2022ರಲ್ಲಿ 'ರಾಹುವಿನ ಪ್ರಕೋಪಕ್ಕೆ ಒಳಗಾಗಬೇಕಾಗುತ್ತದೆ ಈ 6 ರಾಶಿಯವರು, ಯಾವ್ಯಾವ ಸಂದರ್ಭಗಳಲ್ಲಿ ಎದುರಾಗಲಿದೆ ನಷ್ಟ ?

ಶನಿ ಮತ್ತು ರಾಹುವಿನ ರಾಶಿಚಕ್ರದ ಬದಲಾವಣೆಗಳು ಅತ್ಯಂತ ಮುಖ್ಯವಾದವು. ಏಕೆಂದರೆ ಈ ಗ್ರಹಗಳು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಗ್ರಹಗಳಾಗಿರುತ್ತದೆ.

ನವದೆಹಲಿ : 2022 ರಲ್ಲಿ ಗ್ರಹಗಳ ಚಲನೆಯಲ್ಲಿ ಪ್ರಮುಖ ಬದಲಾವಣೆಗಳಾಗಲಿವೆ. ಇದರಲ್ಲಿ ಶನಿ ಮತ್ತು ರಾಹುವಿನ ರಾಶಿಚಕ್ರದ ಬದಲಾವಣೆಗಳು ಅತ್ಯಂತ ಮುಖ್ಯವಾದವು. ಏಕೆಂದರೆ ಈ ಗ್ರಹಗಳು ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡುವ ಗ್ರಹಗಳಾಗಿರುತ್ತದೆ.  ಇದನ್ನು ಹೊರತುಪಡಿಸಿ, ಈ ಗ್ರಹಗಳು ಒಂದೇ ರಾಶಿಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತವೆ. ಈ ಕಾರಣದಿಂದಾಗಿ, ಅವರ ಸ್ಥಿತಿಯಲ್ಲಿನ ಬದಲಾವಣೆಯ ಪರಿಣಾಮವು ದೀರ್ಘಕಾಲದವರೆಗೆ ಇರುತ್ತದೆ. ಶನಿ ಗ್ರಹವು ಎರಡೂವರೆ ವರ್ಷದಲ್ಲಿ ಮತ್ತು ರಾಹು ಒಂದೂವರೆ ವರ್ಷಗಳಲ್ಲಿ ಬದಲಾಗುತ್ತದೆ. 2021 ರಲ್ಲಿ, ಈ ಎರಡೂ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸಲಿಲ್ಲ ಮತ್ತು ಈಗ 2022 ರಲ್ಲಿ, ಈ ಎರಡೂ ಅಪಾಯಕಾರಿ ಗ್ರಹಗಳು ರಾಶಿಚಕ್ರವನ್ನು ಬದಲಾಯಿಸುತ್ತವೆ. ಏಪ್ರಿಲ್ 12 ರಂದು ಬೆಳಿಗ್ಗೆ 10:36 ಕ್ಕೆ ರಾಹು ರಾಶಿಯನ್ನು ಬದಲಾಯಿಸುತ್ತಾನೆ ಮತ್ತು ಇದರೊಂದಿಗೆ 6 ರಾಶಿಯವರಿಗೆ ಕಷ್ಟದ ಸಮಯಗಳು ಪ್ರಾರಂಭವಾಗುತ್ತವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

ಮೇಷ ರಾಶಿಯವರಿಗೆ, ಏಪ್ರಿಲ್ ತಿಂಗಳಲ್ಲಿ ರಾಹುವಿನ ಸಂಕ್ರಮಣವು ಕುಟುಂಬ ಮತ್ತು ವ್ಯಾಪಾರ ಜೀವನದಲ್ಲಿ ತೊಂದರೆಗಳನ್ನು ಉಂಟುಮಾಡುತ್ತದೆ. ಈ ಕಾರಣದಿಂದಾಗಿ, ಸಂಬಂಧದಲ್ಲಿ ಬಿರುಕುಂಟಾಗುವ ಸಾಧ್ಯತೆಯಿದೆ. ಅಲ್ಲದೆ ಹಣದ ನಷ್ಟವೂ ಆಗಬಹುದು. 

2 /6

ರಾಹುವಿನ ಸಂಚಾರದಿಂದಾಗಿ ವೃಷಭ ರಾಶಿಯ ಜನರು ಆಗಾಗ್ಗೆ ಕಲ್ಪನೆಗಳಲ್ಲಿ ಕಳೆದುಹೋಗುತ್ತಾರೆ. ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲ ಉಂಟಾಗಬಹುದು. ಖರ್ಚು ಕೂಡ ಹೆಚ್ಚಾಗಲಿದೆ. 

3 /6

ಕಟಕ ರಾಶಿಯವರು ಏಪ್ರಿಲ್ ನಂತರ ತಮ್ಮ ವೃತ್ತಿ ಜೀವನದಲ್ಲಿ ತೊಂದರೆಗಳನ್ನು ಎದುರಿಸಬಹುದು. ಆದರೆ ತಾಳ್ಮೆಯಿಂದಿರಿ. ಉದ್ಯೋಗವನ್ನು ಬದಲಾಯಿಸಬೇಕು ಎಂದು ಯೋಚಿಸುತ್ತಿದ್ದರೆ, ಉತ್ತಮ ಅವಕಾಶಗಳು ಸಹ ದೊರೆಯುತ್ತವೆ. ಆದರೆ ಹೊಸ ಕೆಲಸ ಸಿಗುವವರೆಗೂ ಹಳೆ ಕೆಲಸ ಬಿಡಬೇಡಿ.  ಇಲ್ಲವಾದಲ್ಲಿ ತೊಂದರೆಗೆ ಸಿಲುಕಬಹುದು. 

4 /6

ಕನ್ಯಾ ರಾಶಿಯ ಜನರು ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಬೇಕು. ಹಿರಿಯ ಅಧಿಕಾರಿಗಳಿಗಳೊಂದಿಗೆ ಕಲಹ ಉಂಟಾಗಬಹುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಅಪಘಾತ ಅಥವಾ ಇನ್ನಾವುದೇ ಕಾರಣದಿಂದ ಗಾಯವಾಗುವ ಸಾಧ್ಯತೆ ಇದೆ.

5 /6

ಈ ಸಮಯವು ವೃಶ್ಚಿಕ ರಾಶಿಯ ಜನರ ಕುಟುಂಬ ಜೀವನಕ್ಕೆ ತೊಂದರೆಗಳನ್ನು ತರಬಹುದು. ಜೀವನ ಸಂಗಾತಿಯೊಂದಿಗೆ ಕಲಹ ಉಂಟಾಗಬಹುದು. ಆದ್ದರಿಂದ ಬುದ್ಧಿವಂತಿಕೆಯಿಂದ ವರ್ತಿಸಿ.   

6 /6

2022ರಲ್ಲಿ ಧನು ರಾಶಿಯವರಿಗೆ ಕಾನೂನು ತೊಡಕುಗಳು ಎದುರಾಗುವ ಸಾಧ್ಯತೆ ಇದೆ. ಜಾಗರೂಕರಾಗಿರಿ. ವಿದ್ಯಾರ್ಥಿಗಳು ಕಠಿಣ ಪರಿಶ್ರಮದಿಂದ ಮಾತ್ರ ಫಲಿತಾಂಶವನ್ನು ಪಡೆಯುತ್ತಾರೆ.