ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರದ ಜನರ ವಿವಾಹ ಬಹಳ ವಿಳಂಬವಾಗಿ ಆಗುತ್ತದೆ. ವಿವಾಹ ಮಾತು ಏರ್ಪಟ್ಟರೂ ಏನಾದರೊಂದು ಅಡೆತಡೆಗಳು ಎದುರಾಗುತ್ತವೆ.
ನವದೆಹಲಿ : ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದ ಸುಂದರ ಕನಸಾಗಿರುತ್ತದೆ. ಆದರೆ, ಕೆಲವರು ತಮ್ಮ ಜೀವನದುದ್ದಕ್ಕೂ ಮದುವೆಯಿಂದ ದೂರ ಉಳಿಯುತ್ತಾರೆ. ಈ ಎರಡೂ ಸನ್ನಿವೇಶಗಳು ಅವರ ರಾಶಿಚಕ್ರ ಚಿಹ್ನೆಗಳನ್ನು ಅವಲಂಬಿಸಿರುತ್ತದೆ. ಜ್ಯೋತಿಷ್ಯದ ಪ್ರಕಾರ, ಕೆಲವು ರಾಶಿಚಕ್ರದ ಜನರ ವಿವಾಹ ಬಹಳ ವಿಳಂಬವಾಗಿ ಆಗುತ್ತದೆ. ವಿವಾಹ ಮಾತು ಏರ್ಪಟ್ಟರೂ ಏನಾದರೊಂದು ಅಡೆತಡೆಗಳು ಎದುರಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಮಿಥುನ ರಾಶಿಯ ಜನರ ಮನಸ್ಸು ತುಂಬಾ ಚಂಚಲವಾಗಿರುತ್ತದೆ, ಅವರು ತಮ್ಮ ನಿರ್ಧಾರಗಳನ್ನು ಮತ್ತೆ ಮತ್ತೆ ಬದಲಾಯಿಸುತ್ತಲೇ ಇರುತ್ತಾರೆ. ಇದರಿಂದಾಗಿ ಜೀವನ ಸಂಗಾತಿಯ ಆಯ್ಕೆಯೂ ಬದಲಾಗುತ್ತಲೇ ಇರುತ್ತದೆ. ಒಬ್ಬರೇ ಜೀವನ ಸಂಗಾತಿಯೊಂದಿಗೆ ಇಡೀ ಜೀವನವನ್ನು ಕಳೆಯುವ ಆಲೋಚನೆಯು ಕೂಡಾ ಅವರನ್ನು ಹೆದರಿಸುತ್ತದೆ. ಅದಕ್ಕಾಗಿಯೇ ಅವರು ಮದುವೆಯಿಂದ ದೂರ ಉಳಿಯಲು ಇಷ್ಟಪಡುತ್ತಾರೆ.
ಸಿಂಹ ರಾಶಿಯವರು ಜೀವನದಲ್ಲಿ ಉತ್ಸಾಹ ಮತ್ತು ಸಾಹಸವನ್ನು ಇಷ್ಟಪಡುತ್ತಾರೆ. ಮದುವೆಯ ವಿಷಯದಲ್ಲೂ ಅವರದ್ದು ಒಂದೇ ಆಯ್ಕೆ. ಆದರೆ ಪತಿ-ಪತ್ನಿಯರ ನಡುವಿನ ಜಗಳಗಳ ಬಗ್ಗೆ ಯೋಚಿಸಿ ಮದುವೆಯಾಗಲು ಮನಸ್ಸು ಬದಲಾಯಿಸುತ್ತಾರೆ.
ಧನು ರಾಶಿಯ ಜನರು ಕಮಿಟ್ ಮೆಂಟ್ ಮಾಡಿಕೊಳ್ಳಲು ತುಂಬಾ ಹೆದರುತ್ತಾರೆ. ಯಾರೊಂದಿಗೂ ಸಂಬಂಧವನ್ನು ಮಾಡಲು ಇಷ್ಟಪಡುವುದಿಲ್ಲ. ಸಾಧ್ಯವಾದಷ್ಟು ಒಂಟಿಯಾಗಿರಲು ಇಷ್ಟಪಡುತ್ತಾರೆ. ಈ ಕಾರಣದಿಂದಾಗಿ, ಅವರು ಸಾಮಾನ್ಯವಾಗಿ ಒಂಟಿಯಾಗಿರುತ್ತಾರೆ.
ಕುಂಭ ರಾಶಿಯ ಜನರು ತಮ್ಮದೇ ಆದ ಸಹವಾಸವನ್ನು ಆನಂದಿಸುತ್ತಾರೆ. ಆದ್ದರಿಂದ ಅವರು, ತಮ್ಮ ಜೀವನವನ್ನು ಕಳೆಯಲು ಬೇರೆಯವರ ಅಗತ್ಯ ಇರಬೇಕೆಂದು, ಈ ರಾಶಿಯವರಿಗೆ ಅನ್ನಿಸುವುದೇ ಇಲ್ಲ. ಅದಕ್ಕಾಗಿಯೇ ಅವರು ಏಕಾಂಗಿಯಾಗಿರುವ ನಿರ್ಧಾರವನ್ನು ಸುಲಭವಾಗಿ ತೆಗೆದುಕೊಳ್ಳುತ್ತಾರೆ.
ಮೀನ ರಾಶಿಯ ಜನರು ತಿರಸ್ಕಾರಕ್ಕೆ ಹೆದರುತ್ತಾರೆ. ಇದಲ್ಲದೆ, ಅವರು ಜನರಿಂದ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಂಡಿರುತ್ತಾರೆ. ಅದಕ್ಕಾಗಿಯೇ ಅವರ ಜೀವನವು ಪರಿಪೂರ್ಣ ಜೀವನ ಸಂಗಾತಿಯ ಹುಡುಕಾಟದಲ್ಲಿ ಕಳೆಯುತ್ತದೆ.