Photos: ಸಿನಿಮಾ ಜೊತೆ ಸಮಾಜ ಸೇವೆ; ಗ್ರಾಮ ದತ್ತು ಪಡೆದ ಸತೀಶ್ ನೀನಾಸಂ!

   

  • Jun 18, 2018, 15:12 PM IST
1 /8

ರಂಗಭೂಮಿಯಲ್ಲಿ ಸಾಕಷ್ಟು ಹೆಸರು ಗಳಿಸಿ, ಚಿತ್ರರಂಗದಲ್ಲಿಯೂ ವಿಭಿನ್ನ ನಟನೆಯಿಂದ ಖ್ಯಾತಿ ಆಗಿರುವ ಸತೀಶ್ ನೀನಾಸಂ ಅವರು, ಇದೀಗ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಸಿನಿಮಾ ಅಭಿನಯದೊಂದಿಗೆ ಸಮಾಜ ಸೇವೆಗೂ ಮುಂದಾಗಿರುವ ಸತೀಶ್ ನೀನಾಸಂ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಹುಲ್ಲೆಗಾಲ ಎಂಬ ಗ್ರಾಮವನ್ನು ದತ್ತು ಪಡೆದಿದ್ದಾರೆ. (All Pics Courtesy: Facebook/@Satish Ninasam)   

2 /8

ಮೂಲತಃ ಮಂಡ್ಯದವರಾದ ಸತೀಶ್ ಅವರು, ಹುಟ್ಟಿ ಬೆಳೆದಿದ್ದು ಎಲ್ಲಾ ಮಂಡ್ಯ ಜಿಲ್ಲೆಯ ಯಳ್ಳದಳ್ಳಿಯಲ್ಲಿ. ಹೀಗಾಗಿ ಹಳ್ಳಿ ಜನರ ಜೀವನ, ಸಮಸ್ಯೆಗಳು, ಕಷ್ಟಗಳನ್ನು ಸ್ವತಃ ನೇರವಾಗಿ ಕಂಡಿರುವ ಅವರು, ಗ್ರಾಮೀಣ ಜನತೆಗೆ ಏನಾದರೂ ಸಹಾಯ ಮಾಡಬೇಕು ಎಂಬ ಆಶಯ ಹೊಂದಿದ್ದವು. ಇದಕ್ಕೆ ಇಂಬು ನೀಡಿದ್ದು, 'ಅಯೋಗ್ಯ' ಚಿತ್ರದ ಚಿತ್ರೀಕರಣ ಸಂದರ್ಭ.

3 /8

'ಅಯೋಗ್ಯ' ಚಿತ್ರದ ಚಿತ್ರೀಕರಣದ ವೇಳೆ ತುಮಕೂರು, ಮಂಡ್ಯ ಹೀಗೆ ಸಾಕಷ್ಟು ಸ್ಥಳಗಳಿಗೆ ಭೇಟಿ ನೀಡಿದ್ದ ಸತೀಶ್ ಅವರ ಕಣ್ಣಿಗೆ ಅಭಿವೃದ್ಧಿಯ ಅಗತ್ಯವಿದೆ ಎಂದು ಅನ್ನಿಸಿದ್ದು, ಮಂಡ್ಯ ಜಿಲ್ಲೆಯ ಹುಲ್ಲೆಗಾಲ ಗ್ರಾಮ. ಈ ಹಳ್ಳಿಯಲ್ಲಿ 50 ಮನೆಗಳಿವೆ. ಅಲ್ಲೆಲ್ಲಾ ವಯಸ್ಸಾದವರೇ ಇದ್ದಾರೆ. ಇವರ ಮಕ್ಕಳು ಊರು ಬಿಟ್ಟು ಬೆಂಗಳೂರು ಸೇರಿದ್ದಾರೆ. ಈ ಗ್ರಾಮದಲ್ಲಿ ಒಂದೂವರೆ ಸಾವಿರ ಓಟುಗಳಿವೆ. ಆದರೆ, ಇಲ್ಲಿ ಮತ ಹಾಕುವವರ ಸಂಖ್ಯೆ ಕೇವಲ 500 ಮಾತ್ರ. ಸರ್ಕಾರದಿಂದ ದೊರೆಯಬೇಕಾದ ಸವಲತ್ತುಗಳಿಂದ ಈ ಗ್ರಾಮ ವಂಚಿತವಾಗಿದೆ. ಹಾಗಾಗಿ ಈ ಗ್ರಾಮದ ಅಭಿವೃದ್ಧಿಗೆ ಮುಂದಾಗಿದ್ದೇನೆ" ಎನ್ನುತ್ತಾರೆ ಸತೀಶ್.

4 /8

ಹುಲ್ಲೆಗಾಲ ಗ್ರಾಮದ ಅಭಿವೃದ್ಧಿಗೆ ಪಣ ತೊಟ್ಟಿರುವ ಸತೀಶ್ ನೀನಾಸಂ ಅವರು, ಗ್ರಾಮದ ಶಾಲೆಗೆ ಭೇಟಿ ನೀಡಿ ಸಮಸ್ಯೆಗಳ ಮಾಹಿತಿಯನ್ನೂ ಪಡೆದಿದ್ದಾರೆ.  

5 /8

ಗ್ರಾಮಸ್ಥರೊಂದಿಗೆ ಕುಂದು-ಕೊರತೆ ಆಲಿಸುವಲ್ಲಿ ಮಗ್ನರಾಗಿರುವ ಸತೀಶ್.

6 /8

ಈಗಾಗಲೇ ಟೀಂ ಸತೀಶ್ ಪಿಕ್ಚರ್ಸ್'ನ 100 ರಿಂದ 150 ಜನ ಸ್ವಯಂ ಸೇವಕರು ಗ್ರಾಮಕ್ಕೆ ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಚರ್ಚಿಸಿದ್ದಾರೆ. ಇನ್ನೊಂದು ತಿಂಗಳಲ್ಲಿ ಶಾಲೆಯನ್ನು ಅಭಿವೃದ್ಧಿಪಡಿಸುವ ಬಗ್ಗೆ ಕಾರ್ಯಪ್ರವೃತ್ತರಾಗುವುದಾಗಿ ಸತೀಶ್ ತಮ್ಮ ಫೇಸ್ ಬುಕ್ ಲೈವ್'ನಲ್ಲಿ ಹೇಳಿಕೊಂಡಿದ್ದಾರೆ.

7 /8

'ನನ್ನ ಚಿತ್ರಗಳಿಂದ ಬರುವ ಹಣದಲ್ಲಿ ಒಂದಿಷ್ಟು ಹಣವನ್ನು ಗ್ರಾಮದ ಅಭಿವೃದ್ಧಿ ಬಳಸುವ ಚಿಂತನೆಯಲ್ಲಿದ್ದೇನೆ. ಅದಕ್ಕಾಗಿ ಕೆಲವು ಯೋಜನೆಗಳನ್ನೂ ಹಾಕಿಕೊಂಡಿದ್ದೇನೆ. ತಮ್ಮೊಂದಿಗೆ ಗ್ರಾಮಗಳ ಅಭಿವೃದ್ಧಿಗೆ ಆಸಕ್ತರೂ ಕೈಜೋಡಿಸಬಹುದು. ಇದಕಾಗಿ ಒಂದು ಟ್ರಸ್ಟ್ ಸ್ಥಾಪಿಸುವ ಆಲೋಚನೆ ಮಾಡುತ್ತಿದ್ದೇನೆ" ಎನ್ನುತ್ತಾರೆ ಸತೀಶ್ ನೀನಾಸಂ.

8 /8

'ಮನಸಾರೆ', 'ಪಂಚರಂಗಿ', 'ಪರಿಚಯ', 'ಯೋಗಿ', 'ಲೈಫು ಇಷ್ಟೇನೇ', 'ರಂಗಪ್ಪ ಹೋಗ್ಬಿಟ್ನಾ', 'ಶಿಕಾರಿ', 'ಪರಮಾತ್ಮ', 'ಪುಟ್ಟಕ್ಕನ ಹೈವೇ', 'ಅಯೋಗ್ಯ' ಮೊದಲಾದ ಚಿತ್ರಗಳಲ್ಲಿ ಅಭಿನಯಿಸಿರುವ ಸತೀಶ್ ನೀನಾಸಂ ಅವರು, ಬಹುಮುಖ ಪ್ರತಿಭೆ. ಇವರ ಸಿನಿಪಯಣ ಮತ್ತಷ್ಟು ಬೆಳೆದು, ಇನ್ನಷ್ಟು ಗ್ರಾಮಗಳ ಅಭಿವೃದ್ಧಿಗೆ ಮುಂದಾಗಲಿ ಎಂದು ಆಶಿಸೋಣ.