ಶೂಟಿಂಗ್‌ ವೇಳೆ ಕೈ ಮುರಿದುಕೊಂಡ ರಾಗಿಣಿ : ಅಷ್ಟಕ್ಕೂ ಆಗಿದ್ದಾದ್ರೂ ಏನು..!

ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಕೈಗೆ ಗಾಯಮಾಡಿಕೊಂಡಿದ್ದಾರೆ. ಶೂಟಿಂಗ್​ ಈ ಘಟನೆ ನಡೆದಿದ್ದು, ವೈದ್ಯರ ಸಲಹೆ ಮೇಲೆ ಬೆಡ್‌ರೆಸ್ಟ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Ragini Dwivedi Photos : ಸ್ಯಾಂಡಲ್‌ವುಡ್‌ ತುಪ್ಪದ ಬೆಡಗಿ ನಟಿ ರಾಗಿಣಿ ದ್ವಿವೇದಿ ಕೈಗೆ ಗಾಯಮಾಡಿಕೊಂಡಿದ್ದಾರೆ. ಶೂಟಿಂಗ್​ ಈ ಘಟನೆ ನಡೆದಿದ್ದು, ವೈದ್ಯರ ಸಲಹೆ ಮೇಲೆ ಬೆಡ್‌ರೆಸ್ಟ್‌ ತೆಗೆದುಕೊಳ್ಳುತ್ತಿದ್ದಾರೆ. ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

1 /5

ಸ್ಯದ್ಯ ರಾಗಿಣಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಚೆನ್ನೈನಲ್ಲಿ ಶೂಟಿಂಗ್​ನಲ್ಲಿ ಕೈಗೆ ಏಟು ಬಿದ್ದಿದೆ. ವೈದ್ಯರು ನಾಲ್ಕು ದಿನ ಬೆಡ್​ರೆಸ್ಟ್​ ತೆಗೆದುಕೊಳ್ಳಿ ಅಂತ ವೈದ್ಯರು ತಿಳಿಸಿದ್ದಾರೆ.

2 /5

ʼನಾನು ಒಬ್ಬ ಭಾರತೀಯʼ ಚಿತ್ರದ ಶೂಟಿಂಗ್​ ವೇಳೆ ಈ ಘಟನೆ ನಡೆದಿದೆ. ತಮ್ಮ ಅಭಿಮಾನಿಗಳಿಗೆ ಫೋಟೋ ಹಂಚಿಕೊಂಡು, ಆದಷ್ಟು ಬೇಗ ರಿಕವರ್​ ಆಗುತ್ತೇನೆ ಅಂತ ರಾಗಿಣಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

3 /5

ಬಾಬು ಗಣೇಶ್‌ ನಿರ್ದೇಶನ ʼನಾನು ಒಬ್ಬ ಭಾರತೀಯʼ ಸಿನಿಮಾದಲ್ಲಿ ರಾಗಿಣಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಆರ್ಮಿ ಕಮಾಂಡೊ ಆಫೀಸರ್ ಪಾತ್ರದಲ್ಲಿ ರಾಗಿಣಿ ಅಭಿನಯಿಸುತ್ತಿದ್ದಾರೆ.  

4 /5

ಇತ್ತೀಚಿಗೆ ನಟಿ ರಾಗಿಣಿ ದ್ವಿವೇದಿ ನಟನೆಯ ʼಬಿಂಗೊʼ ಸಿನಿಮಾದ ಮುಹೂರ್ತ ನೆರವೇರಿತು. ಆರ್.ಕೆ ಸ್ಟುಡಿಯೋಸ್ ಮತ್ತು ಮುತರಾ ವೆಂಚರ್ಸ್ ಲಾಂಛನದಲ್ಲಿ ಈ ಸಿನಿಮಾ ನಿರ್ಮಾಣ ವಾಗುತ್ತಿದೆ.  

5 /5

ಸೋಶಿಯಲ್​ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಾಗಿಣಿ ಅವರು ಆಗಾಗ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚಿಗೆ ಅವರ ಬಿಕಿನಿ ಫೋಟೋಗಳು ಸಖತ್ ವೈರಲ್‌ ಆಗಿದ್ದವು.