ತಾಯಿ ಹೀರಾಬೆನ್ ಅವರಿಗೆ 100 ವರ್ಷ ತುಂಬಿದ ಹಿನ್ನೆಲೆ ಪ್ರಧಾನಿ ಮೋದಿಯವರು ಪಾದಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು.
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ತಾಯಿ ಹೀರಾಬೆನ್ ಅವರಿಗೆ ಇಂದು 100ನೇ ಜನ್ಮದಿನದ ಸಂಭ್ರಮ. ಈ ಹಿನ್ನೆಲೆ ಶತಾಯುಷಿ ಅಮ್ಮನ ಪಾದಪೂಜೆ ಮಾಡಿದ ಪ್ರಧಾನಿ ಮೋದಿಯವರು ಆಶೀರ್ವಾದ ಪಡೆದುಕೊಂಡರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಶತಾಯುಷಿ ಅಮ್ಮನಿಗೆ ಶುಭಕೋರಿ ಅಮೂಲ್ಯ ಕ್ಷಣಕ್ಕೆ ಸಾಕ್ಷಿಯಾಗಲು ಪ್ರಧಾನಿ ಮೋದಿಯವರು ಶನಿವಾರ ಖುದ್ದು ಗಾಂಧಿನಗರಕ್ಕೆ ಭೇಟಿ ಕೊಟ್ಟರು. ಈ ವೇಳೆ ತಾಯಿಯ ಪಾದಪೂಜೆ ಮಾಡಿ ಆಶೀರ್ವಾದ ಪಡೆದುಕೊಂಡರು. ಪ್ರಧಾನಿ ಶ್ರೀ @narendramodi ಅವರು ಇಂದು ಅವರ ತಾಯಿ ಅವರಿಗೆ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಅವರ ಪಾದಪೂಜೆ ಮಾಡಿ ಆಶೀರ್ವಾದ ಪಡೆದರು. pic.twitter.com/PNmxszVpeM — BJP Karnataka (@BJP4Karnataka) June 18, 2022
ನೂರು ವರ್ಷ ತುಂಬಿದ ಹಿನ್ನೆಲೆ ಶತಾಯುಷಿ ಅಮ್ಮ ಹೀರಾಬೆನ್ ಅವರಿಗೆ ಪ್ರಧಾನಿ ಮೋದಿಯವರು ಸಿಹಿ ತಿನ್ನಿಸಿದು.
ಪಾದಪೂಜೆ ಮಾಡಿದ ಪ್ರೀತಿಯ ಪುತ್ರನಿಗೆ ತಾಯಿ ಹೀರಾಬೆನ್ ಆಶೀರ್ವಾದ ಮಾಡಿದರು.
ಗಾಂಧಿನಗರಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿಯವರು ನಿವಾಸದಲ್ಲಿ ಕೆಲಕಾಲ ಅಮ್ಮನೊಂದಿಗೆ ಕಾಲ ಕಳೆದರು. ಈ ವೇಳೆ ಪ್ರೀತಿಯ ಪುತ್ರನಿಗೆ ಹೀರಾಬೆನ್ ಅವರು ಕೆಲವು ಸಲಹೆಗಳನ್ನು ನೀಡಿದರು.
ತಾಯಿಯನ್ನು ಭೇಟಿ ನೀಡಿ ವಾಪಸ್ ಬರುವಾಗ ಪ್ರಧಾನಿ ಮೋದಿಯವರಿಗೆ ಪಕ್ಕದ ಮನೆಯವರೊಂದಿಗೆ ಆತ್ಮೀಯವಾಗಿ ಬೀಳ್ಕೊಡುಗೆ ಪಡೆದುಕೊಂಡರು.