March 27 ರಂದು ಗ್ರಹಗಳ ರಾಜಕುಮಾರನ ಉದಯ, 3 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ!

Budh Rise 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಬರುವ ಮಾರ್ಚ್ 27 ರಂದು ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧದೇವನ ಉದಯ ನೆರವೇರಲಿದೆ. ಇದು ಒಟ್ಟು ಮೂರು ರಾಶಿಗಳ ಜನರ ಪಾಲಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ ಮತ್ತು ಅವರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Budh Uday 2023 In Pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ಗ್ರಹಗಳು ಕಾಲಕಾಲಕ್ಕೆ ಅಸ್ತಮಿಸುತ್ತವೆ ಮತ್ತು ಉದಯಿಸುತ್ತವೆ. ಇದು ಭೂಮಿಗಳ ಮೇಲಿರುವ ಸಕಲ ಚರಾಚರಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಬೀರುತ್ತದೆ. ವ್ಯಾಪಾರ ಹಾಗೂ ಬುದ್ಧಿದಾತ ಮತ್ತು ಗ್ರಹಗಳ ರಾಜಕುಮಾರ ಎಂದೇ ಕರೆಯಲಾಗುವ ಬುಧ ಮಾರ್ಚ್ 27 ರಂದು ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಇದು ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಭಾರಿ ಸಕಾರಾತ್ಮಕ ಪ್ರಃಬಾವ ಬೀರಲಿದ್ದು, ಈ ಅವಧಿಯಲ್ಲಿ ಈ ಜಾತಕದವರಿಗೆ ಭಾರಿ ಧನಲಾಭ ಮತ್ತು ಎಲ್ಲಾ ಕ್ಷೇತ್ರಗಳಲ್ಲಿ ಕಾರ್ಯಸಿದ್ದಿ-ಉನ್ನತಿಯ ಯೋಗವನ್ನು ರೂಪಿಸುತ್ತಿದೆ.

 

ಇದನ್ನೂ ಓದಿ-March 22 ವಿಕ್ರಮ ಸಂವತ್ಸರ 2080 ಆರಂಭ 4 ರಾಶಿಗಳ ಜನರ ಬ್ಯಾಂಕ್ ಬ್ಯಾಲೆನ್ಸ್ ಅಪಾರ ಹೆಚ್ಚಿಸಲಿದೆ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /3

ಧನು ರಾಶಿ- ನವಗ್ರಹಗಳ ರಾಜಕುಮಾರಣ ಉದಯ ಧನು ರಾಶಿಯ ಜನರಿಗೆ ಪ್ರಯೋಜನಕಾರಿ ಸಾಬೀತಾಗಲಿದೆ. ಏಕೆಂದರೆ ಬುಧ ಗ್ರಹವು ನಿಮ್ಮ ಜಾತಕದಲ್ಲಿ ಚತುರ್ಥೇಶನಾಗಲಿದ್ದಾನೆ. ಇದರಿಂದಾಗಿ ನೀವು ಈ ಅವಧಿಯಲ್ಲಿ ಅಪಾರ ದೈಹಿಕ ಸಂತೋಷವನ್ನು ಪಡೆಯಬಹುದು. ಅಲ್ಲದೆ, ಈ ಅವಧಿಯಲ್ಲಿ ನೀವು ವಾಹನ ಮತ್ತು ಆಸ್ತಿಯನ್ನು ಖರೀದಿಸಬಹುದು. ವಿವಿಧ ಕ್ಷೇತ್ರಗಳಲ್ಲಿ ನಿಮಗೆ ನಿಮ್ಮ ತಾಯಿಯ ಬೆಂಬಲ ಪ್ರಾಪ್ತಿಯಾಗಲಿದೆ. ಅಲ್ಲದೆ, ನಿಮ್ಮ ವ್ಯವಹಾರವು ಆಸ್ತಿ, ಆಹಾರ ಮತ್ತು ರಿಯಲ್ ಎಸ್ಟೇಟ್ಗೆ ಸಂಬಂಧಿಸಿದ್ದರೆ, ಈ ಸಮಯದಲ್ಲಿ ನೀವು ವ್ಯವಹಾರದಲ್ಲಿ ಉತ್ತಮ ಯಶಸ್ಸನ್ನು ಪಡೆಯಬಹುದು. ಮತ್ತೊಂದೆಡೆ, ಬುಧ ಗ್ರಹದ ದೃಷ್ಟಿ ನಿಮ್ಮ ಜಾತಕದ ಹತ್ತನೇ ಭಾವದ ಮೇಲಿರಲಿದೆ. ಹೀಗಾಗಿ ಈ ಸಮಯದಲ್ಲಿ ಉದ್ಯಮಿಗಳು ಉತ್ತಮ ಲಾಭವನ್ನು ಪಡೆಯಬಹುದು.  

2 /3

ಕರ್ಕ ರಾಶಿ- ಬುಧ ಗ್ರಹದ ಉದಯ ಕರ್ಕ ರಾಶಿಯವರಿಗೆ ಮಂಗಳಕರ ಮತ್ತು ಫಲಪ್ರದ ಸಾಬೀತಾಗಲಿದೆ. ಏಕೆಂದರೆ ಬುಧ ಗ್ರಹ ನಿಮ್ಮ ಜಾತಕದ ಅದೃಷ್ಟ ಭಾವದಲ್ಲಿ ಉದಯಿಸಲಿದ್ದಾನೆ. ಹೀಗಾಗಿ ನೀವು ಈ ಅವಧಿಯಲ್ಲಿ ಅಪಾರ  ಅದೃಷ್ಟವನ್ನು ಪಡೆಯಬಹುದು. ವ್ಯಾಪಾರಸ್ಥರು ಉತ್ತಮ ಲಾಭ ಗಳಿಸಬಹುದು. ನೀವು ಆಸ್ತಿಯನ್ನು ಸಹ ಖರೀದಿಸಬಹುದು. ಇದೇ ವೇಳೆ ವಿದೇಶ ಪ್ರವಾಸದ ಅವಕಾಶಗಳೂ ಸೃಷ್ಟಿಯಾಗುತ್ತಿವೆ. ಈ ಸಮಯವು ವಿದ್ಯಾರ್ಥಿಗಳಿಗೆ ಮಂಗಳಕರವಾಗಿರುತ್ತದೆ.  ಯಾವುದೇ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿದೆ. ಅಲ್ಲದೆ, ಈ ಸಮಯದಲ್ಲಿ ನೀವು ಯಾವುದೇ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಬಹುದು.  

3 /3

ವೃಶ್ಚಿಕ ರಾಶಿ- ಬುಧ ಗ್ರಹದ ಉದಯವು ನಿಮಗೆ ಅನುಕೂಲಕರ ಸಾಬೇತಾಗಲಿದೆ. ಏಕೆಂದರೆ ಬುಧ ಗ್ರಹವು ನಿಮ್ಮ ರಾಶಿಯಿಂದ ಪಂಚಮ ಭಾವದಲ್ಲಿ ಉದಯಿಸಲಿದೆ. ಇದು ಸಂತಾನ, ಪ್ರೇಮ ವಿವಾಹ ಮತ್ತು ಪ್ರಗತಿಯ ಸ್ಥಾನ ಎಂದು ಜೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹೀಗಾಗಿ, ಈ ಸಮಯದಲ್ಲಿ ನೀವು ಉನ್ನತ ಶಿಕ್ಷಣದಲ್ಲಿ ಅನುಕೂಲಕರ ಫಲಿತಾಂಶಗಳನ್ನು ಪಡೆಯಬಹುದು. ಇದರೊಂದಿಗೆ, ನೀವು ಪ್ರೀತಿ-ಸಂಬಂಧದಲ್ಲಿ ಯಶಸ್ಸನ್ನು ಪಡೆಯಬಹುದು. ಸಮಾಜದಲ್ಲಿ ನಿಮಗೆ ಘನತೆ-ಗೌರವ ಹೆಚ್ಚಾಗಲಿದೆ. ಕೆಲಸದ ಸ್ಥಳದಲ್ಲಿ ಪ್ರಗತಿ ಸಾಧಿಸಬಹುದು. ಇದರೊಂದಿಗೆ ಹಠಾತ್ ಧನಲಾಭದ ಸಾಧ್ಯತೆಗಳೂ ಸೃಷ್ಟಿಯಾಗುತ್ತಿವೆ. ಆದರೆ, ನೀವು ನಿಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಸಾಗಬೇಕು. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)