ಸಹೋದರಿ ಪರಿಣಿತಿ ಚೋಪ್ರಾ ಮತ್ತು ತಾಯಿ ಮಧು ಚೋಪ್ರಾ ಜೊತೆ ನೃತ್ಯ ಮಾಡಿದ ಪ್ರಿಯಾಂಕ.
ಜೋದ್ಪುರದ ಉಮ್ಮೆದ್ ಭವನ್ ಪ್ಯಾಲೇಸ್ ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾದ ಬಳಿಕ ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಹಾಗೂ ಅಮೇರಿಕಾದ ಗಾಯಕ ನಿಕ್ ಜೋನಾಸ್ ಭಾನುವಾರ ಭಾರತೀಯ ಸಂಪ್ರದಾಯದಂತೆ ವಿವಾಹವಾದರು.
ಮಾಧ್ಯಮ ವರದಿಗಳ ಪ್ರಕಾರ ಪ್ರಿಯಾಂಕಾ ಮತ್ತು ನಿಕ್ ಸೆಲೆಬ್ರಿಟಿಗಳ ವಿವಾಹದಲ್ಲಿ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಸೇರಿದಂತೆ ಒಟ್ಟು 80 ಅತಿಥಿಗಳು ಹಾಜರಿದ್ದರು.
ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಸ್ ಅವರ ವಿವಾಹ ಸಮಾರಂಭದಲ್ಲಿ ಮುಖೇಶ್ ಅಂಬಾನಿ ಪತ್ನಿ ನೀತಾ ಅಂಬಾನಿ ಅವರೊಂದಿಗೆ ಭಾಗಿಯಾಗಿದ್ದರು.
ಪ್ರಿಯಾಂಕಾ ಮತ್ತು ನಿಕ್ ವಿವಾಹ ಸಮಾರಂಭದಲ್ಲಿ ಮಸ್ತ್ ಡಾನ್ಸ್ ಆಯೋಜಿಸಲಾಗಿತ್ತು. ಆ ಸಮಯದಲ್ಲಿ ನಿಕ್ ಹೆಜ್ಜೆ ಹಾಕುತ್ತಾ ಕಾರ್ಯಕ್ರಮವನ್ನು ಸಾಕಷ್ಟು ಎಂಜಾಯ್ ಮಾಡಿದ್ದಾರೆ.
ನಿಕ್ ಮತ್ತು ಪ್ರಿಯಾಂಕ ಕುಟುಂಬದ ನಡುವೆ ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು.
ಪ್ರಿಯಾಂಕ ಚೋಪ್ರಾ ತನ್ನ ತಾಯಿ ಮಧು ಚೋಪ್ರಾ ಜೊತೆ ಹೆಜ್ಜೆ ಹಾಕಿದರು.
ಮಾಹಿತಿ ಪ್ರಕಾರ ಜೋದ್ಪುರದಲ್ಲಿ ವಿವಾಹವಾದ ಬಳಿಕ ಈ ದಂಪತಿಯ ಆರತಕ್ಷತೆ ಮುಂಬೈ ಮತ್ತು ದೆಹಲಿಯಲ್ಲಿ ಆಯೋಜಿಸಲಾಗಿದೆ.
ದೆಹಲಿಯಲ್ಲಿ ನಡೆಯಲಿರುವ ಈ ಜೋಡಿಯ ಆರತಕ್ಷತೆ ಸಮಾರಂಭಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಬರುವ ನಿರೀಕ್ಷೆಯಿದೆ ಎನ್ನಲಾಗಿದೆ.
ವರದಿಗಳ ಪ್ರಕಾರ, ಪ್ರಿಯಾಂಕ ಚೋಪ್ರ ಮತ್ತು ನಿಕ್ ಜೊನಸ್ ಅವರ ವಿವಾಹ ಮಂಟಪವನ್ನು ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿತ್ತು.
ವಿಶೇಷ ರೀತಿಯಲ್ಲಿ ಅಲಂಕರಿಸಲ್ಪಟ್ಟಿದ್ದ ಈ ಮಂಟಪದ ಎತ್ತರ ಸುಮಾರು 40 ಅಡಿಗಳು ಎನ್ನಲಾಗಿದೆ.
ಅರಮನೆಯ ಪ್ಲಾಜಾ ಪ್ರದೇಶದಲ್ಲಿ ಮಂಟಪವನ್ನು ನಿರ್ಮಿಸಲಾಗಿತ್ತು, ಅಲ್ಲಿ ಬೆಂಗಳೂರಿನ ಪಂಡಿತ್ ಚಂದ್ರಶೇಖರ್ ಶರ್ಮಾ ನೇತೃತ್ವದ 11 ಪಂಡಿತರು ಮದುವೆಯ ಮಂತ್ರ ಹೇಳಿದರು.