Top 5 Action-comedy films: 2021ರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ನ್ಯಾಷನಲ್ ಕ್ರಷ್ ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ಬಸ್ಟರ್ 'ಪುಷ್ಪ: ದಿ ರೈಸ್' ಬಿಡುಗಡೆಯಾಗಿತ್ತು. ಬಾಕ್ಸ್ಆಫೀಸ್ ಧೂಳಿಪಟ ಮಾಡಿದ್ದ ಈ ಸಿನಿಮಾ ಮುಂದುವರಿದ ಭಾಗ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ.
Top 5 Action-comedy films: ಈ ವರ್ಷವೂ ಮುಗಿಯುತ್ತಾ ಬಂದಿದೆ. ನಾವು 2024ರ ಅಂತ್ಯದತ್ತ ಸಾಗುತ್ತಿರುವಾಗ ದೇಶದ ಜನರಲ್ಲಿ ಸಿನಿಮಾಗಳ ಬಗ್ಗೆ ಕ್ರೇಜ್ ಹೆಚ್ಚುತ್ತಿದೆ. ಬಾಕಿ ಉಳಿದಿರುವ ಮೂರೇ ಮೂರು ತಿಂಗಳಿನಲ್ಲಿ ಹಲವಾರು ಬಿಗ್ ಬಜೆಟ್ನ ಸಿನಿಮಾಗಳು ಬಿಡುಗಡೆಯಾಗಲಿವೆ. ಮುಂಬರುವ ದಿನಗಳಲ್ಲಿ ಅನೇಕ ಸಿನಿಮಾಗಳನ್ನು ಚಿತ್ರಪ್ರೇಮಿಗಳು ವೀಕ್ಷಿಸಬಹುದು. ಕಾಮಿಡಿ ಮತ್ತು ಆ್ಯಕ್ಷನ್ನ ಫ್ಲೇವರ್ನ ಸಿನಿಮಾಗಳ ಬಿಗ್ ಸ್ಕ್ರೀನ್ ಮೇಲೆ ಕಮಾಲ್ ಮಾಡಲು ಸಜ್ಜಾಗಿವೆ. ಕೆಲವು ಸಿನಿಮಾಗಳು ಪೋಸ್ಟರ್, ಟೀಸರ್ ಮತ್ತು ಟ್ರೈಲರ್ಗಳ ಮೂಲಕ ಈಗಾಗಲೇ ಜನರ ಗಮನ ಸೆಳೆದಿವೆ. 2024ರಲ್ಲಿ ನೀವು ಮಿಸ್ ಮಾಡದೆ ನೋಡಲೇಬೇಕಾದ ಐದು ಬಹು ನಿರೀಕ್ಷಿತ ಚಲನಚಿತ್ರಗಳು ಯಾವುವು ಎಂದು ತಿಳಿಯಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
2021ರಲ್ಲಿ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಬ್ಲಾಕ್ಬಸ್ಟರ್ 'ಪುಷ್ಪ: ದಿ ರೈಸ್' ಬಿಡುಗಡೆಯಾಗಿತ್ತು. ಬಾಕ್ಸ್ಆಫೀಸ್ ಧೂಳಿಪಟ ಮಾಡಿದ್ದ ಈ ಸಿನಿಮಾ ಮುಂದುವರಿದ ಭಾಗವ ಮತ್ತೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲು ಸಜ್ಜಾಗಿದೆ. ಇದರ ಸೀಕ್ವೆಲ್ನಲ್ಲಿಯೂ ಫಹದ್ ಫಾಸಿಲ್ ನಟಿಸಿದ್ದಾರೆ. 'ಪುಷ್ಪಾ 2: ದಿ ರೂಲ್' ಪುಷ್ಪರಾಜ್ ಅವರ ಕಥೆಯನ್ನು ಮುಂದಕ್ಕೆ ಕೊಂಡೊಯ್ಯಲಿದೆ. ಕೆಂಪು ಚಂದನದ ಕಳ್ಳಸಾಗಣೆಯ ಕರಾಳ ಜಗತ್ತಿನ ಬಗ್ಗೆ ಈ ಕಥೆ ಮುಂದುವರೆಯಲಿದೆ. ಸುಕುಮಾರ್ ನಿರ್ದೇಶನದ ಈ ಸೀಕ್ವೆಲ್ನಲ್ಲಿ ಅಲ್ಲು ಅರ್ಜುನ್ ಅವರ ಭರ್ಜರಿ ಆಕ್ಷನ್, ಡ್ರಾಮಾ ಮತ್ತು ಉತ್ತಮ ಅಭಿನಯವನ್ನು ಪ್ರೇಕ್ಷಕರು ನೋಡಬಹುದಾಗಿದೆ. ಈ ಚಿತ್ರ ಡಿಸೆಂಬರ್ 6ಕ್ಕೆ ತೆರೆಗೆ ಬರಲಿದ್ದು, ಪ್ರೇಕ್ಷಕರು ಈ ಸಿನಿಮಾ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದಾರೆ.
'ಭೂಲ್ ಭುಲೈಯಾ 3' ಕೂಡ ಬಿಡುಗಡೆಗೆ ಸಿದ್ಧವಾಗಿದೆ. ಹಿಂದಿನ ಎರಡೂ ಭಾಗಗಳು ಸಾಕಷ್ಟು ಯಶಸ್ವಿಯಾಗಿವೆ. ಗಳಿಕೆಯ ವಿಷಯದಲ್ಲಿ ಎರಡೂ ಚಿತ್ರಗಳು ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಪಡೆದಿವೆ. ಜನಪ್ರಿಯ ಹಾರರ್-ಕಾಮಿಡಿ ಸರಣಿಯು ಈಗ ಹೊಸ ಕಥೆಯೊಂದಿಗೆ ಹಿಂತಿರುಗಿದೆ. ಕಾರ್ತಿಕ್ ಆರ್ಯನ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಬಾರಿ ವಿದ್ಯಾ ಬಾಲನ್ ಕೂಡ ಮರಳಿದ್ದಾರೆ. ಈ ಕಾಮಿಡಿ ಮತ್ತು ಹಾರರ್ ಸಿನಿಮಾವು ನವೆಂಬರ್ 1ರಂದು (ದೀಪಾವಳಿ ಹಬ್ಬಕ್ಕೆ) ಬಿಡುಗಡೆಯಾಗುತ್ತಿದೆ.
ಸೂರ್ಯ ಮತ್ತು ಬಾಬಿ ಡಿಯೋಲ್ ಅಭಿನಯದ ಬಹುವೆಚ್ಚದ ಚಿತ್ರ 'ಕಂಗುವ' ಸಾಕಷ್ಟು ಬಜ್ ಕ್ರಿಯೇಟ್ ಮಾಡಿದೆ. ಆಕ್ಷನ್ ಡ್ರಾಮಾ ಆಗಿರುವ ಈ ಸಿನಿಮಾವನ್ನು ಶಿವ ನಿರ್ದೇಶಿಸಿದ್ದಾರೆ. ಭವ್ಯ ಐತಿಹಾಸಿಕ ಹಿನ್ನೆಲೆಯ ಸೆಟ್ ನಿರ್ಮಿಸಿ ಶೂಟಿಂಗ್ ಮಾಡಲಾಗಿದೆ. ಈ ಸಿನಿಮಾ ಅದ್ಭುತ ದೃಶ್ಯಗಳು ಮತ್ತು ಅದ್ಭುತ ಕಥೆಯನ್ನು ಹೊಂದಿದೆ. ಸೂರ್ಯ ಅವರ ಪಾತ್ರಕ್ಕೆ ರೂಪಾಂತರ ಮತ್ತು ಚಿತ್ರದ ಹೈ-ಆಕ್ಟೇನ್ ಆಕ್ಷನ್ ಸೀಕ್ವೆನ್ಸ್ಗಳು ದೊಡ್ಡ ಹೈಲೈಟ್ಗಳಾಗಿವೆ. ಈ ಚಿತ್ರವು ನವೆಂಬರ್ 14ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
ರೋಹಿತ್ ಶೆಟ್ಟಿ ತಮ್ಮ ಕಾಪ್ ಯೂನಿವರ್ಸ್ನ ಇತ್ತೀಚಿನ ಚಿತ್ರ 'ಸಿಂಗಮ್ ಅಗೇನ್'ನೊಂದಿಗೆ ಹಿಂತಿರುಗಿದ್ದಾರೆ. ಅಜಯ್ ದೇವಗನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಮೂಲಕ ನಿರ್ಮಾಪಕರು ಅದರ ತೀವ್ರ ಸಾಹಸಗಳು, ವೇಗದ ಚೇಸಿಂಗ್ಗಳು ಮತ್ತು ಸ್ಮರಣೀಯ ಸಂಭಾಷಣೆಗಳೊಂದಿಗೆ ಬಾಲಿವುಡ್ನಲ್ಲಿ ಆಕ್ಷನ್ ಚಿತ್ರಗಳಿಗೆ ಹೊಸ ಮಾನದಂಡ ಹೊಂದಿಸಲು ಪ್ರಯತ್ನಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅಜಯ್ ಜೊತೆಗೆ ಅಕ್ಷಯ್ ಕುಮಾರ್, ರಣವೀರ್ ಸಿಂಗ್, ದೀಪಿಕಾ ಪಡುಕೋಣೆ, ಟೈಗರ್ ಶ್ರಾಫ್ ಮುಂತಾದ ಪ್ರತಿಭಾವಂತ ತಾರೆಯರಿದ್ದಾರೆ. ಈ ಚಿತ್ರವು ನವೆಂಬರ್ 1ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.
'ಛಾವಾ' ಐತಿಹಾಸಿಕ ಮಹಾಕಾವ್ಯ ಚಿತ್ರವಾಗಲಿದೆ. ಇದರಲ್ಲಿ ಛತ್ರಪತಿ ಸಂಭಾಜಿ ಮಹಾರಾಜ್ ಪಾತ್ರದಲ್ಲಿ ವಿಕ್ಕಿ ಕೌಶಲ್ ನಟಿಸುತ್ತಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಅವರ ಪತ್ನಿ ಯೇಸುಬಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಜೋಡಿ ಒಟ್ಟಾಗಿ ಮರಾಠಾ ಯೋಧನ ಶೌರ್ಯ ಮತ್ತು ಪರಂಪರೆಯನ್ನು ದೊಡ್ಡ ಪರದೆಯ ಮೇಲೆ ಪ್ರಸ್ತುತಪಡಿಸುತ್ತಿದ್ದಾರೆ. ಲಕ್ಷ್ಮಣ್ ಉಟೇಕರ್ ನಿರ್ದೇಶನದ, ಪ್ರಚಂಡ ಯುದ್ಧದ ದೃಶ್ಯಗಳು ಮತ್ತು ಭಾವನೆ ತುಂಬಿದ ಕ್ಷಣಗಳ ಕಥೆಯನ್ನು 'ಛಾವಾ'ದಲ್ಲಿ ತೋರಿಸಲಾಗುತ್ತಿದೆ. ಡಿಸೆಂಬರ್ 6ರಂದು ಈ ಸಿನಿಮಾ ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ.