Plant Based Meat: ಸಸ್ಯ ಆಧಾರಿತ ಉತ್ಪನ್ನಗಳನ್ನು ಆಯ್ಕೆಮಾಡುವಾಗ, ಕಡಿಮೆ-ಉಪ್ಪು ಮತ್ತು ಹೆಚ್ಚಿನ ಫೈಬರ್ ಆಯ್ಕೆಗಳನ್ನು ಆಯ್ಕೆ ಮಾದುವುದುಇ ಅವಶ್ಯಕ. ಅದಕ್ಕಾಗಿ ಲೇಬಲ್ ಅನ್ನು ಪರಿಶೀಲಿಸಿ.
Plant Based Meat: ಇತ್ತೀಚಿನ ವರ್ಷಗಳಲ್ಲಿ, 'ನಕಲಿ ಮಾಂಸ' ಅಂದರೆ ಸಸ್ಯ ಆಧಾರಿತ ಪ್ರೋಟೀನ್ ಪ್ರಪಂಚದಾದ್ಯಂತ ಸಾಕಷ್ಟು ಜನಪ್ರಿಯವಾಗಿದೆ. ಪ್ರಾಣಿಗಳ ಮಾಂಸದಿಂದ ತಯಾರಿಸಿದ ಉತ್ಪನ್ನಗಳ ಸೇವನೆಯನ್ನು ಜನರು ಕಡಿಮೆ ಮಾಡಿದ್ದಾರೆ. 2030 ರ ಹೊತ್ತಿಗೆ, ಸಸ್ಯ ಆಧಾರಿತ ಪ್ರೋಟೀನ್ ಆಸ್ಟ್ರೇಲಿಯಾದಲ್ಲಿ 3 ಬಿಲಿಯನ್ ವ್ಯವಹಾರ ನಡೆಸುವ ನಿರೀಕ್ಷೆಯಿದೆ. ಈ ಸಸ್ಯಾ ಆಧಾರಿತ ಪ್ರೋಟೀನ್ ಆರೋಗ್ಯ ಮತ್ತು ಪರಿಸರಕ್ಕೆ ಉತ್ತಮವೆಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಆರೋಗ್ಯಕರ ಆಹಾರದ ಭಾಗವಾಗಿ ನಕಲಿ ಮಾಂಸವನ್ನು ಯಾವತ್ತಾದರೂ ಒಮ್ಮೆ ಆನಂದಿಸಬಹುದು. ಸಸ್ಯ ಆಧಾರಿತ ಉತ್ಪನ್ನಗಳನ್ನು ಆಯ್ಕೆಮಾಡುವಾಗ, ಕಡಿಮೆ-ಉಪ್ಪು ಮತ್ತು ಹೆಚ್ಚಿನ ಫೈಬರ್ ಆಯ್ಕೆಗಳನ್ನು ಆಯ್ಕೆ ಮಾದುವುದುಇ ಅವಶ್ಯಕ. ಅದಕ್ಕಾಗಿ ಲೇಬಲ್ ಅನ್ನು ಪರಿಶೀಲಿಸಿ.
ಯುಎಸ್ ಬಿಯಾಂಡ್ ಮೀಟ್ ಬರ್ಗರ್ ಸಾಂಪ್ರದಾಯಿಕ ಬೀಫ್ ಪ್ಯಾಟಿಗಿಂತ 99% ಕಡಿಮೆ ನೀರು, 93% ಕಡಿಮೆ ಭೂಮಿಯ ಉಪಯೋಗ ಮತ್ತು 90% ಕಡಿಮೆ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ಉತ್ಪಾದಿಸುತ್ತದೆ ಎಂದು ಹೇಳುತ್ತದೆ. ದಿ ಲ್ಯಾನ್ಸೆಟ್ ಪ್ಲಾನೆಟರಿ ಹೆಲ್ತ್ನಲ್ಲಿ ಈ ತಿಂಗಳು ಪ್ರಕಟವಾದ ಅಧ್ಯಯನವು ಹೆಚ್ಚು ಸಸ್ಯ ಆಧಾರಿತ ಉತ್ಪನ್ನಗಳನ್ನು ತಿನ್ನುವ ನೈತಿಕ ಮತ್ತು ಆರ್ಥಿಕ ಪರಿಣಾಮಗಳ ಬಗ್ಗೆ ಹೇಳಿದೆ. ಗೋಮಾಂಸದಿಂದ ಸಸ್ಯ ಆಧಾರಿತ ಉತ್ಪನ್ನಗಳಿಗೆ ಬದಲಾಯಿಸುವುದರಿಂದ US ಆಹಾರ ಉತ್ಪಾದನೆಯ ಇಂಗಾಲದ ಪ್ರಭಾವವನ್ನು 2.5-13.5% ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯಲ್ಲಿ ಹೇಳಲಾಗಿದೆ.
ಆಸ್ಟ್ರೇಲಿಯಾದ ಸೂಪರ್ಮಾರ್ಕೆಟ್ಗಳಲ್ಲಿ ಲಭ್ಯವಿರುವ 130 ಕ್ಕೂ ಹೆಚ್ಚು ಉತ್ಪನ್ನಗಳ ಆಡಿಟ್ ನಲ್ಲಿ ಸಸ್ಯ-ಆಧಾರಿತ ಉತ್ಪನ್ನಗಳು ಸರಾಸರಿ ಕಡಿಮೆ ಕ್ಯಾಲೋರಿಗಳು ಮತ್ತು ಸ್ಯಾಚುರೇಟೆಡ್ ಕೊಬ್ಬು ಮತ್ತು ಮಾಂಸ ಉತ್ಪನ್ನಗಳಿಗಿಂತ ಹೆಚ್ಚು ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ ಅನ್ನು ಹೊಂದಿವೆ ಎನ್ನುವುದು ಕಂಡುಹಿಡಿದಿದೆ. ಆದರೂ ಎಲ್ಲಾ ಸಸ್ಯ ಆಧಾರಿತ ಉತ್ಪನ್ನಗಳನ್ನು ಸಮಾನವಾಗಿ ರಚಿಸಲಾಗಿಲ್ಲ. ಸಸ್ಯಾಧಾರಿತ ಮಾಂಸವು ಕೊಲೆಸ್ಟರಾಲ್ ಮಟ್ಟ, ದೇಹದ ತೂಕ ಸೇರಿದಂತೆ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುತ್ತದೆ ಎನ್ನಲಾಗಿದೆ.
ಇದನ್ನು ಮಾಂಸ ಎಂದು ಕರೆಯಲಾಗುತ್ತದೆಯಾದರೂ ಇದು ಮಾಂಸ ಅಲ್ಲ. ಈ ಉತ್ಪನ್ನಗಳನ್ನು ಮಾಂಸ ಎಂದು ಉಲ್ಲೇಖಿಸುವುದಕ್ಕೆ ಮಾಂಸ ಉದ್ಯಮದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಈ ನಕಲಿ ಮಾಂಸಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ. ಒಂದು ಸಸ್ಯ ಆಧಾರಿತ ಪ್ರೋಟೀನ ಗಳು ಮತ್ತು ಕೋಶ ಆಧಾರಿತ ಪ್ರೋಟೀನ ಗಳು. ಸೂಪರ್ಮಾರ್ಕೆಟ್ಗಳಲ್ಲಿ ಕಂಡುಬರುವ ಸಸ್ಯ ಆಧಾರಿತ ಬರ್ಗರ್ಗಳು ಮತ್ತು ಸಾಸೇಜ್ಗಳನ್ನು ಸಸ್ಯ ಆಹಾರಗಳಿಂದ ಅಂದರೆ ಸಾಮಾನ್ಯವಾಗಿ ಬಟಾಣಿ, ಸೋಯಾ, ಗೋಧಿ ಪ್ರೋಟೀನ್ಗಳು ಮತ್ತು ಅಣಬೆಗಳಿಂದ ಪ್ರೋಟೀನ್ಗಳನ್ನು ಹೊರತೆಗೆಯುವ ಮೂಲಕ ತಯಾರಿಸಲಾಗುತ್ತದೆ. ಆದರೆ ಈ ಉತ್ಪನ್ನಗಳಿಗೆ ಸಾಂಪ್ರದಾಯಿಕ ಮಾಂಸದಂತೆ ಕಾಣಲು ಮತ್ತು ರುಚಿ ತರಲು ಬೇರೆ ಬೇರೆ ಪದಾರ್ಥಗಳನ್ನು ಸೇರಿಸಲಾಗುತ್ತದೆ.