Paush Purnima 2022: ಪುಷ್ಯ ಪೂರ್ಣಿಮೆಯಂದು ಈ ಕೆಲಸ ಮಾಡಿದ್ರೆ ಮನೆಗೆ ಲಕ್ಷ್ಮಿದೇವಿ ಬರುತ್ತಾಳೆ

Paush Purnima 2023: ಶುಕ್ರವಾರವನ್ನು ತಾಯಿ ಲಕ್ಷ್ಮಿದೇವಿಯ ದಿನವೆಂದು ಪರಿಗಣಿಸಲಾಗುತ್ತದೆ. ಹುಣ್ಣಿಮೆ ರಾತ್ರಿ ಮತ್ತು ಶುಕ್ರವಾರದಂದು ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಅಪಾರ ಸಂಪತ್ತು ಬರುತ್ತದೆ.

ಪುಷ್ಯ ಪೂರ್ಣಿಮೆ 2023: 2023ರಲ್ಲಿ ಪುಷ್ಯ ಪೂರ್ಣಿಮೆಯನ್ನು ನಾಳೆ ಅಂದರೆ ಜನವರಿ 6ರಂದು ಆಚರಿಸಲಾಗುತ್ತದೆ. ಶುಕ್ರವಾರವನ್ನು ತಾಯಿ ಲಕ್ಷ್ಮಿದೇವಿಯ ದಿನವೆಂದು ಪರಿಗಣಿಸಲಾಗುತ್ತದೆ. ಹುಣ್ಣಿಮೆ ರಾತ್ರಿ ಮತ್ತು ಶುಕ್ರವಾರದಂದು ಲಕ್ಷ್ಮಿದೇವಿಯನ್ನು ಪೂಜಿಸುವುದರಿಂದ ಅಪಾರ ಸಂಪತ್ತು ಬರುತ್ತದೆ. ಆದರೆ ಹುಣ್ಣಿಮೆಯಂದು ಈ ಕೆಲಸಗಳನ್ನು ಅಪ್ಪಿತಪ್ಪಿಯೂ ಮಾಡಬಾರದು. ಒಂದು ವೇಳೆ ಮಾಡಿದ್ರೆ ನಿಮ್ಮ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ತಾಯಿ ಲಕ್ಷ್ಮಿದೇವಿ ನಿಮ್ಮ ಮೇಲೆ ಕೋಪಗೊಳ್ಳಬಹುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /4

ಚಂದ್ರನು ಪೂರ್ಣಿಮಾ ತಿಥಿಯ ಅಧಿದೇವತೆ ಮತ್ತು ಶಿವನು ಅವನ ದೇವರು. ಶಿವನನ್ನು ಯಾವುದೇ ರೀತಿಯಲ್ಲಿ ಅವಮಾನಿಸಬೇಡಿ. ಶಂಭೋ ಶಂಕರಿಗೆ ಮಾಡಿದ ಅವಮಾನದಿಂದ ಎಲ್ಲವೂ ಹಾಳಾಗಬಹುದು. ಭಗವಾನ್ ಶಿವನ ಆರಾಧನೆಯಿಂದ ನಿಮಗೆ ಒಳಿತಾಗಲಿದೆ.  

2 /4

ಹುಣ್ಣಿಮೆ ಅಥವಾ ಇತರ ಯಾವುದೇ ರಾತ್ರಿಯಲ್ಲಿ ಮೊಸರು ಸೇವಿಸಬೇಡಿ. ಇದರಿಂದ ಹಣ ನಷ್ಟವಾಗಬಹುದು. ಇದರೊಂದಿಗೆ ಆರೋಗ್ಯಕ್ಕೆ ಸಂಬಂಧಿಸಿದ ಹಲವು ಸಮಸ್ಯೆಗಳೂ ನಿಮ್ಮನ್ನು ಕಾಡಬಹುದು.

3 /4

ಹುಣ್ಣಿಮೆಯ ದಿನ ರಾತ್ರಿ ಪೂಜೆ ನಡೆಯುತ್ತದೆ. ಅಂದು ಅಪ್ಪಿತಪ್ಪಿಯೂ ತಾಯಿ ಲಕ್ಷ್ಮಿದೇವಿಗೆ ತುಳಸಿ ಎಲೆಗಳನ್ನು ಅರ್ಪಿಸಬೇಡಿ. ತುಳಸಿ ಮಹಾವಿಷ್ಣುವಿಗೆ ತುಂಬಾ ಪ್ರಿಯವಾಗಿದೆ, ಆದ್ದರಿಂದ ತಾಯಿ ಲಕ್ಷ್ಮಿದೇವಿಗೆ ಇದನ್ನು ಅರ್ಪಿಸಿದ್ರೆ ಆಕೆ ನಿಮ್ಮ ಮೇಲೆ ಕೋಪಗೊಳ್ಳುತ್ತಾಳೆ.

4 /4

ಹುಣ್ಣಿಮೆಯ ದಿನ ಮಾಂಸ, ಮದ್ಯ, ಬೆಳ್ಳುಳ್ಳಿ, ಈರುಳ್ಳಿಯಂತಹ ತಾಮಸಿಕ ಆಹಾರವನ್ನು ಸೇವಿಸಬೇಡಿ. ಅಂದು ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿ ಇಡಬೇಕು. ತಾಯಿ ಲಕ್ಷ್ಮಿದೇವಿ ಎಂದಿಗೂ ಕೊಳಕಾಗಿರುವ ಮನೆಗೆ ಬರುವುದಿಲ್ಲ. ಸಂಜೆ ಅಥವಾ ರಾತ್ರಿಯಲ್ಲಿ ಯಾವುದೇ ಕಾರಣಕ್ಕೂ ಕಸವನ್ನು ಗುಡಿಸಬೇಡಿ.