Big news: ಈಗ ನೀವು WhatsApp ಮೂಲಕವೂ ಪೇಮೆಂಟ್ ಮಾಡಬಹುದು

            

WhatsApp Payment: ದೇಶದಲ್ಲಿ 'ಹಂತಹಂತವಾಗಿ' ಪಾವತಿ ಸೇವೆಯನ್ನು ಪ್ರಾರಂಭಿಸಲು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಾಪ್ ಅನ್ನು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಅನುಮೋದಿಸಿದೆ.

1 /4

ಮುಂಬೈ: ದೇಶದಲ್ಲಿ 'ಹಂತ ಹಂತವಾಗಿ' ಪಾವತಿ ಸೇವೆಯನ್ನು ಪ್ರಾರಂಭಿಸಲು ಫೇಸ್‌ಬುಕ್ ಒಡೆತನದ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಅನ್ನು ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಗುರುವಾರ ಅನುಮೋದಿಸಿದೆ. ಒಟ್ಟು ಯುಪಿಐ ವಹಿವಾಟಿನಲ್ಲಿ ಮೂರನೇ ವ್ಯಕ್ತಿಯ ಮೇಲೆ ಕೇವಲ 30 ಪ್ರತಿಶತದಷ್ಟು ಷೇರು ಮಿತಿಯನ್ನು ನಿಗದಿಪಡಿಸಿದ ನಂತರ ಎನ್‌ಪಿಸಿಐ ಈ ಘೋಷಣೆ ಮಾಡಿದೆ. ಇದರರ್ಥ ವಾಟ್ಸಾಪ್ ಅಥವಾ ಅದರ ಪ್ರತಿಸ್ಪರ್ಧಿ ಗೂಗಲ್‌ನ ಗೂಗಲ್ ಪೇ (Google Pay) ಸೇವೆ ಮತ್ತು ವಾಲ್‌ಮಾರ್ಟ್‌ನ ಫೋನ್ ಪೇ (Phone Pay) ಸೇವೆ ಯುಪಿಐ ಅಡಿಯಲ್ಲಿ ಒಟ್ಟು ವಹಿವಾಟಿನ ಗರಿಷ್ಠ 30 ಪ್ರತಿಶತದವರೆಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ. ಎನ್‌ಪಿಸಿಐ ಯುನಿಫೈಡ್ ಪೇಮೆಂಟ್ ಇಂಟರ್ಫೇಸ್ (ಯುಪಿಐ) ಅನ್ನು ನಿರ್ವಹಿಸುತ್ತದೆ, ಇದು ಎರಡು ಮೊಬೈಲ್ ಫೋನ್‌ಗಳೊಂದಿಗೆ ನೈಜ-ಸಮಯದ ಪಾವತಿಯನ್ನು ಅಥವಾ ಅಂಗಡಿಯವರೊಂದಿಗೆ ಅಂದರೆ ವ್ಯಾಪಾರ ವ್ಯವಹಾರದಲ್ಲಿ ಪಾವತಿಗೆ ಅನುಮತಿ ಕಲ್ಪಿಸುತ್ತದೆ.

2 /4

ಯುಪಿಐ ವಹಿವಾಟಿನಲ್ಲಿ ಯಾವುದೇ ಮೂರನೇ ವ್ಯಕ್ತಿಗೆ ವಹಿವಾಟಿನ ಮಿತಿಯನ್ನು ನಿಗದಿಪಡಿಸುವುದು ಇಡೀ ವ್ಯವಸ್ಥೆಯ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಎನ್‌ಪಿಸಿಐ ಹೇಳಿಕೆಯಲ್ಲಿ ತಿಳಿಸಿದೆ. ಅಕ್ಟೋಬರ್‌ನಲ್ಲಿ ಯುಪಿಐ ಅಡಿಯಲ್ಲಿ ವಹಿವಾಟಿನ ಸಂಖ್ಯೆ ಎರಡು ಬಿಲಿಯನ್ ದಾಟಿದೆ ಮತ್ತು ಇದು ಇನ್ನೂ ಹೆಚ್ಚಾಗುವ ಸಾಧ್ಯತೆಯಿದೆ. ವೀಚಾಟ್ ಮಾತ್ರ ಚೀನಾದಲ್ಲಿ ಒಂದು ಶತಕೋಟಿಗೂ ಹೆಚ್ಚು ಸಕ್ರಿಯ ಬಳಕೆದಾರರನ್ನು ಹೊಂದಿದೆ ಎಂಬುದು ಗಮನಾರ್ಹ. ಈ ನಿಟ್ಟಿನಲ್ಲಿ ಪಾವತಿ ವ್ಯವಹಾರದಲ್ಲಿ ಕೆಲಸ ಮಾಡುವ ಕಂಪನಿಗಳು ವಾಟ್ಸಾಪ್ ಪಾವತಿ ಸೇವೆಗಳನ್ನು ಪ್ರಾರಂಭಿಸಲು ಅನುಮತಿಸುವ ಮೂಲಕ ಭಾರತೀಯ ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪಾವತಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ ಎಂದು ನಿರೀಕ್ಷಿಸಲಾಗಿದೆ. 

3 /4

ಮೇ ವೇಳೆಗೆ ವಾಟ್ಸಾಪ್ ದೇಶದಲ್ಲಿ 400 ದಶಲಕ್ಷಕ್ಕೂ ಹೆಚ್ಚು ಬಳಕೆದಾರರನ್ನು ಹೊಂದಿದ್ದರೆ, ಇತರ ತೃತೀಯ ಅಪ್ಲಿಕೇಶನ್‌ಗಳು ಅಂದರೆ ಗೂಗಲ್ ಪೇ 75 ಮಿಲಿಯನ್ ಬಳಕೆದಾರರನ್ನು ಮತ್ತು ಫೋನ್ ಪೇ 60 ಮಿಲಿಯನ್ ಬಳಕೆದಾರರನ್ನು ಹೊಂದಿವೆ. ವಾಟ್ಸಾಪ್ ಕಳೆದ ಎರಡು ವರ್ಷಗಳಿಂದ ಪೈಲಟ್ ಆಧಾರದ ಮೇಲೆ ಸೇವೆಯನ್ನು ನಿರ್ವಹಿಸುತ್ತಿತ್ತು. ಆದರೆ ಡೇಟಾ ಸ್ಥಳೀಕರಣದ ಅವಶ್ಯಕತೆಗಳನ್ನು ಪೂರೈಸದ ಕಾರಣ ಅಧಿಕೃತ ಅನುಮತಿಯನ್ನು ನೀಡಿರಲಿಲ್ಲ.

4 /4

ಎನ್‌ಪಿಸಿಐ ವಾಟ್ಸ್‌ಆ್ಯಪ್‌ಗೆ ಅವಕಾಶ ನೀಡುವ ಮತ್ತು ವಹಿವಾಟು ಮಿತಿಗಳನ್ನು ನಿಗದಿಪಡಿಸುವ ಎರಡು ಪ್ರತ್ಯೇಕ ಹೇಳಿಕೆಗಳನ್ನು ನೀಡಿದೆ. ಹೇಳಿಕೆಯ ಪ್ರಕಾರ ಯುಪಿಐ ಅಡಿಯಲ್ಲಿ ಪ್ರಕ್ರಿಯೆಯಲ್ಲಿರುವ ಎಲ್ಲಾ ವಹಿವಾಟುಗಳ ಒಟ್ಟು ಸಂಖ್ಯೆಯ ಶೇಕಡಾ 30 ರ ಮಿತಿ 2021ರ ಜನವರಿ 1 ರಿಂದ ಎಲ್ಲಾ ತೃತೀಯ ಅಪ್ಲಿಕೇಶನ್ ಸೇವಾ ಪೂರೈಕೆದಾರರಿಗೆ (ಟಿಪಿಎಪಿಎಸ್) ಅನ್ವಯವಾಗುತ್ತದೆ. ಹೇಳಿಕೆಯ ಪ್ರಕಾರ ವಾಟ್ಸಾಪ್ ಈಗ ಯುಪಿಐ ಸೇವೆಗಳನ್ನು ಮಲ್ಟಿ-ಬ್ಯಾಂಕ್ ಮಾದರಿಯಲ್ಲಿ ಪ್ರಾರಂಭಿಸಬಹುದು. ಎರಡು ಕೋಟಿ ನೋಂದಾಯಿತ ಬಳಕೆದಾರರ ಮೂಲಕ ಅದನ್ನು ಪ್ರಾರಂಭಿಸಬಹುದು ಮತ್ತು ಇದು ತನ್ನ ಚಂದಾದಾರರ ಸಂಖ್ಯೆಯನ್ನು ಹಂತ ಹಂತವಾಗಿ ಹೆಚ್ಚಿಸಬಹುದು.