ಕೊಳವೆಬಾವಿಗೆ ಬಿದ್ದ ಬಾಲಕ: ಛತ್ತೀಸ್‌ಗಡದಲ್ಲಿ ನಡೆದ ಅತಿದೊಡ್ಡ ಕಾರ್ಯಾಚರಣೆಯ ಫೋಟೋಸ್‌

ಛತ್ತೀಸ್‌ಗಢದ ಜಾಂಜ್‌ಗೀರ್-ಚಂಪಾ ಜಿಲ್ಲೆಯಲ್ಲಿ ಬಾಲಕನೋರ್ವ ಕೊಳವೆ ಬಾವಿಗೆ ಬಿದ್ದು ಸಂಕಷ್ಟ ಎದುರಿಸುತ್ತಿದ್ದಾನೆ. ಒಂದೆಡೆ ಜಿಲ್ಲಾಡಳಿತ ಎನ್‌ಡಿಆರ್‌ಎಫ್-ಎಸ್‌ಡಿಆರ್‌ಎಫ್ ಪೂರ್ಣ ಬಲದಿಂದ ರಾಹುಲ್‌ನನ್ನು ರಕ್ಷಿಸಲು ಪ್ರಯತ್ನಿಸುತ್ತಿದೆ. ಇನ್ನೊಂದೆಡೆ ಬೋರ್‌ವೆಲ್‌ನಲ್ಲಿ ನೀರಿನ ಮಟ್ಟ ನಿರಂತರವಾಗಿ ಹೆಚ್ಚುತ್ತಿದೆ. ಈ ಘಟನೆಯ ಕೆಲ ಫೋಟೋಗಳನ್ನು ಇಲ್ಲಿ ನೀಡಲಾಗಿದೆ. 

1 /8

ರಾಹುಲ್ ಸಾಹು ಎಂಬ ಬಾಲಕ 80 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದಾನೆ. 

2 /8

ರಾಹುಲ್‌ನನ್ನು ಕಾಪಾಡಲು ಕಾರ್ಯಾಚರಣೆ ಕೈಗೊಳ್ಳಲಾಗಿದೆ. ಈ ಸಮಯದಲ್ಲಿ ಎನ್‌ಡಿಆರ್‌ಎಫ್‌ ಸಿಬ್ಬಂದಿ ಬಿ ಅನಿಲ್ (ಆಂಧ್ರ ಪ್ರದೇಶ) ಮತ್ತು ಕೆಎಪಿಎಸ್‌ಇ ಎಲ್‌ಬಿ(ಮಹಾರಾಷ್ಟ್ರ)ಯ ಸಿಬ್ಬಂದಿ ಬಾಲಕನ ಚಲನವಲನದ ಮೇಲೆ ಕಣ್ಣಿಟ್ಟಿದ್ದಾರೆ.

3 /8

ಕಳೆದ 3 ದಿನಗಳಿಂದ ಸುಮಾರು 300 ಅಧಿಕಾರಿಗಳು, ಉದ್ಯೋಗಿಗಳು, ಕಾರ್ಮಿಕರು ರಾಹುಲ್ ರಕ್ಷಣೆಯಲ್ಲಿ ತೊಡಗಿದ್ದಾರೆ.

4 /8

ಬಿಲಾಸ್‌ಪುರದಿಂದ ರಕ್ಷಣಾ ಸ್ಥಳಕ್ಕೆ ಡ್ರಿಲ್ ಯಂತ್ರ ತಲುಪಿದೆ. ಈ ಯಂತ್ರದ ಮೂಲಕ ಬಂಡೆಯನ್ನು ಕತ್ತರಿಸಿ ಬೋರ್‌ವೆಲ್‌ನಲ್ಲಿ ಸಿಲುಕಿರುವ ರಾಹುಲ್‌ನನ್ನು ಹೊರಕರೆತರುವ ಪ್ರಯತ್ನ ಮಾಡಲಾಗುತ್ತಿದೆ. 

5 /8

ರಾಹುಲ್‌ ಅವರನ್ನು ರಕ್ಷಿಸಲು ಎನ್‌ಡಿಆರ್‌ಎಫ್‌ ತಂಡ ಹಗಲಿರುಳು ರಕ್ಷಣಾ ಕಾರ್ಯದಲ್ಲಿ ನಿರತವಾಗಿತ್ತು.

6 /8

ಬಂಡೆ ಕೊರೆಯುವ ವೇಳೆ ಅಡೆತಡೆ ಉಂಟಾದ್ದರಿಂದ ಆತನನ್ನು ಹೊರತೆಗೆಯಲು ಕೊಂಡ ಸಮಯ ತೆಗೆದುಕೊಳ್ಳುತ್ತಿದೆ

7 /8

ಭಾನುವಾರ ರಾತ್ರಿಯಿಂದಲೇ ಸಿಎಂಎಚ್‌ಒ, ಸಿವಿಲ್ ಸರ್ಜನ್, ಬಿಎಂಒ ಸೇರಿದಂತೆ ವೈದ್ಯರು, ಸ್ಟಾಫ್ ನರ್ಸ್‌ಗಳು ತುರ್ತು ವೈದ್ಯಕೀಯ ವ್ಯವಸ್ಥೆಗೆ ಸಿದ್ಧರಾಗಿದ್ದಾರೆ. 

8 /8

ಸಿಎಂ ಭೂಪೇಶ್ ಬಘೇಲ್ ಅವರು ರಾಹುಲ್ ಪೋಷಕರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತುಕತೆ ಮುಂದುವರಿಸಿದ್ದಾರೆ.