Best Teas To Control Diabetes - ತಲೆ ನೋವು ನಿವಾರಿಸುವುದಾಗಲಿ ಅಥವಾ ದಿನವಿಡಿಯ ಆಯಾಸ ದೂರಗೊಳಿಸಲು ಚಹಾ ಒಂದು ಔಷಧಿಯ ರೀತಿ ಕೆಲಸ ಮಾಡುತ್ತದೆ. ಆದರೆ ಸರಿಯಾದ ಚಹಾ ಸೇವನೆಯಿಂದ ವ್ಯಕ್ತಿ ಕೇವಲ ಆಯಾಸವನ್ನು ಮಾತ್ರ ದೂರಗೊಳಿಸದೆ, ಶರೀರದಲ್ಲಿ ಹೆಚ್ಚಾದ ಸಕ್ಕರೆಯ ಪ್ರಮಾಣವನ್ನು ಕೂಡ ನಿಯಂತ್ರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ?
Best Teas To Control Diabetes - ತಲೆ ನೋವು ನಿವಾರಿಸುವುದಾಗಲಿ ಅಥವಾ ದಿನವಿಡಿಯ ಆಯಾಸ ದೂರಗೊಳಿಸಲು ಚಹಾ ಒಂದು ಔಷಧಿಯ ರೀತಿ ಕೆಲಸ ಮಾಡುತ್ತದೆ. ಆದರೆ ಸರಿಯಾದ ಚಹಾ ಸೇವನೆಯಿಂದ ವ್ಯಕ್ತಿ ಕೇವಲ ಆಯಾಸವನ್ನು ಮಾತ್ರ ದೂರಗೊಳಿಸದೆ, ಶರೀರದಲ್ಲಿ ಹೆಚ್ಚಾದ ಸಕ್ಕರೆಯ ಪ್ರಮಾಣವನ್ನು ಕೂಡ ನಿಯಂತ್ರಿಸಬಹುದು ಎಂಬುದು ನಿಮಗೆ ತಿಳಿದಿದೆಯೇ? ಹೌದು, ಕೆಲ ಹರ್ಬಲ್ ಚಹಾಗಳನ್ನು ಸರಿಯಾದ ಆಹಾರ ಹಾಗೂ ವ್ಯಾಯಾಮಗಳ ಜೊತೆಗೆ ಸೇವಿಸುವುದರ ಮೂಲಕ ವ್ಯಕ್ತಿ Diabetes ಅನ್ನು ಕೂಡ ನಿಯಂತ್ರಿಸಬಹುದು. ಆದರೆ ಇವುಗಳನ್ನು ಸೇವಿಸುವ ಮೊದಲು ವೈದ್ಯರ ಸಲಹೆ ಪಡೆಯಲು ಮರೆಯಬೇಡಿ.
ಇದನ್ನೂ ಓದಿ - ದೇಹಕ್ಕೆ ಪ್ರಯೋಜನವಾಗಬೇಕಾದರೆ ಈ ಹೊತ್ತಿಗೆ ಸೇವಿಸಬೇಕು ಬೇಯಿಸಿದ ಮೊಟ್ಟೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
1. Hibiscus Tea - ದಾಸವಾಳ ಚಹಾಗೆ ಆಂಗ್ಲ ಭಾಷೆಯಲ್ಲಿ ಹಿಬಿಸ್ಕಸ್ ಟೀ ಎಂದು ಕರೆಯುತ್ತಾರೆ. ಈ ಚಹಾದಲ್ಲಿ ಪಾಲಿಫಿನಾಲ್ ಆಂಟಿಆಕ್ಸಿಡೆಂಟ್‌ಗಳು ಇದ್ದು, ಇದು ರಕ್ತದೊತ್ತಡ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ ಮತ್ತು ತೂಕ ಇಳಿಕೆಗೆ ಹಾಗೂ ಮಧುಮೇಹದಿಂದ ಉಂಟಾಗುವ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ.
2. Cinnamon Tea - ದಾಲ್ಚಿನ್ನಿ ಚಹಾವನ್ನು ಕುಡಿಯುವುದರಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು. ದಾಲ್ಚಿನ್ನಿ ಅನೇಕ ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಮತ್ತು ಉರಿಯೂತದ ಗುಣಲಕ್ಷಣಗಳನ್ನು ಟೈಪ್ 2 ಮಧುಮೇಹ ಮತ್ತು ಇನ್ಸುಲಿನ್ ಪ್ರತಿರೋಧದಲ್ಲಿ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದಲ್ಲದೆ ಚಹಾಕ್ಕೆ ಒಂದು ಚಿಟಿಕೆ ದಾಲ್ಚಿನ್ನಿ ಸೇರಿಸುವುದರಿಂದ ಸ್ಥೂಲಕಾಯವನ್ನು ಕಡಿಮೆ ಮಾಡಬಹುದು.
3.Black Tea - Black Tea ಸಾಮಾನ್ಯ ಭಾಷೆಯಲ್ಲಿ ಕಪ್ಪು ಚಹಾ ಎಂದೂ ಕರೆಯುತ್ತಾರೆ. ಬ್ಲ್ಯಾಕ್ ಟೀಯಲ್ಲಿ ಫ್ಲೇವಿನ್ ಗಳು ಮತ್ತು ಥೆರಾಬಿಜಿನ್ ಗಳು ಇರುತ್ತವೆ, ಇವು ಉರಿಯೂತ, ಆಂಟಿ ಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಇನ್ಸುಲಿನ್ ಮಟ್ಟವನ್ನು ನಿಯಂತ್ರಿಸಬಹುದು.
4. Ginseng Tea - ಜಿನ್ಸೆಂಗ್ ಚಹಾವನ್ನು ಮಧುಮೇಹಿಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಜಿನ್ಸೆಂಗ್ ಚಹಾವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಅನೇಕ ಆರೋಗ್ಯ ಸಂಬಂಧಿತ ಸಂಶೋಧನೆಗಳು ಸೂಚಿಸುತ್ತವೆ. ಜಿನ್ಸೆಂಗ್ ಒಂದು ಆಯುರ್ವೇದ ಮೂಲಿಕೆಯಾಗಿದೆ, ಇದನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಸಂಪರ್ಕಿಸಿ.
5. Camomile Tea - ಕ್ಯಾಮೊಮೈಲ್ ಚಹಾವು ಆಂಟಿ-ಇನ್ಫ್ಲೇಮೆಟರೀ ಗುಣಗಳನ್ನು ಹೊಂದಿದೆ. ನಿಮ್ಮ ದಿನಚರಿಯಲ್ಲಿ ಈ ಚಹಾವನ್ನು ಸೇರಿಸುವುದು ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಆಸ್ಟಿಯೊಪೊರೋಸಿಸ್ ಅಪಾಯವನ್ನು ಕಡಿಮೆ ಮಾಡಲು ಈ ಚಹಾವು ಸಹಕಾರಿಯಾಗಿದೆ. ಇದರ ಹೊರತಾಗಿ, ಚಹಾವು ಚಯಾಪಚಯ, ಕರುಳಿನ ಆರೋಗ್ಯ ಮತ್ತು ತೂಕ ಇಳಿಕೆಗೂ ಕೂಡ ಸಹಾಯ ಮಾಡುತ್ತದೆ.
6. Green Tea - ಗ್ರೀನ್ ಟೀನಲ್ಲಿ ಇರುವ ಆಂಟಿ ಆಕ್ಸಿಡೆಂಟ್ ಗುಣಗಳು ದೇಹದ ಉರಿಯೂತ ಮತ್ತು ಹಾನಿಗೊಳಗಾದ ಕೋಶಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದನ್ನು ಸೇವಿಸುವುದರಿಂದ ಇನ್ಸುಲಿನ್ ನಿಯಂತ್ರಿಸಲು ಮಾತ್ರವಲ್ಲ ವ್ಯಕ್ತಿಯ ತೂಕ ಇಲಿಕೆಗೂ ಸಹಾಯವಾಗುತ್ತದೆ. ಇದಕ್ಕಾಗಿ, ನೀವು ಹಸಿರು ಚಹಾಕ್ಕೆ ಒಂದು ಪಿಂಚ್ ಜಾಜಿಕಾಯಿ ಹುಡಿ ಸೇರಿಸಬಹುದು, ಇದು ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು ಮತ್ತು ನಿದ್ರೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ.