Pleasure+ XTec ಸ್ಕೂಟರ್ ಬಿಡುಗಡೆಗೊಳಿಸಿದ Hero, Bluetooth Connectivity ಜೊತೆಗೆ ಸಿಗಲಿವೆ ಈ ವೈಶಿಷ್ಟ್ಯಗಳು

Pleasure+ XTec Launched - ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ (Hero Motocorp) ಇಂದು ಹೊಸ ಪ್ಲೆಶರ್ + ಎಕ್ಸ್‌ಟೆಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. 

Pleasure+ XTec Launched - ದೇಶದ ಪ್ರಮುಖ ದ್ವಿಚಕ್ರ ವಾಹನ ತಯಾರಕ ಹೀರೋ ಮೋಟೋಕಾರ್ಪ್ (Hero Motocorp) ಇಂದು ಹೊಸ ಪ್ಲೆಶರ್ + ಎಕ್ಸ್‌ಟೆಕ್ ಸ್ಕೂಟರ್ ಅನ್ನು ದೇಶೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಸ್ಕೂಟರ್ ಅನ್ನು ಒಟ್ಟು ಎರಡು ವೆರಿಯಂಟ್ ಗಳಲ್ಲಿ ಪರಿಚಯಿಸಲಾಗಿದ್ದು, ಇದರಲ್ಲಿ ಎಕ್ಸ್ ಎಲ್ (Pleasure+ XL) ವೇರಿಯಂಟ್ ಬೆಲೆಯನ್ನು ರೂ .61,000 ಮತ್ತು ಎಕ್ಸ್ ಟೆಕ್ ವೆರಿಯಂಟ್ ಬೆಲೆಯನ್ನು ರೂ .69,500 ಕ್ಕೆ ನಿಗದಿ ಮಾಡಲಾಗಿದೆ. ಸ್ಕೂಟರ್‌ನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ ಇದರಲ್ಲಿ ಬ್ಲೂಟೂತ್ ಸಂಪರ್ಕದೊಂದಿಗೆ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಸೈಡ್-ಸ್ಟ್ಯಾಂಡ್ ಎಂಜಿನ್ ಕಟ್-ಆಫ್, ಇತ್ಯಾದಿಗಳು ಶಾಮೀಲಾಗಿವೆ.

 

ಇದನ್ನೂ ಓದಿ-Best Teas To Control Diabetes: Diabetes ನಿಯಂತ್ರಿಸಬೇಕೇ? ಈ ಆರು ರೀತಿಯ ಚಹಾಗಳನ್ನು ನಿಮ್ಮ ಡಯಟ್ ನಲ್ಲಿ ಶಾಮೀಲುಗೊಳಿಸಿ

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
   

1 /3

ಈ ಹಬ್ಬದ ಋತುವನ್ನು ಸದುಪಯೋಗಪಡಿಸಿಕೊಳ್ಳಲು ಹೀರೋ ಮೋಟೋಕಾರ್ಪ್ ಈ ಸ್ಕೂಟರ್ ಮೇಲೆ ದೊಡ್ಡ ಪಂದ್ಯವನ್ನೇ ಆಡಿದೆ. ಈ ಸ್ಕೂಟರ್‌ನಲ್ಲಿ ಅನೇಕ ಹೊಸ ಸುಧಾರಿತ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ, ಈ ಸ್ಕೂಟರ್ ಡಿಜಿಟಲ್ ಅನಲಾಗ್ ಸ್ಪೀಡೋಮೀಟರ್, ಕಾಲ್ ಮತ್ತು SMS ಎಚ್ಚರಿಕೆಯಂತಹ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಬ್ಲೂಟೂತ್ ಸಂಪರ್ಕವು ಈ ಸ್ಕೂಟರ್ ಅನ್ನು ಇನ್ನಷ್ಟು ಆಕರ್ಷಕಗೊಳಿಸುತ್ತದೆ. ಇದು ಐಡಲ್-ಸ್ಟಾಪ್-ಸ್ಟಾರ್ಟ್ ಸಿಸ್ಟಮ್ ಜೊತೆಗೆ i3S ತಂತ್ರಜ್ಞಾನವನ್ನು ಸಹ  ಹೊಂದಿದೆ.

2 /3

Pleasure+ XTec Specifications - ಹೀರೊ ಮೊಟೊಕಾರ್ಪ್ ಈ ಸ್ಕೂಟರ್‌ನಲ್ಲಿ ಪ್ರೊಜೆಕ್ಟರ್ ಹೆಡ್‌ಲೈಟ್ ಅನ್ನು ನೀಡಿದೆ, ಇದನ್ನು ಈ ವಿಭಾಗದಲ್ಲಿ ಮೊದಲ ಬಾರಿಗೆ ಗಮನಿಸಲು ಸಿಗುತ್ತಿದೆ. ಈ ಹೆಡ್‌ಲೈಟ್ 25% ಹೆಚ್ಚು ವಿಸಿಬಿಲಿಟಿ  ಒದಗಿಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದಲ್ಲದೇ, ಕಂಪನಿಯು ಸೈಡ್ ವ್ಯೂ ಮಿರರ್ ನಲ್ಲಿ ಕ್ರೋಮ್ ಟ್ರೀಟ್ಮೆಂಟ್ ಅನ್ನು ನೀಡಿದ್ದು ಇದು ಇನ್ನಷ್ಟು ಸುಂದರವಾಗಿರುತ್ತದೆ. ಇದು ಮಫ್ಲರ್ ಪ್ರೊಜೆಕ್ಟರ್, ಹ್ಯಾಂಡಲ್ ಬಾರ್, ಸೀಟ್ ಬ್ಯಾಕ್ ರೆಸ್ಟ್ ನೊಂದಿಗೆ ಡ್ಯುಯಲ್ ಟೋನ್ ಸೀಟ್ ಹೊಂದಿದೆ.  

3 /3

Pleasure+ XTec ಅನ್ನು ಕಂಪನಿಯು ಒಟ್ಟು 7 ಬಣ್ಣಗಳಲ್ಲಿ ಪರಿಚಯಿಸಿದೆ, ಇದರಲ್ಲಿ ಜುಬಿಲಿ ಯೆಲ್ಲೋ ಸೇರಿದಂತೆ ಯುವ ಖರೀದಿದಾರರನ್ನು ಗಮನದಲ್ಲಿಟ್ಟುಕೊಂಡು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಈ ಸ್ಕೂಟರ್‌ನಲ್ಲಿ, ಕಂಪನಿಯು 110 ಸಿಸಿ ಎಂಜಿನ್ ಅನ್ನು ಬಳಸಿದ್ದು ಇದು 8 ಬಿಹೆಚ್‌ಪಿ ಪವರ್ ಮತ್ತು 8.7 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಕಂಪನಿಯು ತನ್ನ ಹೊಸ ಬೈಕ್ ಅನ್ನು ಶೀಘ್ರವೇ ಮಾರುಕಟ್ಟೆಗೆ ಪರಿಚಯಿಸಲು ಸಿದ್ಧತೆ ನಡೆಸಿದೆ.