Vastu Tips: ಕೆಲಸದ ಸ್ಥಳ ವಾಸ್ತು ಪ್ರಕಾರವಿದ್ದರೆ ಶ್ರೀಮಂತಿಕೆ, ವ್ಯವಹಾರದಲ್ಲಿ ಯಶಸ್ಸು ಸಿಗಲಿದೆ

ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವಿದ್ದರೆ ವ್ಯಾಪಾರದಲ್ಲಿ ಲಾಭ, ಶ್ರೀಮಂತಿಕೆ ಲಭಿಸುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ ಕೆಲಸದ ಸ್ಥಳವು ವಾಸ್ತು ಪ್ರಕಾರ(Vastu Tips For Working Place)ವಾಗಿದ್ದರೆ ನಂತರ ಯಶಸ್ಸು ಮುಂದುವರಿಯುತ್ತದೆ. ಮತ್ತೊಂದೆಡೆ ಕೆಲಸದ ಸ್ಥಳವು ವಾಸ್ತು ಪ್ರಕಾರವಿಲ್ಲದಿದ್ದರೆ, ವ್ಯಾಪಾರದ ಮೇಲೆ ಹಿಮ್ಮುಖ ಪರಿಣಾಮ ಉಂಟಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ವಾಸ್ತು ಪ್ರಕಾರ ಕೆಲಸದ ಸ್ಥಳವನ್ನು ಹೇಗೆ ಇಡಬೇಕೆಂದು ತಿಳಿದುಕೊಳ್ಳಬೇಕು. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣವಿದ್ದರೆ ವ್ಯಾಪಾರದಲ್ಲಿ ಲಾಭ, ಶ್ರೀಮಂತಿಕೆ ಲಭಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ವಾಸ್ತು ಶಾಸ್ತ್ರದ ಪ್ರಕಾರ ಪಶ್ಚಿಮ ಅಥವಾ ದಕ್ಷಿಣಾಭಿಮುಖವಾಗಿರುವ ಸ್ಥಳಗಳು ಆಹಾರ ಸೇವಿಸಲು ಮತ್ತು ಕುಡಿಯಲು ಒಳ್ಳೆಯದು. ಆಹಾರ ಮತ್ತು ಪಾನೀಯದ ವ್ಯವಹಾರವು ಈ ದಿಕ್ಕಿನಲ್ಲಿ ಸಾಕಷ್ಟು ಪ್ರಗತಿ ಸಾಧಿಸುತ್ತದೆ.  

2 /5

ಆಗ್ನೇಯಕ್ಕೆ ಎದುರಾಗಿರುವ ಸ್ಥಳಗಳು ಮಹಿಳೆಯರ ಉಡುಪುಗಳಿಗೆ ಸಂಬಂಧಿಸಿದ ಕೆಲಸಕ್ಕೆ ಒಳ್ಳೆಯದು. ಇದಲ್ಲದೆ ಈಶಾನ್ಯ ದಿಕ್ಕು ಮನರಂಜನೆಗೆ ಸಂಬಂಧಿಸಿದ ಕೆಲಸಗಳಿಗೆ ಮಂಗಳಕರವಾಗಿದೆ. 

3 /5

ವಾಸ್ತು ಶಾಸ್ತ್ರದ ಪ್ರಕಾರ ವ್ಯಾಪಾರ ಮಾಡುವ ಸ್ಥಳದಲ್ಲಿ ಕುಳಿತುಕೊಳ್ಳುವ ಸ್ಥಳವು ನೈಋತ್ಯ ದಿಕ್ಕಿನಲ್ಲಿರಬೇಕು. ಇದರಿಂದಾಗಿ ವ್ಯಾಪಾರ ಬೆಳೆಯುತ್ತಲೇ ಇರುತ್ತದೆ.

4 /5

ವ್ಯಾಪಾರದ ಸ್ಥಳದಲ್ಲಿ ಪೂಜೆಗೆ ಈಶಾನ್ಯ ದಿಕ್ಕು ಉತ್ತಮವಾಗಿದೆ. ಇದಲ್ಲದೆ ಈ ಸ್ಥಳವು ಭೇಟಿಯಾಗುವ ಸಂದರ್ಭಕ್ಕೆ ಸೂಕ್ತವಾಗಿದೆ. ಇಲ್ಲಿನ ಗೋಡೆಗಳಿಗೆ ತಿಳಿ ಬಣ್ಣಗಳನ್ನು ಬಳಸಬೇಕು.

5 /5

ನೀವು ವ್ಯಾಪಾರ ಮಾಡಲು ಹೋಗುವ ಸ್ಥಳವು ನೈಋತ್ಯದಲ್ಲಿ ಇರಬಾರದು. ಇದರೊಂದಿಗೆ ಕೆಲಸದ ಸ್ಥಳದಲ್ಲಿ ವಾಯುವ್ಯ ಸ್ಥಳದಲ್ಲಿ ಸರಕುಗಳನ್ನು ಸಿದ್ಧಪಡಿಸಬೇಕು. ಅಲ್ಲದೆ ಉತ್ತರದಿಂದ ಪೂರ್ವಕ್ಕೆ ಸ್ಥಳವು ಸಂಪೂರ್ಣವಾಗಿ ಸ್ವಚ್ಛವಾಗಿರಬೇಕು. (ಗಮನಿಸಿರಿ: ಇಲ್ಲಿ ನೀಡಲಾಗಿರುವ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)