ರುತುರಾಜ್ ಗಾಯಕ್ವಾಡ್ ಪ್ರೇಯಸಿ ಫೋಟೋಶೂಟ್‌: ಈ ಸುಂದರಿಯ ಅಂದಕ್ಕೆ ಮನಸೋಲೋದು ಪಕ್ಕಾ

ರಿತುರಾಜ್ ಗಾಯಕ್ವಾಡ್ ಅವರು ತಮ್ಮ ಅತ್ಯಂತ ಬಿರುಸಿನ ಬ್ಯಾಟಿಂಗ್‌ಗೆ ಹೆಸರುವಾಸಿಯಾಗಿದ್ದಾರೆ. ಅವರು ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಸಾಕಷ್ಟು ರನ್ ಗಳಿಸಿದ್ದಾರೆ. ರಿತುರಾಜ್ ಗಾಯಕ್ವಾಡ್ ಅವರ ವೈಯಕ್ತಿಕ ಜೀವನದ ಬಗ್ಗೆಯೂ ಚರ್ಚೆಯಲ್ಲಿದ್ದಾರೆ. ಅವರ ಹೆಸರು ಮರಾಠಿ ನಟಿ ಸಯಾಲಿ ಸಂಜೀವ್ ಅವರೊಂದಿಗೆ ಆಗಾಗ ತಳುಕು ಹಾಕುತ್ತಿರುತ್ತದೆ. 

1 /4

ಸಯಾಲಿ ಸಂಜೀವ್ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಹಂಚಿಕೊಂಡಿರುವ ಫೋಟೋಗಳನ್ನು ಅಭಿಮಾನಿಗಳು ತುಂಬಾ ಇಷ್ಟಪಡುತ್ತಾರೆ. ಅವರ ಇನ್‌ಸ್ಟಾಗ್ರಾಮ್‌ನಲ್ಲಿ 11 ಲಕ್ಷ ಫಾಲೋವರ್ಸ್ ಹೊಂದಿದ್ದಾರೆ.

2 /4

ಸಯಾಲಿ ಸಂಜೀವ್ ಅವರು 31 ಜನವರಿ 1993 ರಂದು ಮಹಾರಾಷ್ಟ್ರದ ಧುಲೆಯಲ್ಲಿ ಜನಿಸಿದರು. ಅವರು ತಮ್ಮ ಶಾಲಾ ಶಿಕ್ಷಣವನ್ನು ನಾಸಿಕ್‌ನ ಆರ್‌ಜೆಸಿ ಬೈಟೆಕೊ ಹೈಸ್ಕೂಲ್‌ನಲ್ಲಿ ಮಾಡಿದರು. ಬಾಲ್ಯದಿಂದಲೂ ಅಧ್ಯಯನದಲ್ಲಿ ಚುರುಕಾಗಿದ್ದವರು. ಕಾಲೇಜು ಸಮಾರಂಭವೊಂದರಲ್ಲಿ ಸಯಾಲಿ ಅತ್ಯುತ್ತಮ ನಟಿ ಪ್ರಶಸ್ತಿಯನ್ನು ಪಡೆದರು ಮತ್ತು ಆ ಸಮಯದಲ್ಲಿ ಅವರು ನಟನೆಯಲ್ಲಿ ವೃತ್ತಿಜೀವನವನ್ನು ಮುಂದುವರಿಸಲು ನಿರ್ಧರಿಸಿದರು.

3 /4

ಸಯಾಲಿ ಸಂಜೀವ್ ಮ್ಯೂಸಿಕ್ ವೀಡಿಯೋ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಆ ನಂತರ ಮರಾಠಿ ಟಿವಿ ಧಾರಾವಾಹಿ ‘ಕಹೇ ದಿಯಾ ಪರ್ದೇಸ್’ ಮೂಲಕ ಸಾಕಷ್ಟು ಖ್ಯಾತಿ ಪಡೆದರು. ಅವರ ‘ಗೌರಿ’ ಪಾತ್ರ ಬಹಳ ಜನಪ್ರಿಯವಾಯಿತು. ಗುಲ್‌ಮೊಹರ್‌ನಂತಹ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದಾಳೆ. ಸನ್ಯಾಲಿ ಸಂಜೀವ್ ತಮ್ಮ ನಟನೆಯಿಂದ ಎಲ್ಲರ ಮನ ಗೆದ್ದಿದ್ದಾರೆ.

4 /4

ಸಯಾಲಿ ಸಂಜೀವ್ ಕೂಡ ತಮ್ಮ ಸಾಮಾಜಿಕ ಕಾರ್ಯಗಳಿಗೆ ಪ್ರಸಿದ್ಧರಾಗಿದ್ದಾರೆ. ಮಾಡೆಲಿಂಗ್‌ಗೆ ಕಾಲಿಟ್ಟ ನಂತರ, ಸಯಾಲಿ ಸಂಜೀವ್ ಅವರು ರಾಜು ಪರ್ಸೇಕರ್ ಅವರ 'ಪೊಲೀಸ್ ಲೈನ್ಸ್ - ಏಕ್ ಪೂರ್ಣ ಸತ್ಯ' ಸೇರಿದಂತೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಬಿರ್ಲಾ ಐಕೇರ್, ಡಾಂಟ್ಜ್‌ಗೆ ಮಾಡೆಲಿಂಗ್ ಮಾಡಿದ್ದಾರೆ.