'Reserve Bank' ಬಳಿಕ 'Kailasa'ಗೆ ವಿಮಾನ ಸೇವೆ ಆರಂಭಿಸಿದ ನಿತ್ಯಾನಂದ

Kailasa: ಭಾರತದಲ್ಲಿ ಪೊಲೀಸರು ನಿತ್ಯಾನಂದನಿಗಾಗಿ ಹುಡುಕಾಟದಲ್ಲಿ ನಿರತರಾಗಿದ್ದಾರೆ. ಆದರೆ,ನಿತ್ಯಾನಂದ ಮಾತ್ರ ತನಗಾಗಿದೆ ದೇಶವೊಂದನ್ನು ಖರೀದಿಸಿದ್ದಾನೆ. ಲ್ಯಾಟಿನ್ ಅಮೆರಿಕಾದ ಇಕ್ವೆಡಾರ್ ಹತ್ತಿರವಿರುವ ಈ ದೇಶಕ್ಕೆ ಸಂಸ್ಕೃತ, ಇಂಗ್ಲಿಷ್ ಹಾಗೂ ತಮಿಳು ಭಾಷೆಗಳಾಗಿವೆ.

ನವದೆಹಲಿ: Fugitive Godman Nithyanand:ರೇಪ್ ಪ್ರಕರಣದ ಪ್ರಮುಖ ಆರೋಪಿ ನಿತ್ಯಾನಂದ ಸ್ವಂತ ರಾಷ್ಟ್ರ ರಚನೆ ಮಾಡಿದ ಬಳಿಕ, ತನ್ನ ದೇಶದಲ್ಲಿ ರಿಸರ್ವ್ ಬ್ಯಾಂಕ್ ಕೂಡ ತೆರೆದಿರುವುದಾಗಿ ಈ ಮೊದಲೇ ಹೇಳಿದ್ದಾನೆ. ಆದರೆ, ಇದೀಗ ಈ ಪಲಾಯನಗೈದಿರುವ ನಿತ್ಯಾನಂದನ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ, ಕೈಲಾಸಾ ಹೆಸರಿನ ಈ ದೇಶಕ್ಕೆ ವಿಸಾ ಕೂಡ ಇರಲಿದೆ ಎನ್ನಲಾಗಿದೆ. ಈ ಕುರಿತು ನಿತ್ಯಾನಂದನ ವಿಡಿಯೋವೊಂದು ಕೂಡ ಬಹಿರಂಗಗೊಂಡಿದೆ. ಈ ವಿಡಿಯೋದಲ್ಲಿ ನಿತ್ಯಾನಂದ (Nithyananda) ಕೈಲಾಸಾ ಕುರಿತು ಮಾತನಾಡುತ್ತಿದ್ದಾನೆ. ಅಷ್ಟೇ ಅಲ್ಲ ತನ್ನ ದೇಶಕ್ಕೆ ಭೇಟಿ ನೀಡಲು ಚಾರ್ಟರ್ಡ್ ಫ್ಲೈಟ್ ಕೂಡ ಇರುವುದರ ಜೋಗೆಗೆ ಕೈಲಾಸಾಗೆ ತನ್ನದೇ ಆದ ಸಂವಿಧಾನ, ಕಾನೂನುಗಳು ಕೂಡ ಇರಲಿವೆ ಎಂದಿದ್ದಾನೆ.

 

ಇದನ್ನು ಓದಿ-ಭಾರತವನ್ನು ತೊರೆದು ಪ್ರತ್ಯೇಕ ದೇಶವನ್ನೇ ಸೃಷ್ಟಿಸಿದ ನಿತ್ಯಾನಂದ....! ಇಲ್ಲಿ ಏನುಂಟು ಏನಿಲ್ಲ...!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದುಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ

Android Link - https://bit.ly/3hDyh4G

Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಲೈಂಗಿಕ ಕಿರುಕುಲ್ ಅಆರೋಪ ಎದುರಿಸುತ್ತಿರುವ ನಿತ್ಯಾನಂದ ಭಾರತದಿಂದ ಸುಮಾರು 1600 ಕಿಲೋಮೀಟರ್ ದೂರದಲ್ಲಿ ತನ್ನದೇ ಆದ ದೇಶ ನಿರ್ಮಾಣ ಮಾಡಿದ್ದಾನೆ. ಲ್ಯಾಟಿನ್ ಅಮೇರಿಕಾದ ಇಕ್ವೆಡಾರ್ ಹತ್ತಿರ ತನ್ನದೇ ಆದ ರಾಷ್ಟ್ರ ನಿರ್ಮಿಸಿದ್ದಾನೆ. ಸಂಸ್ಕ್ರತ, ಇಂಗ್ಲಿಷ್ ಹಾಗೂ ತಮಿಳು ಭಾಷೆ ಈ ದೇಶದ ಭಾಷೆಗಳಾಗಿವೆ ಎನ್ನಲಾಗಿದೆ.

2 /4

ಎ. ರಾಜಶೇಖರನ್ ಅಲಿಯಾಸ್ ಸ್ವಾಮಿ ನಿತ್ಯಾನಂದ್ ಜಿ ಮಹಾರಾಜ್ ತನಗಾಗಿ ಹೊಸ ಪ್ರಪಂಚವನ್ನು ಸೃಷ್ಟಿಸಿದ್ದಾನೆ . ಕೈಲಾಸ ಬಗ್ಗೆ, ವೆಬ್‌ಸೈಟ್ ಗಳಲ್ಲಿ ಇದು ವಿಶ್ವದ ಏಕೈಕ ಹಿಂದೂ ರಾಷ್ಟ್ರ ಎಂದು ಹೇಳಲಾಗಿದೆ. ಅಲ್ಲಿ ಅದು ತನ್ನದೇ ಆದ ಪ್ರಧಾನ ಮಂತ್ರಿ, ಕ್ಯಾಬಿನೆಟ್, ಕಾನೂನು, ಸಂವಿಧಾನ ಮತ್ತು ಸೈನ್ಯವನ್ನು ಹೊಂದಿರುತ್ತದೆ. ಇದರೊಂದಿಗೆ, ತುಳಿತಕ್ಕೊಳಗಾದ ಹಿಂದೂಗಳಿಗೆ ಆಶ್ರಯ ನೀಡಲು ಪ್ರತ್ಯೇಕ ದೇಶವನ್ನು ರಚಿಸಿದ್ದೇನೆ ಎಂದು ಮೋಸಗಾರ ಬಾಬಾ ನಿತ್ಯಾನಂದ ಹೇಳಿದ್ದಾನೆ.

3 /4

ಯಾವುದೇ ಹಿಂದೂ ಇಲ್ಲಿ ಪೌರತ್ವ ಪಡೆಯಬಹುದು ಎಂದು ವೆಬ್‌ಸೈಟ್‌ನಲ್ಲಿ ತಿಳಿಸಲಾಗಿದೆ. ಹಿಂದೂ ಧರ್ಮದ ಜನರು, ತಮ್ಮ ಜಾತಿಯನ್ನು ಲೆಕ್ಕಿಸದೆ,  ಇಲ್ಲಿ ಸುರಕ್ಷಿತ ಆಶ್ರಯ ಪಡೆಯಬಹುದು. ಅವರು ಇಲ್ಲಿಗೆ ಬರಬಹುದು. ಈಕ್ವೆಡಾರ್ ಬಳಿಯ ಈ ದ್ವೀಪವನ್ನು ಖರೀದಿಸಿರುವನಿತ್ಯಾನಂದ ಅದನ್ನು ಕೈಲಾಸಾ ರಾಷ್ಟ್ರವನ್ನಾಗಿಸಿದ್ದಾನೆ.  ಹಾಗೆಯೇ ಇಲ್ಲಿರುವ ರಾಷ್ಟ್ರೀಯ ಪ್ರಾಣಿ ನಂದಿ ಬುಲ್, ರಾಷ್ಟ್ರೀಯ ಮರ ಆಲದ ಮರ ಮತ್ತು ರಾಷ್ಟ್ರೀಯ ಹೂವು ಕಮಲ ಎಂದು ತಮ್ಮ ವೆಬ್‌ಸೈಟ್‌ನಲ್ಲಿ ತಿಳಿಸಿದ್ದಾನೆ.

4 /4

ಜೈಲಿನಲ್ಲಿರಬೇಕಾದ ಈ ಅಪರಾಧಿ ತನ್ನನ್ನು ತಾನು ಶಿವನ ಅವತಾರವೆಂದು ಕರೆದುಕೊಳ್ಳುತ್ತಾನೆ. ಪರಾರಿಯಾದ ನಿತ್ಯಾನಂದ ದೇಶದಿಂದ ಓಡಿಹೋಗಿದ್ದು, ಈಗ ತನ್ನ ಜಾಲವನ್ನು ವಿದೇಶದಲ್ಲಿ ಹರಡಲು ಯೋಜಿಸಿದ್ದಾನೆ. ನಿತ್ಯಾನಂದ ಅತ್ಯಾಚಾರ ಮತ್ತು ಅಪಹರಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾನೆ. ಅವನು ಎರಡು ಬಾರಿ ಜೈಲಿಗೂ ಸಹ ಹೋಗಿದ್ದಾನೆ. ಕೈಲಾಸವನ್ನು ತನ್ನ ದೇಶ ಎಂದು ಬಣ್ಣಿಸುವ ನಿತ್ಯಾನಂದ, ಅದು ತನ್ನದೇ ಆದ ಧ್ವಜವನ್ನು ಹೊಂದಿದ್ದು, ಅದರ ಮೇಲೆ ನಿತ್ಯಾನಂದ ಚಿತ್ರವಿದೆ.