ.

2 /4

ರಾಹುವಿನ ಈ ರಾಶಿ ಬದಲಾವಣೆಯು ಮಕರ ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ತರಲಿದೆ. ಉತ್ತರಾಷಾಢ ನಕ್ಷತ್ರದಲ್ಲಿ ರಾಹುವಿನ ಸಂಕ್ರಮಣವು ಈ ರಾಶಿಯವರಿಗೆ ಬಹಳ ಪ್ರಯೋಜನಕಾರಿಯಾಗಲಿದೆ. ವೈವಾಹಿಕ ಜೀವನದಲ್ಲಿ ನೀವು ನಿರೀಕ್ಷಿತ ಲಾಭ ಪಡೆಯುತ್ತೀರಿ. ಹಣಕಾಸಿನ ಸ್ಥಿತಿಗತಿಯಲ್ಲಿ ಬದಲಾವಣೆಯಾಗಲಿದೆ. ನೀವು ನಿರೀಕ್ಷಿಸದ ರೀತಿಯಲ್ಲಿ ಆರ್ಥಿಕ ಜೀವನ ಉತ್ತಮವಾಗಿರುತ್ತದೆ. ಮುಂಬರುವ 8 ತಿಂಗಳುಗಳಲ್ಲಿ ನೀವು ಅನೇಕ ರೀತಿಯ ಲಾಭಗಳನ್ನು ಪಡೆಯುತ್ತೀರಿ. 

3 /4

ರಾಹುವಿನ ನಕ್ಷತ್ರ ಬದಲಾವಣೆಯು ಕುಂಭ ರಾಶಿಯವರಿಗೆ ಅನೇಕ ರೀತಿಯಲ್ಲಿ ಲಾಭ ತರಲಿದೆ. ಹೆಚ್ಚಿದ ಖರ್ಚುಗಳು ಕಡಿಮೆಯಾಗಲಿದ್ದು, ನಿಮ್ಮ ಆದಾಯವು ಹೆಚ್ಚಾಗುತ್ತದೆ. ಹೊಸ ಉದ್ಯೋಗ ನಿಮಗೆ ಅನುಕೂಲಕರವಾಗಿರುತ್ತದೆ. ಎಲ್ಲಾ ರೀತಿಯ ಧನಾತ್ಮಕ ಬದಲಾವಣೆಗಳಿಗೆ ಇದು ಉತ್ತಮ ಸಮಯವಾಗಿದೆ. ಕುಂಭ ರಾಶಿಯವರ ಜೀವನ ಅದೃಷ್ಟದಿಂದ ಕೂಡಿರುತ್ತದೆ. ನೀವು ಆರ್ಥಿಕವಾಗಿ ಯಾವುದೇ ತೊಂದರೆ ಎದುರಿಸುವುದಿಲ್ಲ. ನಿಮ್ಮ ಜೀವನದಲ್ಲಿ ಅನೇಕ ಪ್ರಮುಖ ಮತ್ತು ಧನಾತ್ಮಕ ಬದಲಾವಣೆಗಳಾಗಲಿದ್ದು, ನಿಮಗೆ ಧನಲಾಭವಾಗಲಿದೆ. 

4 /4

ರಾಹುವಿನ ನಕ್ಷತ್ರ ಬದಲಾವಣೆಯು ಮೀನ ರಾಶಿಯವರಿಗೆ ಅನೇಕ ಅನುಕೂಲಕರ ಬದಲಾವಣೆ ತರುತ್ತದೆ. ಮೀನ ರಾಶಿಯವರ ಜೀವನದಲ್ಲಿ ಕಷ್ಟದ ಸಮಯವು ದೂರವಾಗಲಿವೆ. ಇದು ಜೀವನದಲ್ಲಿ ಎಲ್ಲಾ ರೀತಿಯ ಬದಲಾವಣೆಗಳ ಸಮಯವಾಗಿದೆ. ನಿಮ್ಮ ಆರೋಗ್ಯವು ಸಹ ಚೆನ್ನಾಗಿರುತ್ತದೆ. ನಿಮ್ಮ ಜೀವನವು ಸಮೃದ್ಧವಾಗಿರುವ ಅವಧಿ ಇದಾಗಿದ್ದು, ದಾಂಪತ್ಯ ಜೀವನದಲ್ಲಿ ಸುಖ-ಶಾಂತಿ ಇರುತ್ತದೆ. ಹಣಕಾಸಿನ ವ್ಯವಹಾರಗಳು ಉತ್ತಮವಾಗಿರುತ್ತವೆ ಮತ್ತು ಅನೇಕ ರೀತಿಯಲ್ಲಿ ಆದಾಯ ಹರಿದುಬರಲಿದೆ.