ರಾಜ ಭವನದಲ್ಲಿ ಪ್ರಧಾನಿ ಮೋದಿ ಔತಣಕೂಟ: ಯಶ್, ರಿಷಬ್ ಶೆಟ್ಟಿ, ಕಿರಗಂದೂರು ಸೇರಿ ಹಲವರು ಭಾಗಿ

PM Modi's Banquet at Raj Bhavan: ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರಿಗಾಗಿ ಭಾನುವಾರ ರಾತ್ರಿ ಪ್ರಧಾನಿ ಮೋದಿ ಆಯೋಜಿಸಿದ್ದ ಔತನಕೂಟದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಭಾಗಿಯಾಗಿದ್ದರು.

ಬೆಂಗಳೂರು: 2023ನೇ ಸಾಲಿನ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಉದ್ಘಾಟನೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರು ರಾಜಭವನದಲ್ಲಿ ಔತನಕೂಟ ಏರ್ಪಡಿಸಿದ್ದರು. ನಾಡಿನ ವಿವಿಧ ಕ್ಷೇತ್ರಗಳ ಪ್ರಮುಖರಿಗಾಗಿ ಭಾನುವಾರ ರಾತ್ರಿ ಆಯೋಜಿಸಿದ್ದ ಈ ಔತನಕೂಟದಲ್ಲಿ ಸ್ಯಾಂಡಲ್‍ವುಡ್ ಸ್ಟಾರ್‍ಗಳು ಭಾಗಿಯಾಗಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ರಾಜಭವನದಲ್ಲಿ ಆಯೋಜಿಸಿದ್ದ ಪ್ರಧಾನಿ ಮೋದಿಯವರ ಔತನಕೂಟಕ್ಕೆ ಸಿನಿಮಾ, ಉದ್ಯಮಿಗಳು ಮತ್ತು ಕ್ರೀಡಾ ವಲಯದ ಗಣ್ಯರಿಗೆ ಆಹ್ವಾನ ನೀಡಲಾಗಿತ್ತು. ನಟರಾದ ರಾಕಿಂಗ್ ಸ್ಟಾರ್, ರಿಷಬ್ ಶೆಟ್ಟಿ, ನಿರ್ಮಾಪಕ ವಿಜಯ್ ಕಿರಂಗದೂರು, ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಪ್ರಸಿದ್ಧ ಹಾಸ್ಯನಟಿ ಅಯ್ಯೋ ಶ್ರದ್ಧಾ ಸೇರಿದಂತೆ ಹಲವರು ಭಾಗಿಯಾಗಿದ್ದರು.

2 /4

ಪ್ರಧಾನಿ ಮೋದಿಯವರ ಔತನಕೂಟದಲ್ಲಿ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜಕುಮಾರ್ ಪಾಲ್ಗೊಂಡಿದ್ದರು. ಈ ವೇಳೆ ‘ಗಂಧದಗುಡಿ’ ಸಿನಿಮಾದ ಮೆಚ್ಚುಗೆ ಮಾತುಗಳನ್ನಾಡಿದ ಪ್ರಧಾನಿ ಮೋದಿಯವರು, ‘ಅಪ್ಪು’ ನಿಧನವನ್ನು ನೆನಪಿಸಿಕೊಂಡು ಭಾವುಕರಾದರು.

3 /4

ಸೋಶಿಯಲ್​ ಮೀಡಿಯಾದಲ್ಲಿ ತುಂಬಾ ಹೆಸರು ಮಾಡಿರುವ ಪ್ರಸಿದ್ಧ ಹಾಸ್ಯನಟಿ ಅಯ್ಯೋ ಶ್ರದ್ಧಾ ಸಹ ಪ್ರಧಾನಿ ಮೋದಿಯವರ ಔತನಕೂಟದಲ್ಲಿ ಭಾಗಿಯಾಗಿದ್ದರು.

4 /4

ರಾಕಿಂಗ್ ಸ್ಟಾರ್ ಯಶ್ ಅವರು ಪ್ರಧಾನಿ ಮೋದಿಯವರ ಔತನಕೂಟದಲ್ಲಿ ಭಾಗಿಯಾಗಿ ಚಿತ್ರರಂಗದ ಬೆಳವಣಿಗೆ ಬಗ್ಗೆ ಚರ್ಚೆ ನಡೆಸಿದರು. ಕರ್ನಾಟಕದಲ್ಲಿ ಫಿಲ್ಮ್ ಸಿಟಿ ನಿರ್ಮಾಣ ಮಾಡಿಕೊಡುವಂತೆ ಈ ವೇಳೆ ಯಶ್ ಅವರು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆಂದು ತಿಳಿದುಬಂದಿದೆ.