TATA ತರುತ್ತಿದೆ 'ಹೊಸ Electric Car' : ಒಂದು ಸಾರಿ ಚಾರ್ಜ್‌ ಮಾಡಿದ್ರೆ 500 KM ಅದರ ಬೆಲೆ ಮತ್ತು ವೈಶಿಷ್ಟ್ಯ ಇಲ್ಲಿ ನೋಡಿ

  • Jul 27, 2021, 20:01 PM IST

ಹೆಚ್ಚುತ್ತಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ಮಧ್ಯೆ, ವಾಹನ ತಯಾರಕರು ಈಗ ವಿದ್ಯುತ್ ಚಾಲಿತ ಹೊಸ ಮಾದರಿಯ ಕರುಗಳನ್ನ ಪರಿಚಯಿಸುವಲ್ಲಿ ನಿರತರಾಗಿದ್ದಾರೆ. ದೇಶದ ಪ್ರಮುಖ ವಾಹನ ತಯಾರಕ ಕಂಪನಿ ಟಾಟಾ ಮೋಟಾರ್ಸ್ ತನ್ನ ಪ್ರಸಿದ್ಧ ಪ್ರೀಮಿಯಂ ಹ್ಯಾಚ್‌ಬ್ಯಾಕ್ ಕಾರು ಟಾಟಾ ಆಲ್ಟ್ರೊಜ್‌ನ ಕಾರನ್ನ ಹೊಸ ಎಲೆಕ್ಟ್ರಿಕ್ ಆವೃತ್ತಿಯಲ್ಲಿ ಮಾರುಕಟ್ಟೆಗೆ ಬಿಡಲು ಕಾರ್ಯನಿರ್ವಹಿಸುತ್ತಿದೆ. ಆಲ್ಫಾ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಕಂಪನಿಯ ಮೊದಲ ಕಾರು ಇದಾಗಿದೆ ಎಂಬುದು ಗಮನಿಸಬೇಕಾದ ಸಂಗತಿ. ಅದರ ಚಾಲನಾ ಶ್ರೇಣಿ, ಬೆಲೆ ಮತ್ತು ವೈಶಿಷ್ಟ್ಯಗಳನ್ನು ನಿಮಗಾಗಿ ಇಲ್ಲಿವೆ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಟಾಟಾ ಮೋಟಾರ್ಸ್ ಆಲ್ಟ್ರೊಜ್ ಇವಿ ಯಲ್ಲಿ ಜಿಪ್ಟ್ರಾನ್ ಎಲೆಕ್ಟ್ರಿಕ್ ಪವರ್‌ಟ್ರೇನ್ ಅನ್ನು ಬಳಸಲಿದೆ. ಆದರೆ ಅತ್ಯಂತ ಆಸಕ್ತಿದಾಯಕ ವಿಷಯವೆಂದರೆ ಕಾರು ಹೆಚ್ಚುವರಿ ಬ್ಯಾಟರಿ ಪ್ಯಾಕ್ ಆಯ್ಕೆಯನ್ನು ಪಡೆಯುವ ಸಾಧ್ಯತೆಯಿದೆ. ಈ ದೊಡ್ಡ ಬ್ಯಾಟರಿ ಪ್ಯಾಕ್ 25 ರಿಂದ 40% ಹೆಚ್ಚಿನ ಚಾಲನಾ ಶ್ರೇಣಿಯನ್ನು ನೀಡುತ್ತದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದ್ದು, ಇದು ಸುಮಾರು 500 ಕಿ.ಮೀ.

2 /4

ವರದಿಗಳನ್ನು ನಂಬಬೇಕಾದರೆ, ಈ ಕಾರು ಒಂದೇ ಚಾರ್ಜ್‌ನಲ್ಲಿ 500 ಕಿ.ಮೀ.ವರೆಗೆ ಚಲಿಸುತ್ತದೆ. ಟಾಟಾ ಆಲ್ಟ್ರೊಜ್ ಎಲೆಕ್ಟ್ರಿಕ್ ನೆಕ್ಸನ್ ಇವಿಗಿಂತ ದೊಡ್ಡ ಬ್ಯಾಟರಿ ಪ್ಯಾಕ್‌ನೊಂದಿಗೆ ಬರಲಿರುವುದರಿಂದ, ಚಾರ್ಜ್ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂದು ನಿರೀಕ್ಷಿಸಲಾಗಿದೆ. ಈ ಬಗ್ಗೆ ಕಂಪನಿಯು ಇನ್ನೂ ಯಾವುದೇ ಮಾಹಿತಿಯನ್ನು ಹಂಚಿಕೊಂಡಿಲ್ಲವಾದರೂ, ಮತ್ತು ಚಾಲನಾ ಶ್ರೇಣಿಯ ಈ ಅಂಕಿಅಂಶಗಳು ಸಂಪೂರ್ಣವಾಗಿ ಮಾಧ್ಯಮ ವರದಿಗಳನ್ನು ಆಧರಿಸಿವೆ.

3 /4

ಪ್ರಸ್ತುತ, ಟಾಟಾ ಮೋಟಾರ್ಸ್ ತನ್ನ ನೆಕ್ಸನ್ ಎಲೆಕ್ಟ್ರಿಕ್ನಲ್ಲಿ 30.2 kWh ಸಾಮರ್ಥ್ಯದ ಬ್ಯಾಟರಿಯನ್ನು ಬಳಸಿದೆ. ಈ ಎಸ್ಯುವಿಯ ಎಲೆಕ್ಟ್ರಿಕ್ ಮೋಟರ್ 127bhp ಶಕ್ತಿಯನ್ನು ಉತ್ಪಾದಿಸುತ್ತದೆ. ಈ ಎಸ್ಯುವಿ ಒಂದೇ ಚಾರ್ಜ್‌ನಲ್ಲಿ 312 ಕಿ.ಮೀ ವರೆಗೆ ಚಾಲನಾ ಶ್ರೇಣಿಯನ್ನು ನೀಡುತ್ತದೆ. ಆಲ್ಟ್ರೊಜ್ ಎಲೆಕ್ಟ್ರಿಕ್ ಗಾಗಿ ಶೇ.25 ರಿಂದ 40 ರಷ್ಟು ಹೆಚ್ಚಿನ ಚಾಲನಾ ಶ್ರೇಣಿಯನ್ನು ಪಡೆಯಲಾಗುತ್ತಿದ್ದರೆ, ಈ ಕಾರು 500 ಕಿ.ಮೀ ವರೆಗೆ ಒಡಲಿದೆ.

4 /4

ಟಾಟಾ ಆಲ್ಟ್ರೊಜ್ ಎಲೆಕ್ಟ್ರಿಕ್ ಕೇಂದ್ರ ಸರ್ಕಾರವು ಜಾರಿಗೆ ತಂದ ಹೊಸ FAME II ಯೋಜನೆಯಿಂದಲೂ ಪ್ರಯೋಜನ ಪಡೆಯಲಿದೆ. ಈ ಎಲೆಕ್ಟ್ರಿಕ್ ಕಾರಿನ ಬೆಲೆ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಕಾರು ಮಾರುಕಟ್ಟೆಗೆ ಬರುವ ಮುನ್ನವೆ ಬೆಲೆಯ ಬಗ್ಗೆ ಏನನ್ನೂ ಹೇಳುವುದು ಕಷ್ಟವಾದರೂ, ಇದನ್ನು 10 ರಿಂದ 12 ಲಕ್ಷ ರೂ.ಗಳಿಗೆ ಬಿಡುಗಡೆ ಮಾಡಬಹುದೆಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.