7th Pay Commission: ಲಕ್ಷಾಂತರ ಸರ್ಕಾರಿ ನೌಕರರಿಗೆ ಸಿಗಲಿದೆ ದೀಪಾವಳಿ ಗಿಫ್ಟ್, ಸಂಬಳ ಹೊರತು ಸಿಗಲಿವೆ ಸಾವಿರಾರು ರೂ.

ದೀಪಾವಳಿ 2020ರ ಮೊದಲು ಲಕ್ಷಾಂತರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ ಸಿಕ್ಕಿದೆ.

  • Nov 06, 2020, 12:23 PM IST

ನವದೆಹಲಿ: ದೀಪಾವಳಿ 2020ರ ಮೊದಲು ಲಕ್ಷಾಂತರ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್ (Diwali Gift) ಸಿಕ್ಕಿದೆ. ಉತ್ತರ ಪ್ರದೇಶದ ಸರ್ಕಾರ ದೀಪಾವಳಿಯ ಶುಭ ಅವಸರದಂದು ರಾಜ್ಯದ ಸುಮಾರು 14, 82,187 ನೌಕರರಿಗೆ ದೊಡ್ಡ ಉಡುಗೊರೆಯೊಂದನ್ನು ನೀಡಿದೆ. ಈ ಉಡುಗೊರೆಯಲ್ಲಿ ನೌಕರರಿಗೆ 30 ದಿನಗಳ ಸಂಬಳ ಬೋನಸ್ ರೂಪದಲ್ಲಿ ಸಿಗಲಿದೆ.

ಇದನ್ನು ಓದಿ- ರಾಜ್ಯ ಪೊಲೀಸರಿಗೆ ದೀಪಾವಳಿ ಗಿಫ್ಟ್: ವೇತನ ಹೆಚ್ಚಳ ಮಾಡಿದ ಸಿಎಂ

1 /5

ಬೋನಸ್ ಗಾಗಿ ಪ್ರತಿ ನೌಕರರಿಗೆ ರೂ.6908 ರೂ. ಮಂಜೂರು ಮಾಡಲಾಗಿದ್ದು, ಇದರ ಶೇ.75 ರಷ್ಟು ಭಾಗ ನೌಕರರ ಭವಿಷ್ಯ ನಿಧಿ(GPF) ಖಾತೆಗೆ ಸೇರಲಿದೆ ಹಾಗೂ ಉಳಿದ ಶೇ.25ರಷ್ಟು ಭಾಗ ಅಂದರೆ ರೂ.1727ಗಳು ಪೇಮೆಂಟ್ ರೂಪದಲ್ಲಿ ಸಿಗಲಿವೆ. ಇದರಿಂದ ರಾಜ್ಯ ಬೊಕ್ಕಸಕ್ಕೆ ರೂ.1022.75 ಕೋಟಿ ರೂ.ಗಳ ಹೊರೆ ಬೀಳಲಿದೆ.

2 /5

ಕೊರೊನಾವೈರಸ್ ಕಾಲಾವಧಿಯಲ್ಲಿ ಮತ್ತು ಬದಲಾದ ಸನ್ನಿವೇಶಗಳಲ್ಲಿ, ಈ ಬಾರಿ ರಾಜ್ಯದಲ್ಲಿ ದೀಪಾವಳಿಯಂದು ಬೋನಸ್ ಪಡೆಯುವ ಬಗ್ಗೆ ನೌಕರರಲ್ಲಿ ಗೊಂದಲವಿತ್ತು. ಆದರೆ ಮುಖ್ಯಮಂತ್ರಿಯ ಘೋಷಣೆಯ ನಂತರ ಕಾರ್ಮಿಕರ ಮುಖದಲ್ಲಿ ಮಂದಹಾಸ ಮರಳಿದೆ.

3 /5

ರಾಜ್ಯದ ಎಲ್ಲಾ ಗೆಜೆಟೆಡ್ ಅಲ್ಲದ ರಾಜ್ಯ ನೌಕರರು, ರಾಜ್ಯ ವಿವಿಧ ಇಲಾಖೆಗಳ ಕೆಲಸ ನಿರ್ವಹಿಸುವ ನೌಕರರು, ರಾಜ್ಯ ಅನುದಾನಿತ ಶಿಕ್ಷಣ ಸಂಸ್ಥೆಗಳು, ಸ್ಥಳೀಯ ಸಂಸ್ಥೆಗಳು ಮತ್ತು ಜಿಲ್ಲಾ ಪಂಚಾಯತ್ ನೌಕರರು ಮತ್ತು ದೈನಂದಿನ ವೇತನ ಪಡೆಯುವವರು ದೀಪಾವಳಿಯಂದು ಬೋನಸ್ ಪಡೆಯಲಿದ್ದಾರೆ.

4 /5

ಕಳೆದ ವರ್ಷದಂತೆ, ಬೋನಸ್ ಮೊತ್ತದ 75 ಪ್ರತಿಶತವನ್ನು ಜಿಪಿಎಫ್ ಖಾತೆಗೆ ಜಮಾ ಮಾಡಲಾಗಿದ್ದರೆ, 25 ಪ್ರತಿಶತದಷ್ಟು ಹಣವನ್ನು ನಗದು ರೂಪದಲ್ಲಿ ಪಾವತಿಸಲಾಗುವುದು. ನೌಕರರ ಭವಿಷ್ಯ ನಿಧಿ ಖಾತೆಯ ಸದಸ್ಯರಲ್ಲದವರು ಮೊತ್ತದ ಬದಲಾಗಿ ಎನ್‌ಎಸ್‌ಸಿ ಪಡೆಯಲಿದ್ದಾರೆ ಅಥವಾ ಮೊತ್ತವನ್ನು ಪಿಪಿಎಫ್ ಖಾತೆಗೆ ಜಮಾ ಮಾಡಲಾಗುತ್ತದೆ.

5 /5

ಮಾರ್ಚ್ 31, 2020 ರ ನಂತರ ನಿವೃತ್ತರಾದ ಅಥವಾ 2021 ರ ಏಪ್ರಿಲ್ 30 ರೊಳಗೆ ನಿವೃತ್ತಿ ಹೊಂದಲಿರುವ ನೌಕರರಿಗೆ ಬೋನಸ್ ಸಂಪೂರ್ಣ ಮೊತ್ತವನ್ನು ನಗದು ರೂಪದಲ್ಲಿ ಪಾವತಿಸಲಾಗುವುದು ಎಂದು ಸರ್ಕಾರ ಹೇಳಿದೆ.