Post Office Scheme: ತೆರಿಗೆ ಮುಕ್ತ ಎಫ್ಡಿಗಿಂತ ಉತ್ತಮ ಬಡ್ಡಿ ಕೊಡುತ್ತೇ ಈ ಅಂಚೆ ಕಚೇರಿ ಯೋಜನೆ, ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದು

Post Office Scheme: ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ ಡಬಲ್ ಪ್ರಯೋಜನ ನೀಡುವ (post office scheme to double the money) ಯೋಜನೆಗಳಲ್ಲಿ ಒಂದಾಗಿದೆ. ಇದರಲ್ಲಿ, ನೀವು ತೆರಿಗೆ ಮುಕ್ತ ಎಫ್‌ಡಿಗಿಂತ ಉತ್ತಮ ಬಡ್ಡಿ ಪಡೆಯುತ್ತೀರಿ ಮತ್ತು ನಿಮ್ಮ ಆದಾಯ ತೆರಿಗೆಯನ್ನು ಸಹ ಇದರಲ್ಲಿ ಉಳಿತಾಯ ಮಾಡಬಹುದು. ಈ ಸೂಪರ್‌ಹಿಟ್ ಯೋಜನೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆದುಕೊಳ್ಳೋಣ ಬನ್ನಿ (Business News In Kannada)
 

Post Office NSC Scheme: ಸಾಮಾನ್ಯವಾಗಿ 5 ವರ್ಷಗಳು ಅಥವಾ ಅದಕ್ಕಿಂಗ ಹೆಚ್ಚಿನ ಅವಧಿಯ FD ಅನ್ನು ತೆರಿಗೆ ಮುಕ್ತ FD ಎಂದು ಕರೆಯಲಾಗುತ್ತದೆ. ತೆರಿಗೆ ಉಳಿತಾಯ ಮಾಡಲು ಬಹುತೇಕ ಜನರು ಈ ಎಫ್‌ಡಿಯಲ್ಲಿ (Tax Free Fixed Deposit) ಹೂಡಿಕೆ ಮಾಡುತ್ತಾರೆ. ಆದರೆ ಪೋಸ್ಟ್ ಆಫೀಸ್ ಯೋಜನೆಯೊಂದು ಕೂಡ  ನಿಮ್ಮ ತೆರಿಗೆಯನ್ನು ಉಳಿಸುತ್ತದೆ ಮತ್ತು 5 ವರ್ಷಗಳ FD (Fixed Deposit) ಗಿಂತ ಉತ್ತಮ ಬಡ್ಡಿಯನ್ನು ನೀಡುತ್ತದೆ. ನಾವು ಪೋಸ್ಟ್ ಆಫೀಸ್‌ನ ರಾಷ್ಟ್ರೀಯ ಉಳಿತಾಯ (National Saving Certiificate) ಪ್ರಮಾಣಪತ್ರದ ಬಗ್ಗೆ ಮಾತನಾಡುತ್ತಿದ್ದೇವೆ, ಇದು ಎಫ್‌ಡಿಯಂತಹ ಠೇವಣಿ ಯೋಜನೆಯಾಗಿದ್ದು ಇದರಲ್ಲಿ 5 ವರ್ಷಗಳವರೆಗೆ ಹಣವನ್ನು ಠೇವಣಿ ಇರಿಸಲಾಗುತ್ತದೆ. ಪ್ರಸ್ತುತ, ಈ ಯೋಜನೆಯಲ್ಲಿ ಶೇಕಡಾ 7.7 ರ ದರದಲ್ಲಿ ಬಡ್ಡಿ ಸಿಗುತ್ತಿದೆ. ಈ ಯೋಜನೆಯ ವಿಶಿಷ್ಟತೆಗಳು ಏನು ತಿಳಿದುಕೊಳ್ಳೋಣ ಬನ್ನಿ, (Business News In Kannada)

 

ಇದನ್ನೂ ಓದಿ-Holi 2024 Gift: ಎರಡು ಕೋಟಿ ಜನರಿಗೆ ಉಚಿತ ಗ್ಯಾಸ್ ಸಿಲಿಂಡರ್, ಯಾವ ಸ್ಕೀಮ್, ಯಾರಿಗೆ ಲಾಭ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

1. ತೆರಿಗೆ ಮುಕ್ತ ಎಫ್‌ಡಿಯಲ್ಲಿ ಎಲ್ಲಿ ಮತ್ತು ಎಷ್ಟು ಬಡ್ಡಿ ಸಿಗುತ್ತದೆ: ಪೋಸ್ಟ್ ಆಫೀಸ್ - ಶೇ. 7.5 ರಷ್ಟು ಬಡ್ಡಿ ಸಿಗುತ್ತದೆ, ಸ್ಟೇಟ್ ಬ್ಯಾಂಕ್ - ಶೇ. 6.5 ಬಡ್ಡಿ ಸಿಗುತ್ತದೆ, ಪಂಜಾಬ್ ನ್ಯಾಷನಲ್ ಬ್ಯಾಂಕ್ - ಶೇ. 6.5 ಬಡ್ಡಿ ಸಿಗುತ್ತದೆ, ಬ್ಯಾಂಕ್ ಆಫ್ ಇಂಡಿಯಾ - ಶೇ. 6.5 ಬಡ್ಡಿ ಸಿಗುತ್ತದೆ, HDFC - ಶೇ. 7 ರಷ್ಟು ಬಡ್ಡಿ ಸಿಗುತ್ತದೆ, ICICI - ಶೇ. 7 ರಷ್ಟು ಬಡ್ಡಿ ಸಿಗುತ್ತಿದೆ.   

2 /6

2. ನೀವು ನಿಮ್ಮ ಮಗುವಿನ ಹೆಸರಿನಲ್ಲೂ ಕೂಡ NSC ಯಲ್ಲಿ ಹೂಡಿಕೆ ಮಾಡಬಹುದು: ಯಾವುದೇ ಭಾರತೀಯ ನಾಗರಿಕರು ಅಂಚೆ ಕಛೇರಿಯ ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರದಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಮಗುವಿನ ಹೆಸರಿನಲ್ಲಿ ಖಾತೆಯನ್ನು ತೆರೆಯಲು ನೀವು ಬಯಸಿದರೆ, ಇದರಲ್ಲಿ ನೀವು ಖಾತೆಯನ್ನು ತೆರೆಯಬಹುದು. ಇದೇ ವೇಳೆ, 10 ವರ್ಷಕ್ಕಿಂತ ಮೇಲ್ಪಟ್ಟ ಮಗು ತನ್ನ ಸ್ವಂತ ಹೆಸರಿನಲ್ಲಿ NSC ಅನ್ನು ಸಹ ಖರೀದಿಸಬಹುದು. ಎರಡರಿಂದ ಮೂರು ಜನರು ಜಂಟಿ ಖಾತೆಯನ್ನು ಕೂಡ ತೆರೆಯಬಹುದು.  

3 /6

3. ನೀವು ಎಷ್ಟು ಹೂಡಿಕೆ ಮಾಡಬಹುದು?: ನೀವು ಎನ್‌ಎಸ್‌ಸಿಯಲ್ಲಿ ಕನಿಷ್ಠ ರೂ 1000 ಮತ್ತು ನಂತರ ರೂ 100 ರ ಗುಣಕಗಳಲ್ಲಿ ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ಮಿತಿಯಿಲ್ಲ. ಈ ಯೋಜನೆಯು ಕೇವಲ 5 ವರ್ಷಗಳಲ್ಲಿ ಮಾಚ್ಯೂರ್ ಆಗುತ್ತದೆ. ವಾರ್ಷಿಕ ಆಧಾರದ ಮೇಲೆ ಬಡ್ಡಿಯನ್ನು (nsc scheme interest rate) ಸಂಯೋಜಿಸಲಾಗುತ್ತದೆ ಮತ್ತು ಖಾತರಿ ಆದಾಯ ಇದರಲ್ಲಿ ಲಭ್ಯವಿದೆ. ನಿಮ್ಮ ಹೂಡಿಕೆಯ ಸಮಯದಲ್ಲಿ ಅನ್ವಯವಾಗುವ ಬಡ್ಡಿದರದ ಪ್ರಕಾರ 5 ವರ್ಷಗಳ ಬಡ್ಡಿ ದರವನ್ನು ಲೆಕ್ಕಹಾಕಲಾಗುತ್ತದೆ. ಈ ಮಧ್ಯೆ ಬಡ್ಡಿದರ ಬದಲಾದರೂ ಅದು ನಿಮ್ಮ ಖಾತೆಯ ಮೇಲೆ ಪರಿಣಾಮ ಬೀರುವುದಿಲ್ಲ.  

4 /6

5. ತೆರಿಗೆ ವಿನಾಯಿತಿ ಸಿಗುತ್ತದೆ: ಎನ್‌ಎಸ್‌ಸಿಯಲ್ಲಿ ಠೇವಣಿ ಮಾಡಿದ ಮೊತ್ತದ ಮೇಲೆ ಸೆಕ್ಷನ್ 80 ಸಿ ಅಡಿಯಲ್ಲಿ ತೆರಿಗೆ ವಿನಾಯಿತಿ ಲಭ್ಯವಿದೆ, ಅಂದರೆ, ಪ್ರತಿ ವರ್ಷ ರೂ 1.50 ಲಕ್ಷದವರೆಗಿನ ಠೇವಣಿಗಳ ಮೇಲೆ ತೆರಿಗೆ ವಿನಾಯಿತಿ ಪಡೆಯಬಹುದು. ಆದಾಗ್ಯೂ, ಇತರ ಯೋಜನೆಗಳಂತೆ, ಈ ಯೋಜನೆಯಲ್ಲಿ 5 ವರ್ಷಗಳ ಮೊದಲು ಯಾವುದೇ ಭಾಗಶಃ ಹಿಂಪಡೆಯಲು ಸಾಧ್ಯವಿಲ್ಲ. ಅಂದರೆ, 5 ವರ್ಷಗಳ ನಂತರ ಮಾತ್ರ ನೀವು ಸಂಪೂರ್ಣ ಮೊತ್ತವನ್ನು ಒಂದೇ ಬಾರಿಗೆ ಪಡೆಯಬೇಕು.   

5 /6

5. ಅಕಾಲಿಕ ಖಾತೆ ಮೊಟಕುಗೊಳಿಸುವಿಕೆಯ ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾಡಬಹುದ: ಒಂದೇ ಖಾತೆ ಅಥವಾ ಜಂಟಿ ಖಾತೆಯಲ್ಲಿ ಯಾವುದೇ ಅಥವಾ ಎಲ್ಲಾ ಖಾತೆದಾರರ ಮರಣದ ನಂತರ ಇದು ಸಾಧ್ಯ, ಅಡಮಾನದಾರನು ಗೆಜೆಟೆಡ್ ಅಧಿಕಾರಿಯಾಗಿ ವಶಪಡಿಸಿಕೊಂಡ ಮೇಲೆ, ನ್ಯಾಯಾಲಯದ ಆದೇಶದ ಮೇರೆಗೆ,   

6 /6

6. ವಿಸ್ತರಣೆ ನಿಯಮಗಳು : ಮ್ಯಾಚ್ಯೂರಿಟಿ ಬಳಿಕವೂ ನೀವು ಮುಂದಿನ 5 ವರ್ಷಗಳ ಕಾಲ ಎನ್‌ಎಸ್‌ಸಿಯನ್ನು ಮುಂದುವರಿಸಲು ಬಯಸಿದರೆ, ನೀವು ಅದಕ್ಕೆ ಮತ್ತೆ ಅರ್ಜಿ ಸಲ್ಲಿಸಬೇಕು. ಇಂತಹ ಪರಿಸ್ಥಿತಿಯಲ್ಲಿ, ಅದನ್ನು ಹೊಸ ದಿನಾಂಕದ ಠೇವಣಿ ಎಂದು ಪರಿಗಣಿಸಲಾಗುತ್ತದೆ ಮತ್ತು ಆ ದಿನಾಂಕದಂದು ತೆಗೆದುಕೊಂಡ ಹೊಸ ಪ್ರಮಾಣಪತ್ರದ ಬಡ್ಡಿಯ ಪ್ರಕಾರ ಅದರ ಮೇಲಿನ ಬಡ್ಡಿಯ ಲಾಭವೂ ಸಿಗುತ್ತದೆ.