ಕಿವಿ ಮಸಾಜ್ನ ಇತರ ಹಲವು ಪ್ರಯೋಜನಗಳ ಬಗ್ಗೆ ಇಂದು ನಾವು ನಿಮಗೆ ಹೇಳಲಿದ್ದೇವೆ ಕಿವಿ ಗೋಡೆ ಅಥವಾ ಕಾರ್ಟಿಲೆಜ್ ಅನ್ನು ಉಜ್ಜುವುದು, ಒತ್ತುವುದು ಅಥವಾ ತಿರುಗಿಸುವುದು, ಎಳೆಯುವುದು, ಹಿತಕರವಾದ ಪರಿಣಾಮವನ್ನು ಬೀರುತ್ತದೆ.
ನವದೆಹಲಿ: ಒತ್ತಡ ನಿವಾರಣೆಗೆ ಮಸಾಜ್ (Massage) ಒಂದು ಉತ್ತಮ ಆಯ್ಕೆ. ಹಲವರು ಒತ್ತಡವನ್ನು ದೂರಗೊಳಿಸಲು ತಮ್ಮ ಶರೀರದ ಮಸಾಜ್ ಮಾಡಿಸುತ್ತಾರೆ. ಆದರೆ, ಕಿವಿಗಳಿಗೆ ಮಸಾಜ್ ಮಾಡಿಸುವುದು ಕೂಡ ನಮ್ಮ ದೇಹಕ್ಕೆ ಪ್ರಯೋಜನಕಾರಿಯಗಿದೆ ಎಂಬ ಅಂಶ ನಿಮಗೆ ತಿಳಿದಿದೆಯೇ. ಇಂದು ಕಿವಿಗಳಿಗೆ ಮಸಾಜ್ ಮಾಡುವುದರಿಂದ ಆಗುವ ಲಾಭಗಳ ಕುರಿತು ನಾವು ನಿಮಗೆ ಹೇಳಲಿದ್ದೇವೆ.
ಇದನ್ನು ಓದಿ- ಈ ಕಾಯಿಲೆಗಳಿಗೆ ರಾಮಬಾಣ ಅಜ್ವಾಯಿನ್ ನೀರು, ಹೇಗೆ ತಯಾರಿಸಬೇಕು? ಇಲ್ಲಿದೆ ವಿಧಾನ
ಒತ್ತಡವನ್ನು ನಿವಾರಿಸಲು ಜನರು ಮೊದಲು ತಮ್ಮ ಮಸಾಜ್ ಮಾಡುತ್ತಾರೆ. ಆದರೆ ಅನೇಕ ಜನರಿಗೆ ಕಿವಿ ಮಸಾಜ್ ಸಿಗುವುದಿಲ್ಲ. ಆದರೆ ಕಿವಿ ಮಸಾಜ್ ನಿಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ಕಿವಿ ಮಸಾಜ್ನ ಇತರ ಹಲವು ಪ್ರಯೋಜನಗಳ ಬಗ್ಗೆ ನಾವು ನಿಮಗೆ ಹೇಳುತ್ತೇವೆ. ಕಿವಿ ಗೋಡೆ ಅಥವಾ ಕಾರ್ಟಿಲೆಜ್ ಅನ್ನು ಉಜ್ಜುವುದು, ಒತ್ತುವುದು ಅಥವಾ ತಿರುಗಿಸುವುದು, ಎಳೆಯುವುದು, ಹಿತಕರವಾದ ಪರಿಣಾಮವನ್ನು ಬೀರುತ್ತದೆ. ಎಣ್ಣೆಯಿಂದ ಅಥವಾ ಎಣ್ಣೆ ಇಲ್ಲದೆಯೂ ಕೂಡ ನೀವು ಕಿವಿಗಳ ಮಸಾಜ್ ಮಾಡಬಹುದು.
ಕಿವಿ ಹಾಲೆ ನಿಧಾನವಾಗಿ ಉಜ್ಜುವುದು ಮತ್ತು ಎಳೆಯುವುದು ತುಂಬಾ ಪ್ರಯೋಜನಕಾರಿ. ಇದು ಬಹಳಷ್ಟು ನರಗಳನ್ನು ಉತ್ತೇಜಿಸುತ್ತದೆ, ಇದು ಎಂಡಾರ್ಫಿನ್ಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುವುದಲ್ಲದೆ ರಕ್ತ ಪರಿಚಲನೆಯನ್ನು ಸುಲಲಿತಗೊಳಿಸುತ್ತದೆ.
ಕಿವಿಗಳ ಮಸಾಜ್ ಮಾಡುವುದರಿಂದ ತಲೆನೋವು ಹಾಗೂ ಮೈಗ್ರೇನ್ ನಿಂದ ಪರಿಹಾರ ಸಿಗುತ್ತದೆ. ಇದೊಂದು ತುಂಬಾ ಸರಳ ಹಾಗೂ ಪ್ರಾಕೃತಿಕ ವಿಧಾನವಾಗಿದೆ.
ತೂಕ ಇಳಿಕೆಗೆ ಹಲವು ವಿಧಾನಗಳಿವೆ. ಉದಾ-ಉತ್ತಮ ಆಹಾರ ಕ್ರಮ, ಡಾಯಟಿಂಗ್, ಜಿಮ್ ಹಾಗೂ ಎಕ್ಸರ್ ಸೈಜ್. ಆದರೆ, ಕಿವಿಗಳಿಗೆ ಮಸಾಜ್ ಮಾಡುವುದರಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ. ಕಿವಿಗಳನ್ನು ಉಜ್ಜುವುದರಿಂದ ತೂಕ ಇಳಿಕೆ ಮಾಡುವುದರಲ್ಲಿ ಸಹಕಾರಿಯಾಗಿದೆ.
ನಾವು ಕೆಲವು ಕೆಲಸಗಳನ್ನು ಮಾಡಿದಾಗ, ನಮ್ಮ ಶರೀರ ದಣಿಯುತ್ತದೆ ಮತ್ತು ದೇಹದ ಶಕ್ತಿಯು ಕುಂದುತ್ತದೆ. ಕಡಿಮೆ ಶಕ್ತಿಯಿಂದಾಗಿ ನಾವು ದಣಿದಿದ್ದೇವೆ ಎಂಬ ಭಾಸ ನಮಗಾಗುತ್ತದೆ. ಕಿವಿಗೆ ಮಸಾಜ್ ಮಾಡುವುದರಿಂದ ಮೆದುಳಿನ ಕೆಲವು ಕೇಂದ್ರಗಳನ್ನು ಸಕ್ರೀಯಗೊಳ್ಳುತ್ತದೆ ಮತ್ತು ಶರೀರಕ್ಕೆ ಪುನಃ ಶಕ್ತಿ ಲಭಿಸುತ್ತದೆ.
ಉತ್ತಮ ನಿದ್ರೆಗಾಗಿ ಒತ್ತಡದಿಂದ ಮುಕ್ತರಾಗುವುದು ತುಂಬಾ ಆವಶ್ಯಕ. ಕವಿಗಳಿಗೆ ಮಸಾಜ್ ಮಾಡುವುದರಿಂದ ಶರೀರಕ್ಕೆ ಆರಾಮ ಲಭಿಸುತ್ತದೆ. ನಿದ್ರಾಹೀನತೆ ಸಮಸ್ಯೆಗೆ ಇದೊಂದು ಉತ್ತಮ ಪ್ರಕ್ರಿಯೆ ಸಾಬೀತಾಗಬಹುದು.
ಕಿವಿಗಳಿಗೆ ಮಸಾಜ್ ಮಾಡುವುದರಿಂದ ಒತ್ತಡ ಹಾಗೂ ಚಿಂತೆ ನಿವಾರಣೆಯಾಗುತ್ತವೆ. ಯಾವುದೇ ಓರ್ವ ವ್ಯಕ್ತಿ ಒತ್ತಡ, ಪ್ರಕ್ಷುಬ್ಧತೆ ಹಾಗೂ ಕಿರಿಕಿರಿ ಅನುಭವಿಸುತ್ತಿದ್ದರೆ ಅವರಿಗೆ ಕಿವಿಗಳಿಗೆ ಮಸಾಜ್ ಮಾಡುವುದು ಉತ್ತಮ ಉಪಾಯವಾಗಿದೆ.