Polyandrous Women: ಈ ದೇಶದ ಮಹಿಳೆಯರಿಗೆ ಸಿಗಲಿದೆ ಒಂದಕ್ಕಿಂತ ಹೆಚ್ಚು ಗಂಡಂದಿರರನ್ನು ಹೊಂದುವ ಹಕ್ಕು!

Polyandrous Women - ದಕ್ಷಿಣ ಆಫ್ರಿಕಾದ (South Africa) ಸಂವಿಧಾನ ವಿಶ್ವದ ಅತ್ಯಂತ ಪ್ರೋಗ್ರೆಸಿವ್ ಸಂವಿಧಾನಗಳಲ್ಲಿ (World's Most Progressive Constitution) ಒಂದು.

Polyandrous Women - ದಕ್ಷಿಣ ಆಫ್ರಿಕಾದ (South Africa) ಸಂವಿಧಾನ ವಿಶ್ವದ ಅತ್ಯಂತ ಪ್ರೋಗ್ರೆಸಿವ್ ಸಂವಿಧಾನಗಳಲ್ಲಿ (World's Most Progressive Constitution) ಒಂದು. ಅಲ್ಲಿ ಸಮಲೈಂಗಿಕ ವಿವಾಹಕ್ಕೂ (Same Sex Marriage) ಕೂಡ ಅನುಮತಿ ನೀಡಲಾಗಿದೆ ಹಾಗೂ ಟ್ರಾನ್ಸ್ ಜೆಂಡರ್ (Full Rights To Transgender) ಗಳಿಗೂ ಕೂಡ ಸಂಪೂರ್ಣ ಹಕ್ಕು ನೀಡಲಾಗಿದೆ.
 

ಇದನ್ನೂ ಓದಿ-What Happens After Death: ಸಾವಿನ ನಂತರ ಏನಾಗುತ್ತದೆ? ಸತ್ತು 20 ನಿಮಿಷಗಳ ಬಳಿಕ ಮತ್ತೆ ಜೀವಂತವಾದ ವ್ಯಕ್ತಿ ಹೇಳಿದ್ದೇನು?

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /5

1. ದಕ್ಷಿಣ ಆಫ್ರಿಕಾದಲ್ಲಿ  ಹೊಸ ಕಾನೂನು - ಸಾಮಾಜಿಕ ರೂಢಿಗಳನ್ನು ಮುರಿಯುವತ್ತ ದಕ್ಷಿಣ ಆಫ್ರಿಕಾ ಸರ್ಕಾರ (South African Government) ಹೆಜ್ಜೆಯನ್ನಿಟ್ಟಿದೆ . ಇದೀಗ ಈ ದೇಶದಲ್ಲಿ ಬಹುಪತ್ನಿತ್ವದ ಜೊತೆಗೆ ಬಹುಪತಿತ್ವ ಪದ್ಧತಿ ಕೂಡ ಜಾರಿಗೆ ಬರಲಿದೆ. ಈ ಕುರಿತು ಪ್ರಸ್ತಾವನೆ ಸಲ್ಲಿಸಿರುವ ಅಲ್ಲಿನ ಸರ್ಕಾರ, ಮಹಿಳೆಯರಿಗೂ ಕೂಡ ಒಂದಕ್ಕಿಂತ ಹೆಚ್ಚು ಗಂಡಂದಿರರ ಜೊತೆಗೆ ವಾಸಿಸಬಹುದು.

2 /5

2. ರೂಢಿವಾದಿ ಸಂಘಟನೆಯ ಅಸಮಾಧಾನ - ದಕ್ಷಿಣ ಆಫ್ರಿಕಾದಲ್ಲಿ ಮೊದಲಿನಿಂದಲೇ ಪುರುಷರು ಒಂದಕ್ಕಿಂತ ಹೆಚ್ಚು ಪತ್ನಿಯರ ಜೊತೆಗೆ ವಾಸಿಸುವ ಕಾನೂನು ಜಾರಿಯಲ್ಲಿದೆ. ಇದೀಗ ಮಹಿಳೆಯರಿಗೂ ಕೂಡ ಈ ಸ್ವಾತಂತ್ರ್ಯ ಒದಗಿಸಲು ಅಲ್ಲಿನ ಸರ್ಕಾರ ಬಯಸಿದೆ. ಆದರೆ, ಸರ್ಕಾರದ ಈ ನಿರ್ಧಾರಕ್ಕೆ ಅಲ್ಲಿನ ರೂಢಿವಾದಿ ಸಮುದಾಯ ವಿರೋಧ ವ್ಯಕ್ತಪಡಿಸಿದೆ. ಈ ಕಾನೂನಿನಿಂದ ದಕ್ಷಿಣ ಆಫ್ರಿಕಾದ ಸಂಸ್ಕೃತಿ ನಶಿಸಿಹೋಗಲಿದೆ ಎಂಬುದು ಅವರ ವಾದ. 

3 /5

3. ಎಲ್ಲಕ್ಕಿಂತ ಹೆಚ್ಚು ಅಭಿವೃದ್ಧಿ ಪರ ಸಂವಿಧಾನ -  ದಕ್ಷಿಣ ಆಫ್ರಿಕಾದ ಗೃಹ ಇಲಾಖೆ ಈ ಪ್ರಸ್ತಾವನೆಯನ್ನು ನೀಡಿದ್ದು, ಇದನ್ನು ಗ್ರೀನ್ ಪೇಪರ್ ನಲ್ಲಿ ಶಾಮೀಲುಗೊಳಿಸಲು ಒತ್ತಾಯಿಸಿದೆ. ದಕ್ಷಿಣ ಆಫ್ರಿಕಾದ ಸಂವಿಧಾನ ವಿಶ್ವದ ಅತ್ಯಂತ ಹೆಚ್ಚು ಪ್ರೋಗ್ರೆಸ್ಸಿವ್ ಸಂವಿಧಾನವಾಗಿದೆ. ಅಲ್ಲಿ ಸಮಲೈಂಗಿಕ ವಿವಾಹಕ್ಕೂ ಕೂಡ ಅನುಮತಿ ಇದ್ದು, ಟ್ರಾನ್ಸ್ ಜೆಂಡರ್ ಗಳಿಗೂ ಕೂಡ ಸಂಪೂರ್ಣ ಹಕ್ಕುಗಳನ್ನು ನೀಡಲಾಗಿದೆ.

4 /5

4. ಹಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ - ಇಂಡಿಪೆಂಡೆಂಟ್ ನಲ್ಲಿ ಪ್ರಕಟಗೊಂಡ ವರದಿಯ ಪ್ರಕಾರ, ಇದರಿಂದ ಸಮಾಜ ಸಂಪೂರ್ಣ ನಷ್ಟವಾಗಲಿದೆ ಎಂದು ದಕ್ಷಿಣ ಆಫ್ರಿಕಾದ ಕ್ರಿಶ್ಚಿಯನ್ ಡೆಮಾಕ್ರೆಟಿಕ್ ಪಾರ್ಟಿ ಮುಖಂಡ ಕೆನೆತ್ ಮೆಸೋಹೋ ಹೇಳಿದ್ದಾರೆ ಎನ್ನಲಾಗಿದೆ. ಇನ್ನೊಂದೆಡೆ ಈ ಕುರಿತು ಹೇಳಿಕೆ ನೀಡಿರುವ ಪ್ರೊಫೆಸ್ಸರ್ ಕೊಲಿಸ್ ಮೇಕೋಕೋ, ಈ ಪ್ರಸ್ತಾವನೆ ತುಂಬಾ ಕುತೂಹಲಕಾರಿಯಾಗಿದೆ. ಏಕೆಂದರೆ, ಆಫ್ರಿಕಾದ ಸಮಾಜ ಸಮಾನತೆಗೆ ಇನ್ನೂ ಸಂಪೂರ್ಣ ಸಿದ್ಧವಾಗಿಲ್ಲ. ನಮ್ಮ ನಿಯಂತ್ರಣದಲ್ಲಿ ಇರದ ಮಹಿಳೆಯರನ್ನು ನಾವು ಹೇಗೆ ನಿಯಂತ್ರಿಸಬಲ್ಲೆವು ಎಂಬುದು ತಮಗೆ ಗೊತ್ತಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

5 /5

5. ಜಿಂಬಾಬ್ವೆಯಲ್ಲಿ ಮೊದಲಿನಿಂದಲೇ ಈ ರೀತಿಯ ಕಾನೂನು ಅಸ್ತಿತ್ವದಲ್ಲಿದೆ - ದಕ್ಷಿಣ ಆಫ್ರಿಕಾದ ನೆರೆ ರಾಷ್ಟ್ರವಾಗಿರುವ ಜಿಂಬಾಬ್ವೆಯಲ್ಲಿ ಮೊದಲಿನಿಂದಲೇ ಈ ರೀತಿಯ ಕಾನೂನು ಅಸ್ತಿತ್ವದಲ್ಲಿರುವುದು ಇಲ್ಲಿ ಗಮನಾರ್ಹ. ಅಲ್ಲಿನ ಮಹಿಳೆಯರು ಮೊದಲಿನಿಂದಲೇ ಒಂದಕ್ಕಿಂತ ಹೆಚ್ಚು ಪತಿಯರನ್ನು ಹೊಂದಬಹುದು. ಈ ಕುರಿತು ಪ್ರೊಫೆಸ್ಸರ್ ಕಾಲಿನ್ಸ್ ಸಂಶೋಧನೆ ಕೂಡ ನಡೆಸಿದ್ದಾರೆ. ಬಿಬಿಸಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, ಈ ರೀತಿಯ ವಿವಾಹಗಳಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದಾರೆ ಎಂದು ಅವರು ಹೇಳಿದ್ದಾರೆ.