Post Office Scheme: ಈ ಯೋಜನೆಯಲ್ಲಿ ದಿನಕ್ಕೆ 95 ರೂ. ಹೂಡಿಕೆ ಮಾಡಿ 14 ಲಕ್ಷ ರೂ. ಪಡೆಯಿರಿ

ಭಾರತೀಯ ಅಂಚೆ ಇಲಾಖೆಯು ದೇಶದ ಹೂಡಿಕೆದಾರರಿಗೆ ಅನೇಕ ಅತ್ಯುತ್ತಮ ಹಾಗೂ ಸುರಕ್ಷಿತ ಹೂಡಿಕೆ ಯೋಜನೆಗಳು ಜಾರಿಗೆ ತಂದಿದೆ.

ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ(Gram Sumangal Rural Postal Life Insurance Scheme)ಯನ್ನು 1995 ರಲ್ಲಿ ಅಂಚೆ ಇಲಾಖೆಯು ಪರಿಚಯಿಸಿತು. ಗ್ರಾಮ ಸುಮಂಗಲ್ ಯೋಜನೆ 15 ವರ್ಷ ಮತ್ತು 20 ವರ್ಷಗಳ ಎರಡು ಅವಧಿಗಳಿಗೆ ಲಭ್ಯವಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅನೇಕ ಸುರಕ್ಷಿತ ಹೂಡಿಕೆ ಯೋಜನೆಗಳನ್ನು ಭಾರತೀಯ ಹೂಡಿಕೆದಾರರಿಗೆ ಅಂಚೆ ಕಚೇರಿಗಳು ನೀಡುತ್ತವೆ. ಅಂತಹ ಯೋಜನೆಗಳಲ್ಲಿ ಗ್ರಾಮ ಸುಮಂಗಲ್ ಗ್ರಾಮೀಣ ಅಂಚೆ ಜೀವ ವಿಮಾ ಯೋಜನೆ ಕೂಡ ಒಂದು. ಈ ಯೋಜನೆಯಲ್ಲಿ ಪೋಸ್ಟ್ ಆಫೀಸ್ ಬಂಪರ್ ರಿಟರ್ನ್ಸ್ ಜೊತೆಗೆ ಹಲವಾರು ಇತರ ಪ್ರಯೋಜನಗಳನ್ನು ನೀಡುತ್ತದೆ.

2 /5

ಅಂಚೆ ಇಲಾಖೆಯು ಈ ಯೋಜನೆಯನ್ನು 1995 ರಲ್ಲಿ ಪರಿಚಯಿಸಿತು. ಹೂಡಿಕೆದಾರರಿಗೆ ಆಯ್ಕೆ ಮಾಡಲು 6 ವಿಭಿನ್ನ ವಿಮಾ ಯೋಜನೆಗಳಿವೆ. ಅಂತಹ ಒಂದು ಯೋಜನೆಯಲ್ಲಿ ಹೂಡಿಕೆದಾರರು ಮೆಚ್ಯೂರಿಟಿಯ ಸಮಯದಲ್ಲಿ 14 ಲಕ್ಷ ರೂ.ಗಳನ್ನು ಪ್ರತಿದಿನ ಕೇವಲ 95 ರೂ. ಹೂಡಿಕೆ ಮಾಡುವ ಮೂಲಕ ಪಡೆಯಬಹುದು.

3 /5

ಗ್ರಾಮ ಸುಮಂಗಲ್ ಪಾಲಿಸಿ 2 ಅವಧಿಗಳಿಗೆ ಲಭ್ಯವಿದೆ ಒಂದು 20 ವರ್ಷಗಳು ಮತ್ತೊಂದು 15 ವರ್ಷಗಳು. ಹೂಡಿಕೆದಾರರಿಗೆ ಗರಿಷ್ಠ ವಯಸ್ಸು 45 ವರ್ಷಗಳು ಮತ್ತು ಕನಿಷ್ಠ 19 ವರ್ಷಗಳು. 20 ವರ್ಷದ ಪಾಲಿಸಿಯಲ್ಲಿ 6, 9 ಮತ್ತು 12 ವರ್ಷಗಳ ನಂತರ ಶೇ.20-20ರಷ್ಟು ಹಣವನ್ನು ಮರಳಿ ಪಡೆಯಬಹುದು. ಶೇ.40 ಉಳಿದ ಹಣವನ್ನು ಮೆಚ್ಯೂರಿಟಿಯಲ್ಲಿ ಬೋನಸ್ ಆಗಿ ನೀಡಲಾಗುತ್ತದೆ. ಅದೇ ರೀತಿ 15 ವರ್ಷದ ಪಾಲಿಸಿಯಲ್ಲಿ ಶೇ.20-20ರಷ್ಟು ಹಣವನ್ನು 8, 12 ಮತ್ತು 16 ವರ್ಷಗಳಲ್ಲಿ ಮರಳಿ ಪಡೆಯಬಹುದು. ಶೇ.40ರಷ್ಟು ಉಳಿದ ಹಣವನ್ನು ಮೆಚ್ಯೂರಿಟಿಯಲ್ಲಿ ಬೋನಸ್ ಆಗಿ ನೀಡಲಾಗುತ್ತದೆ.

4 /5

25 ವರ್ಷ ವಯಸ್ಸಿನ ವ್ಯಕ್ತಿಯು ಪಾಲಿಸಿಯಲ್ಲಿ 20 ವರ್ಷಗಳವರೆಗೆ ಹೂಡಿಕೆ ಮಾಡಲು ಪ್ರಾರಂಭಿಸಿದರೆ 7 ಲಕ್ಷ ರೂ.ವರೆಗೆ ಸಮ್ ಅಶ್ಯೂರ್ಡ್ ಇರುತ್ತದೆ. ಪ್ರತಿ ತಿಂಗಳ ಪ್ರೀಮಿಯಂ 2,853 ರೂ. ಇರುತ್ತದೆ. ಇದು ದಿನವೊಂದಕ್ಕೆ ಕೇವಲ 95 ರೂ. ಆಗುತ್ತದೆ. 1.4 ಲಕ್ಷ ರೂ.ವನ್ನು ಹೂಡಿಕೆದಾರರು 12 ಮತ್ತು 16ನೇ ವರ್ಷದಲ್ಲಿ ಸ್ವೀಕರಿಸುತ್ತಾರೆ. ಅಂತಿಮವಾಗಿ ಸ್ಕೀಮ್ ಪೂರ್ಣಗೊಂಡಾಗ 2.8 ರೂ. ಲಕ್ಷವೂ ಸ್ಕೀಮ್ ಅಡಿಯಲ್ಲಿ ವಿಮಾ ಮೊತ್ತವಾಗಿ ಲಭ್ಯವಿರುತ್ತದೆ.

5 /5

ಪ್ರತಿ 1000 ರೂ.ಗೆ ಬೋನಸ್ ಮೇಲೆ 48 ರೂ. ನೀಡಲಾಗುತ್ತದೆ. ಇದು ಒಟ್ಟು ಬೋನಸ್ ಅನ್ನು 7 ಲಕ್ಷ ರೂ. ಮೇಲೆ 33,600 ರೂ. ನೀಡುತ್ತದೆ. ಇಡೀ 20 ವರ್ಷಗಳ ಕಾಲ ಬೋನಸ್ 6.72 ಲಕ್ಷ ರೂ. ಆಗಲಿದೆ. 20 ವರ್ಷಗಳಲ್ಲಿ ಒಟ್ಟು 13.71 ಲಕ್ಷ ರೂ. ವನ್ನು 7 ಲಕ್ಷ ರೂ.ಗಳ ಸಮ್ ಅಶ್ಯೂರ್ಡ್ ಮತ್ತು 6.72 ಲಕ್ಷ ರೂ. ಬೋನಸ್ ಅನ್ನು ಪಾವತಿಸಲಾಗುತ್ತದೆ. 4.2 ಲಕ್ಷ ರೂ. ಹಣ ನಿಮಗೆ ವಾಪಸ್ ಆಗಲಿದೆ. 9.52 ಲಕ್ಷ ರೂ.ವನ್ನು ಮೆಚ್ಯೂರಿಟಿಯಲ್ಲಿ ನೀಡಲಾಗುತ್ತದೆ.