Home Remedies to Repel Mosquitoes in Rainy Season: ಇದು ಮಳೆಗಾಲ. ಎಷ್ಟೇ ಜಾಗರೂಕರಾದರೂ ಕೀಟ, ನೊಣ, ಸೊಳ್ಳೆ ಸೇರಿದಂತೆ ಅನೇಕ ಜಂತುಗಳು ಮನೆಯೊಳಗೆ ಪ್ರವೇಶಿಸುತ್ತವೆ. ಅದರಲ್ಲೂ ಸಂಜೆ ವೇಳೆಗೆ ಸೊಳ್ಳೆಗಳ ಕಾಟ ವಿಪರೀತವಾಗಿ ಕಾಡುತ್ತದೆ. ಇನ್ನು ಮಲಗುವಾಗಲೂ ಸೊಳ್ಳೆ ಕಾಟ ಹೆಚ್ಚಾಗಿರುತ್ತದೆ. ಹೀಗಿರುವಾಗ ಸರಿಯಾದ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇದು ಮಳೆಗಾಲ. ಎಷ್ಟೇ ಜಾಗರೂಕರಾದರೂ ಕೀಟ, ನೊಣ, ಸೊಳ್ಳೆ ಸೇರಿದಂತೆ ಅನೇಕ ಜಂತುಗಳು ಮನೆಯೊಳಗೆ ಪ್ರವೇಶಿಸುತ್ತವೆ. ಅದರಲ್ಲೂ ಸಂಜೆ ವೇಳೆಗೆ ಸೊಳ್ಳೆಗಳ ಕಾಟ ವಿಪರೀತವಾಗಿ ಕಾಡುತ್ತದೆ. ಇನ್ನು ಮಲಗುವಾಗಲೂ ಸೊಳ್ಳೆ ಕಾಟ ಹೆಚ್ಚಾಗಿರುತ್ತದೆ. ಹೀಗಿರುವಾಗ ಸರಿಯಾದ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ.
ಅತಿಯಾಗಿ ಬೆಳೆದ ಹುಲ್ಲುಗಳು ಮತ್ತು ಕೊಚ್ಚೆಗಳು ಮಳೆಗಾಲದಲ್ಲಿ ಸೊಳ್ಳೆಗಳು ಮತ್ತು ಕೀಟಗಳ ಸಂತಾನೋತ್ಪತ್ತಿಗೆ ಕಾರಣವಾಗುತ್ತದೆ. ಸೊಳ್ಳೆಗಳು ಆರೋಗ್ಯಕ್ಕೆ ಅಪಾಯಕಾರಿ. ಇದರಿಂದಾಗಿ ಡೆಂಗ್ಯೂ, ಮಲೇರಿಯಾ ಮತ್ತು ಇತರ ಅನೇಕ ಕಾಯಿಲೆಗಳು ಬರಬಹುದು.
ಇನ್ನು ಸೊಳ್ಳೆಗಳ ಕಾಟದಿಂದ ಮುಕ್ತಿ ಪಡೆಯಲು ಮಾರುಕಟ್ಟೆಯಲ್ಲಿ ಲಭ್ಯವಿರುವ ಉತ್ಪನ್ನಗಳನ್ನು ಖರೀದಿಸುವುದಕ್ಕಿಂತ ಕೆಲವು ನೈಸರ್ಗಿಕ ಪರಿಹಾರಗಳನ್ನು ಬಳಕೆ ಮಾಡಬಹುದು.
ಲ್ಯಾವೆಂಡರ್ ಸಸ್ಯವು ನೋವು ನಿವಾರಕ, ಆಂಟಿಫಂಗಲ್ ಮತ್ತು ನಂಜುನಿರೋಧಕ ಗುಣಗಳನ್ನು ಹೊಂದಿದ್ದು ಸೊಳ್ಳೆಗಳನ್ನು ದೂರವಿರಿಸುತ್ತದೆ. ರಾತ್ರಿ ವೇಳೆ ಮಿತಿಮೀರಿ ಸೊಳ್ಳೆ ಕಡಿಯುತ್ತಿದ್ದರೆ, ಲ್ಯಾವೆಂಡರ್ ಸಸ್ಯದ ಒಂದು ಎಲೆಯನ್ನು ಮಲಗುವ ಕೋಣೆಯಲ್ಲಿಟ್ಟರೆ ಸಾಕು. ಸೊಳ್ಳೆಗಳನ್ನು ಸಂಪೂರ್ಣವಾಗಿ ನಿಯಂತ್ರಣ ಮಾಡುತ್ತವೆ.
ದಾಲ್ಚಿನ್ನಿ ಎಣ್ಣೆ ಅತ್ಯುತ್ತಮ ಸೊಳ್ಳೆ ನಿವಾರಕಗಳಲ್ಲಿ ಒಂದಾಗಿದೆ. ಅಮೇರಿಕನ್ ಕೆಮಿಕಲ್ ಸೊಸೈಟಿಯ ಪ್ರಕಾರ, ದಾಲ್ಚಿನ್ನಿ ಎಣ್ಣೆಯು ಸೊಳ್ಳೆ ಲಾರ್ವಾಗಳನ್ನು ಕೊಲ್ಲುವ ಸಾಮರ್ಥ್ಯದೊಂದಿಗೆ ಪರಿಸರ ಸ್ನೇಹಿ ಕೀಟನಾಶಕವಾಗಿದೆ. ಇದನ್ನು ಸಾಮಾನ್ಯವಾಗಿ ದಾಲ್ಚಿನ್ನಿ ತೊಗಟೆಯಿಂದ ಹೊರತೆಗೆಯಲಾಗುತ್ತದೆ ಮತ್ತು ನೈಸರ್ಗಿಕ ಸೊಳ್ಳೆ ನಿವಾರಕಗಳನ್ನು ತಯಾರಿಸಲು ವ್ಯಾಪಕವಾಗಿ ಬಳಸಲಾಗುತ್ತದೆ.
ಸೊಳ್ಳೆಗಳನ್ನು ಬರದಂತೆ ತಡೆಯಲು ಪರಿಣಾಮಕಾರಿ ಮನೆಮದ್ದು ಕರ್ಪೂರ. ಇದು ಸೊಳ್ಳೆಗಳು ಮತ್ತು ಇತರ ಕೀಟಗಳನ್ನು ಓಡಿಸಲು ಸಹಾಯ ಮಾಡುತ್ತದೆ. ಇದನ್ನು ಸುಟ್ಟರೆ ಸಾಕು, ಅದರಿಂದ ಬರುವ ಬಲವಾದ ವಾಸನೆ ಸೊಳ್ಳೆಯನ್ನು ಓಡಿಸಲು ಸಹಾಯ ಮಾಡುತ್ತದೆ.
ತೇಜ್ ಪಟ್ಟಾ ಎಂದೂ ಕರೆಯಲ್ಪಡುವ ಬಿರಿಯಾನಿ ಎಲೆಗಳನ್ನು ಸೊಳ್ಳೆ ನಿವಾರಕವಾಗಿಯೂ ಬಳಸಬಹುದು. ಇದರ ಕಟುವಾದ ಪರಿಮಳ ಸೊಳ್ಳೆ ಓಡಿಸಲು ಬೆಸ್ಟ್ ಮನೆಮದ್ದು. ಇದನ್ನು ಮಲಗುವ ಕೋಣೆಯಲ್ಲಿ ಅಥವಾ ದಿಂಬಿನಡಿ ಇಟ್ಟರೆ ಸಾಕು. ಹೆಚ್ಚಿನ ಶ್ರಮವಿಲ್ಲದೆ ಸೊಳ್ಳೆ ಕಾಟದಿಂದ ಮುಕ್ತಿ ಪಡೆಯಬಹುದು.
ಬೆಳ್ಳುಳ್ಳಿ ಹೊಂದಿರುವ ಬಲವಾದ ವಾಸನೆಯು ಅದನ್ನು ಉತ್ತಮ ಸೊಳ್ಳೆ ನಿವಾರಕವನ್ನಾಗಿ ಮಾಡುತ್ತದೆ. ಇದು ಅಲಿಸಿನ್ ಎಂಬ ಸಂಯುಕ್ತವನ್ನು ಹೊಂದಿದೆ.
ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಮತ್ತು ವೃತ್ತಿಪರ ವೈದ್ಯಕೀಯ ಸಲಹೆಯಾಗಿ ತೆಗೆದುಕೊಳ್ಳಬಾರದು. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ