ಇತಿಹಾಸ ಸೃಷ್ಟಿಸಿದ ನಟಿ ಪವಿತ್ರ ಗೌಡ..! ಗೂಗಲ್‌ನಲ್ಲಿ ಈಕೆಯದ್ದೇ ಫುಲ್‌ ಹವಾ.. ಏಕೆ ಗೊತ್ತಾ..?

Pavithra gowda : ಜೂನ್ 11 ರ ಬೆಳಿಗ್ಗೆ ಸ್ಯಾಂಡಲ್‌ವುಡ್‌ ಶಾಕ್‌ ಆಗುವಂತ ಸುದ್ದಿ ಬಂದಿತ್ತು. ಅದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಂಧನ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂಬ ಸುದ್ದಿ ಕ್ಷಣಾರ್ಧದಲ್ಲೇ ಕರುನಾಡಿನ ತುಂಬ ಹರಡಿ ಸಂಚನಲ ಸೃಷ್ಟಿಸಿತ್ತು.. ದರ್ಶನ್ ಅವರನ್ನು ಮೈಸೂರಿನ ಹೊಟೇಲ್‌ನಲ್ಲಿ ಪೊಲೀಸರು ಬಂಧಿಸುತ್ತಿದ್ದಂತೆಯೇ ಬೆಂಗಳೂರಿನಲ್ಲಿ ದರ್ಶನ್ ಅವರ ಗೆಳತಿ ಪವಿತ್ರಾ ಗೌಡ ಅವರನ್ನು ಪೊಲೀಸರು ಬಂಧಿಸಿದ್ದರು. 
 

1 /7

ಸಧ್ಯ ನ್ಯಾಯಾಂಕ ಬಂಧನದಲ್ಲಿರುವ ಪವಿತ್ರಗೌಡ ಕುರಿತು ತಿಳಿಯಲು ನೆಟ್ಟಿಗರು ಕುತೂಹಲರಾಗಿದ್ದು, ಗೂಗಲ್‌ನಲ್ಲಿ ಬಿಟ್ಟು ಬಿಡದೇ ಆಕೆಯ ಕುರಿತು ಸರ್ಚ್‌ ಮಾಡುತ್ತಿದ್ದಾರೆ.. ಪವಿತ್ರಗೌಡ ಯಾರು, ಅವರ ಪೋಷಕರು ಯಾರು, ಆಕೆಯ ಗಂಡ ಯಾರು, ಮಗಳ ಹೆಸರೇನು ಅಂತ ಸೇರಿದಂತೆ ಹಲವಾರು ಪ್ರಶ್ನೆಗಳಿಗೆ ಉತ್ತರ ಹುಡುಕಾಡುತ್ತಿದ್ದಾರೆ..

2 /7

ಹೌದು.. ಈ ವರ್ಷದ ಆರಂಭದಲ್ಲಿ, ಪವಿತ್ರ ಗೌಡ ಅವರು ದರ್ಶನ್ ಅವರೊಂದಿಗಿನ ಫೋಟೋಗಳನ್ನು ಹಂಚಿಕೊಂಡು ವಿವಾದ ಸೃಷ್ಟಿಸಿದ್ದರು. ಆ ನಂತರ ಪವಿತ್ರಾ ಗೌಡ ಅವರ ಮೊದಲ ಮದುವೆಯ ರಹಸ್ಯವನ್ನು ವಿಜಯಲಕ್ಷ್ಮಿ ದರ್ಶನ್ ಬಹಿರಂಗಪಡಿಸಿದ್ದರು. ವಿಜಯಲಕ್ಷ್ಮಿ ದರ್ಶನ್ ಮತ್ತು ಪವಿತ್ರಾ ಗೌಡ ನಡುವೆ ಸೋಷಿಯಲ್ ಮೀಡಿಯಾ ವಾರ್ ನಡೆದಿತ್ತು. 

3 /7

ಆ ವೇಳೆ ದರ್ಶನ್ ಅಭಿಮಾನಿಗಳು ವಿಜಯಲಕ್ಷ್ಮಿ ಅವರ ಬೆಂಬಲಕ್ಕೆ ನಿಂತಿದ್ದರು. ಪವಿತ್ರಾ ಗೌಡ ಅವರನ್ನು ಹಲವರು ಟೀಕಿಸಿದರು. ಅದೇ ವೇಳೆಗೆ ದರ್ಶನ್ ಅಭಿಮಾನಿ ರೇಣುಕಾಸ್ವಾಮಿ ಕೂಡ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಫೇಕ್ ಅಕೌಂಟ್ ಸೃಷ್ಟಿಸಿ ಪವಿತ್ರಾ ಗೌಡ ಮೇಲೆ ರೇಣುಕಾ ಸ್ವಾಮಿ ಪದೇ ಪದೇ ಕೆಟ್ಟ ಕಾಮೆಂಟ್ ಹಾಗೂ ಸಂದೇಶಗಳನ್ನು ಕಳುಹಿಸಿದ್ದ ಎನ್ನಲಾಗಿದೆ.

4 /7

ಇದೇ ವಿಚಾರವಾಗಿ, ಚಿತ್ರದುರ್ಗ ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ರಾಘವೇಂದ್ರ ರೇಣುಕಾಸ್ವಾಮಿ ಅವರನ್ನು ಬೆಂಗಳೂರಿಗೆ ಕರೆತಂದಿದ್ದ. ಬೆಂಗಳೂರಿನ ಪಟ್ಟಗೆರೆ ಶೆಡ್‌ನಲ್ಲಿ ರೇಣುಕಾಸ್ವಾಮಿ ಕೊಲೆಯಾಗಿದ್ದರು. ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.

5 /7

ಈ ಪ್ರಕರಣದ ಬೆನ್ನಲ್ಲೆ, ಪವಿತ್ರ ಗೌಡ ಗೂಗಲ್ ಟ್ರೆಂಡ್‌ಗಳಲ್ಲಿ ಟ್ರೆಂಡಿಂಗ್ ಆಗಿದ್ದಾರೆ. ಜೂನ್ 11 ರಿಂದ ಪವಿತ್ರ ಗೌಡ ಅವರ ಹೆಸರನ್ನು ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲಾಗಿದೆ. ಪವಿತ್ರಾ ಗೌಡ ಕರ್ನಾಟಕದವರಾದ್ದರಿಂದ, ಪವಿತ್ರಾ ಗೌಡ ಕರ್ನಾಟಕದಲ್ಲಿ ಟಾಪ್ ಟ್ರೆಂಡಿಂಗ್ ಆಗಿದ್ದಾರೆ. 

6 /7

ಕರ್ನಾಟಕದ 100% ಇಂಟರ್ನೆಟ್ ಬಳಕೆದಾರರು ಪವಿತ್ರ ಗೌಡ ಅವರನ್ನು ಹುಡುಕಿದ್ದಾರೆ. ಕರ್ನಾಟಕದ ನಂತರ ಆಂಧ್ರಪ್ರದೇಶದಲ್ಲಿ 12%, ತೆಲಂಗಾಣದಲ್ಲಿ 11%, ಕೇರಳದಲ್ಲಿ 10% ಮತ್ತು ಗೋವಾದಲ್ಲಿ 9% ಜನರು ಪವಿತ್ರ ಗೌಡರ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ತೋರಿಸಿದ್ದಾರೆ. 

7 /7

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರ ಗೌಡ, ‘ಛತ್ರಿ ಸರ್ ಛತ್ರಿಗಳು’, ‘ರೇಣುಕಾಸ್ವಾಮಿ’, ‘ಸಂಜಯ್ ಸಿಂಗ್’, ‘ತೂಗುದೀಪ ಶ್ರೀನಿವಾಸ್’ ವಿಷಯಗಳು ಗೂಗಲ್ ನಲ್ಲಿ ಅತಿ ಹೆಚ್ಚು ಸರ್ಚ್ ಆಗಿರುವ ವಿಷಯಗಳಾಗಿವೆ. ಅಲ್ಲದೆ, ಪವಿತ್ರ ಗೌಡ, ದರ್ಶನ್ ಪವಿತ್ರ ಗೌಡ ಸಂಬಂಧ, ದರ್ಶನ್ ಪವಿತ್ರ ಗೌಡ ಇನ್‌ಸ್ಟಾಗ್ರಾಮ್ ಬಗ್ಗೆ ಅನೇಕ ಜನರು ಗೂಗಲ್‌ನಲ್ಲಿ ಹುಡುಕುತ್ತಿದ್ದಾರೆ.