ಪೀನಟ್ ಬಟರ್ ಎಲರ್ಜಿಯಿಂದಾಗಿ ಹಾಸಿಗೆ ಹಿಡಿದ ನಟಿ, ರೂಪದರ್ಶಿ… ಕೊನೆಗೂ ಕೋರ್ಟ್ ನೀಡಿತು ಪರಿಹಾರ..
ನವದೆಹಲಿ : Peanut Butter ಎಲರ್ಜಿಯ ಕಾರಣದಿಂದಾಗಿ ರೂಪದರ್ಶಿಯೊಬ್ಬರು ಕಳೆದ 8 ವರ್ಷಗಳಿಂದ ಹಾಸಿಗೆ ಹಿಡಿಯುವಂತಾಗಿದೆ. ಪೀನಟ್ ಬಟರ್ ಇದೆ ಎಂಬ ಅರಿವಿಲ್ಲದೆ ತಿಂದಿರುವ ಬಿಸ್ಕೆಟ್ ಕಾರಣದಿಂದಾಗಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಇದೀಗ ಅಮೆರಿಕನ್ ಲಾಸ್ ವೇಗಾಸ್ ನ್ಯಾಯಾಲಯವು ಈ ನಟಿ, ರೂಪದರ್ಶಿಗೆ 220 ಕೋಟಿ ರೂ ಪರಿಹಾರ ಪ್ರಕಟಿಸಿದೆ. (ಫೋಟೋ : ಫಾಕ್ಸ್ ನ್ಯೂಸ್)
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಅಮೆರಿಕನ್ ಲಾಸ್ ವೇಗಾಸ್ ನ್ಯಾಯಾಲಯವು ನಟಿ ಮತ್ತು ರೂಪದರ್ಶಿ ಶಾಂಟೆಲ್ ಜಿಯಾಕಲೋನ್‌ಗೆ 220 ಕೋಟಿ ರೂ ಪರಿಹಾರ ಪ್ರಕಟಿಸಿದೆ. ಕಳೆದ 8 ವರ್ಷಗಳಿಂದ ಶಾಂಟೆಲ್ ಜಿಯಾಕಲೋನ್ ಪಾರ್ಶ್ವವಾಯುವಿಗೆ ಒಳಗಾಗಿದ್ದು, ಹಾಸಿಗೆಯ ಮೇಲೆ ಜೀವನವನ್ನು ಕಳೆಯುತ್ತಿದ್ದಾರೆ.
ಫಾಕ್ಸ್ ನ್ಯೂಸ್‌ನ ಸುದ್ದಿಯ ಪ್ರಕಾರ, Peanut Butter ಬಿಸ್ಕೆಟ್ ತಿಂದ ನಂತರ ಶಾಂಟೆಲ್ ಜಿಯಾಕಲೋನ್ ಮೆದುಳಿಗೆ ಹಾನಿಯಾಗಿದೆ. ಶಾಂಟೆಲ್ ಸಹವರ್ತಿ ಮಾಡೆಲ್ ಅವರಿಗೆ ಈ ಬಿಸ್ಕೆಟ್ ನೀಡಿದ್ದರು. ಆದರೆ ಈ ಬಿಸ್ಕೆಟ್ ನಲ್ಲಿ Peanut Butter ಬೆರೆಸಲಾಗಿತ್ತು. ಈ ಘಟನೆ 2013 ರಲ್ಲಿ ನಡೆದಿದೆ. ಆ ಸಮಯದಲ್ಲಿ ಲಾಸ್ ವೇಗಾಸ್ ನಗರದಲ್ಲಿ ನಡೆದ ಮ್ಯಾಜಿಕ್ ಫ್ಯಾಶನ್ ಟ್ರೇಡ್ ಶೋನಲ್ಲಿ ಶಾಂಟೆಲ್ ಮಾಡೆಲಿಂಗ್ ಮಾಡುತ್ತಿದ್ದರು.
ಶಾಂಟೆಲ್ ಜಿಯಾಕಲೋನ್ ಗೆ Peanut Butter ಅಲರ್ಜಿ ಇತ್ತು. ಈ ಕಾರಣದಿಂದಾಗಿ ಬಿಸ್ಕೆಟ್ ತಿಂದ ನಂತರ ಅವರು, ಅನಾಫಿಲ್ಯಾಕ್ಟಿಕ್ ಶಾಕ್ ಗೆ ಒಳಗಾಗಿದ್ದರು. ಯಾವ ವ್ಯಕ್ತಿಗೆ ಈ ಅಲರ್ಜಿ ಇರುತ್ತದೆಯೋ ಅವರು ಪೀನಟ್ ಬಟರ್ ತಿಂದರೆ ಅನಾಫಿಲ್ಯಾಕ್ಟಿಕ್ ಶಾಕ್ ಗೆ ಒಳಗಾಗುತ್ತಾರೆ. ಇದು ಅಪರೂಪದ ಪ್ರಕರಣವಾಗಿದ್ದು, ಇದಕ್ಕೆ ಎಲ್ಲಾ ಚಿಕಿತ್ಸೆ ಸಿಗುವುದಿಲ್ಲ. ರೋಗಿಗೆ epinephrine ಎಂಬ ಔಷಧಿಯನ್ನು ನೀಡಬೇಕಾಗುತ್ತದೆ. ಆದರೆ ಶಾಂಟೆಲ್ಗೆ ತಕ್ಷಣಕ್ಕೆ ನೀಡಲು ಆ ಔಷಧಿ ಲಭ್ಯವಿರಲಿಲ್ಲ.
ಶಾಂಟೆಲ್ ಸಮಯಕ್ಕೆ ಸರಿಯಾಗಿ ಔಷಧಿಗಳು ಮತ್ತು ವೈದ್ಯಕೀಯ ಸೌಲಭ್ಯಗಳು ಸಿಗದ ಕಾರಣ ಅವರು 8 ವರ್ಷಗಳವರೆಗೆ ಹಾಸಿಗೆಯಲ್ಲೇ ತಮ್ಮ ಜೀವನ ಕಳೆಯಬೇಕಾಯಿತು ಎಂಬ ವಕೀಲರ ವಾದವನ್ನು ನ್ಯಾಯಾಲಯ ಒಪ್ಪಿಕೊಂಡಿತು. ಈ ಪರಿಹಾರದ ಹಣದಿಂದ, ಶಾಂಟೆಲ್ ಸರಿಯಾದ ಚಿಕಿತ್ಸೆ ನೀಡಲು ಸಾಧ್ಯವಾಗಬಹುದು ಎನ್ನುವುದು ಶಾಂಟೆಲ್ ಹೆತ್ತವರ ಆಶಯ.
ಶಾಂಟೆಲ್ ಎದುರಿಸಿದ ಅಲರ್ಜಿ ರಿಯಾಕ್ಷನ್ ನಂತರ ತುರಿಕೆ ಮತ್ತು ಮೂಗಿನ ಸ್ರವಿಸುವಿಕೆಯಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಆದರೆ ಈ ಕಾರಣದಿಂದಾಗಿ, ಅನಾಫಿಲ್ಯಾಕ್ಸಿಸ್ ಸಹ ಕೆಲವೊಮ್ಮೆ ಸಂಭವಿಸಬಹುದು. ಇದರಲ್ಲಿ ರಕ್ತದೊತ್ತಡ ಹೆಚ್ಚುತ್ತದೆ. ದೇಹದಲ್ಲಿನ ಆಕ್ಸಿಜನ್ ಲೆವೆಲ್ ಕಡಿಮೆಯಾಗುತ್ತದೆ ಮತ್ತು ಉಸಿರಾಟದ ಸಮಸ್ಯೆ ಎದುರಾಗುತ್ತದೆ. ಈ ಪರಿಸ್ಥಿತಿಯಲ್ಲಿ ಕೆಲವರ ಸಾವು ಕೂಡಾ ಸಂಭವಿಸುತ್ತದೆ.