ಮುಂಬೈ: ಮಳೆಯಿಂದಾಗಿ ಆಸ್ಪತ್ರೆ ತಲುಪಲಾಗದ ಮಹಿಳೆ, ನಿಲ್ದಾಣದಲ್ಲಿ ಮಗುವಿಗೆ ಜನ್ಮ

ಮುಂಬೈನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ನಗರದ ಸ್ಥಿತಿ ಹದಗೆಟ್ಟಿದೆ.
 

  • Jul 03, 2019, 13:33 PM IST

ರಸ್ತೆ, ಪಾರ್ಕ್, ಮನೆ ಎಲ್ಲೆಲ್ಲೂ ನೀರೇ, ನೀರು. ಇದು ಭಾರೀ ಮಳೆಗೆ ತತ್ತರಿಸಿರುವ ವಾಣಿಜ್ಯ ನಗರಿ ಪರಿಸ್ಥಿತಿ. ಈ ಮಳೆ ಅವಾಂತರದಿಂದಾಗಿ ಜನರು ಆಸ್ಪತ್ರೆಗೆ ತಲುಪುವುದು ಕೂಡ ಕಷ್ಟವಾಗಿದೆ.

1 /4

ಏತನ್ಮಧ್ಯೆ, ಮಳೆಯ ಕಾರಣದಿಂದ ಆಸ್ಪತ್ರೆ ತಲುಪಲಾಗದ ಮಹಿಳೆಯೊಬ್ಬರು ಡೊಂಬಿವ್ಲಿ ರೈಲ್ವೆ ನಿಲ್ದಾಣದಲ್ಲಿ ಮಗುವಿಗೆ ಜನ್ಮ ನೀಡಿದರು. ನಿಲ್ದಾಣದಲ್ಲಿದ್ದ ವೈದ್ಯರು ಮತ್ತು ದಾದಿ ಮಹಿಳೆಯ ಹೆರಿಗೆಗೆ ಸಹಾಯ ಮಾಡಿದರು.

2 /4

ಮಾಹಿತಿ ಪ್ರಕಾರ, 29 ವರ್ಷದ ಗರ್ಭಿಣಿ ಮಹಿಳೆ ತಪಾಸಣೆಗಾಗಿ ಕ್ಯಾಮಾ ಆಸ್ಪತ್ರೆಗೆ ತೆರಳುತ್ತಿದ್ದ ಮಹಿಳೆಗೆ ಡೊಂಬಿವ್ಲಿ ನಿಲ್ದಾಣದಲ್ಲಿ ಹೆರಿಗೆ ನೋವು ಕಾಣಿಸಿಕೊಂಡಿತು. ಸ್ಥಳದಲ್ಲಿದ್ದ ಜನರು ನಿಲ್ದಾಣದ ಸಿಬ್ಬಂದಿಗೆ  ಈ ಮಾಹಿತಿಯನ್ನು ನೀಡಿದರು.

3 /4

ನಂತರ 'ಒಂದು ರೂಪಾಯಿ ಚಿಕಿತ್ಸಾಲಯ'ದ ವೈದ್ಯರು ಮತ್ತು ದಾದಿಯರು ಮಹಿಳೆಗೆ ಸುರಕ್ಷಿತ ಹೆರಿಗೆಯನ್ನು ನಡೆಸಿದರು. ಮಾಹಿತಿಯ ಪ್ರಕಾರ, ತಾಯಿ-ಮಗು ಆರೋಗ್ಯವಾಗಿದ್ದಾರೆ. 'ಒಂದು ರೂಪಾಯಿ ಕ್ಲಿನಿಕ್' ಮುಂಬೈನ ಎಲ್ಲಾ ಪ್ರಮುಖ ರೈಲ್ವೆ ನಿಲ್ದಾಣಗಳಲ್ಲಿ ಆರೋಗ್ಯ ಸೇವೆಗಳನ್ನು ಒದಗಿಸುತ್ತದೆ. ಇದಕ್ಕಾಗಿ ರೋಗಿಗಳು 1 ರೂ. ಮಾತ್ರ ನೀಡಬೇಕು.

4 /4

ಹೆರಿಗೆಯ ಬಳಿಕ ತಾಯಿ-ಮಗು ಆರೋಗ್ಯವಾಗಿದ್ದಾರೆ. ಆದರೆ ಪ್ರಾಥಮಿಕ ಚಿಕಿತ್ಸೆಯ ನಂತರ ಮಹಿಳೆಯನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.