PM Modi Bandipur Visit: ಓಪನ್ ಜೀಪಿನಲ್ಲಿ ʻನಮೋʼ ಸಫಾರಿ.. ಪ್ರಧಾನಿಗೆ ಹುಲಿ ದರ್ಶನ!

PM Modi Bandipur Visit: ಹುಲಿ ಯೋಜನೆ ಸುವರ್ಣ ಮಹೋತ್ಸವ ಹಿನ್ನೆಲೆಯಲ್ಲಿ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು ಓಪನ್ ಜೀಪ್ ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ.

PM Modi Bandipur Visit: ಇಂದು ಬೆಳಗ್ಗೆ ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ವನ್ಯಜೀವಿ ಸಫಾರಿ ನಡೆಸಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಮೇಲುಕಾಮನಹಳ್ಳಿ ಸಮೀಪ ನಿರ್ಮಿಸಿರುವ ಹೆಲಿಪ್ಯಾಡ್ ನಲ್ಲಿ ಬಂದಿಳಿದ ಪಿಎಂ ಮೋದಿ, ಎಸ್ ಪಿಜಿ ಭದ್ರತೆಯೊಂದಿಗೆ ಸಫಾರಿ ವಾಹನವೇರಿ ಕಾಡಲ್ಲಿ ಸುತ್ತಾಡಿದ್ದಾರೆ. 

1 /5

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬಂಡೀಪುರಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ಕೊಟ್ಟಿದ್ದು ಓಪನ್ ಜೀಪ್ ನಲ್ಲಿ ವನ್ಯಜೀವಿ ಸಫಾರಿ ನಡೆಸಿದ್ದಾರೆ.

2 /5

ಓಪನ್ ಜೀಪಿನಲ್ಲಿ ಸಫಾರಿ ನಡೆಸಿರುವ ನರೇಂದ್ರ ಮೋದಿ ಟೋಪಿ, ಗಾಗಲ್ಸ್ ಜೊತೆಗೆ ಸಫಾರಿ ದಿರಿಸಿನಲ್ಲಿ ಕಾಡಿನಲ್ಲಿ ಮಿಂಚಿದ್ದಾರೆ‌. 

3 /5

ಒಟ್ಟು 9 ವಾಹನಗಳು ಪ್ರಧಾನಿ ಅವರ ಜೊತೆಗಿದ್ದು ಸದ್ಯ ಸಫಾರಿ ಮುಗಿಸಿ ತಮಿಳುನಾಡಿನ ತೆಪ್ಪಕಾಡಿಗೆ ಭೇಟಿ ಕೊಡುತ್ತಿದ್ದಾರೆ.

4 /5

ಸಫಾರಿ ವೇಳೆ ಹುಲಿಯನ್ನು ಮೋದಿ ನೋಡಿದರು ಎಂದು ತಿಳಿದುಬಂದಿದೆ. 

5 /5

ತೆಪ್ಪಕಾಡಿನಲ್ಲಿ ಬೊಮ್ಮ-ಬೆಳ್ಳಿ ದಂಪತಿಯನ್ನು ಮೋದಿ ಭೇಟಿ ಮಾಡಿ ಸನ್ಮಾನಿಸಲಿದ್ದಾರೆ.