Fortune Lines In Hand: ಅಂಗೈಯಲ್ಲಿನ ರೇಖೆಗಳಿಂದ ವ್ಯಕ್ತಿಯ ಸ್ವಭಾವ, ನಡವಳಿಕೆ ಮತ್ತು ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಊಹಿಸಬಹುದು. ಈ ರೇಖೆಗಳು ವ್ಯಕ್ತಿಯ ಭವಿಷ್ಯದ ಜೀವನದ ಕನ್ನಡಿಯಂತಿರುತ್ತವೆ. ಅನೇಕ ರೇಖೆಗಳು ಕೈಯಲ್ಲಿರುವುದು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ.
Fortune Lines In Hand: ಅಂಗೈಯಲ್ಲಿನ ರೇಖೆಗಳಿಂದ ವ್ಯಕ್ತಿಯ ಸ್ವಭಾವ, ನಡವಳಿಕೆ ಮತ್ತು ವ್ಯಕ್ತಿತ್ವದ ಬಗ್ಗೆ ಸಾಕಷ್ಟು ಊಹಿಸಬಹುದು. ಈ ರೇಖೆಗಳು ವ್ಯಕ್ತಿಯ ಭವಿಷ್ಯದ ಜೀವನದ ಕನ್ನಡಿಯಂತಿರುತ್ತವೆ. ಅನೇಕ ರೇಖೆಗಳು ಕೈಯಲ್ಲಿರುವುದು ಬಹಳ ಅದೃಷ್ಟವೆಂದು ಪರಿಗಣಿಸಲಾಗುತ್ತದೆ. ಅವುಗಳ ಉಪಸ್ಥಿತಿಯಿಂದಾಗಿ, ಒಬ್ಬ ವ್ಯಕ್ತಿಯು ಬಹಳಷ್ಟು ಪ್ರಗತಿಯನ್ನು ಸಾಧಿಸುತ್ತಾನೆ ಮತ್ತು ಅವನು ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಯನ್ನು ಎದುರಿಸುವುದಿಲ್ಲ. ಅದೃಷ್ಟದ ರೇಖೆಯನ್ನು ಅತ್ಯಂತ ಮಂಗಳಕರ ಎಂದು ಪರಿಗಣಿಸಲಾಗುತ್ತದೆ. ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅದೃಷ್ಟ ರೇಖೆಗೆ ತುಂಬಾ ಪ್ರಾಮುಖ್ಯತೆಯನ್ನು ನೀಡಲಾಗಿದೆ.
ಇದನ್ನೂ ಓದಿ-Chanakya Niti: ಜೀವನದಲ್ಲಿ ಯಶಸ್ಸಿಗಾಗಿ ಈ ಕಹಿ ಗಿಡದ ಎರಡು ಹಣ್ಣುಗಳ ರುಚಿಯನ್ನು ನೀವು ಸವಿಯಲೇಬೇಕು
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
1. ಹಸ್ತಸಾಮುದ್ರಿಕ ಶಾಸ್ತ್ರದ ಪ್ರಕಾರ, ಅದೃಷ್ಟ ರೇಖೆಯು ಅಂಗೈಯಿಂದ ಪ್ರಾರಂಭವಾಗುತ್ತದೆ ಮತ್ತು ಮಧ್ಯದ ಬೆರಳಿನವರೆಗೆ ಹೋಗುತ್ತದೆ. ಈ ರೇಖೆಯು ಮಣಿಕಟ್ಟಿನ ಮೇಲೆ ಇರುವ ಮಣಿಬಂಧ ರೇಖೆಯಿಂದ ಪ್ರಾರಂಭವಾಗಿ ಮಧ್ಯದ ಬೆರಳಿನವರೆಗೆ ನೇರವಾಗಿ ಹೋಗುತ್ತದೆ. ಈ ಸ್ಥಳವನ್ನು ಶನಿ ಪರ್ವತ ಎಂದು ಕರೆಯಲಾಗುತ್ತದೆ.
2. ಮಣಿಬಂಧದಿಂದ ಹೊರಬರುವ ಈ ರೇಖೆಯು ಯಾರ ಅಂಗೈಯಲ್ಲಿ ನೇರವಾಗಿ ಶನಿ ಪರ್ವತಕ್ಕೆ ಹೋಗುತ್ತದೆಯೋ ಅವರನ್ನು ತುಂಬಾ ಅದೃಷ್ಟಶಾಲಿಗಳು ಪರಿಗಣಿಸಲಾಗುತ್ತದೆ. ಇಂತಹ ಜನರ ಜೀವನ ಮೊದಲು ಸಾಮಾನ್ಯವಾಗಿರುತ್ತದೆ, ಆದರೆ ಮದುವೆಯ ನಂತರ ಅವರ ಅದೃಷ್ಟವು ಭಾರಿ ಮೆರಗು ಪಡೆದುಕೊಳ್ಳುತ್ತದೆ.
3. ಈ ಸ್ಥಳದಲ್ಲಿ ಅದೃಷ್ಟ ರೇಖೆ ಇರುವುದರಿಂದ, ಮದುವೆಯ ನಂತರ ಜನರು ಸಾಕಷ್ಟು ಹಣವನ್ನು ಗಳಿಸುತ್ತಾರೆ. ಅವರ ಜೀವನದಲ್ಲಿ ಯಾವುದಕ್ಕೂ ಕೊರತೆ ಇರುವುದಿಲ್ಲ. ಅವರು ಜೀವನದಲ್ಲಿ ಏನನ್ನು ಪಡೆಯಲು ಬಯಸುತ್ತಾರೆಯೋ ಅದನ್ನು ಅವರು ಪಡೆಯುತ್ತಾರೆ.
4. ಶನಿ ಪರ್ವತವನ್ನು ತಲುಪಿದ ನಂತರ ಒಂದು ರೇಖೆಯು ವಿಭಜನೆಗೊಂಡು ಗುರು ಪರ್ವತದ ಕೆಳಗೆ ತಲುಪಿದರೆ, ಅಂದರೆ ಕಿರುಬೆರಳಿಗೆ ತಲುಪಿದರೆ, ಇಂತಹ ಜನರು ತುಂಬಾ ದಾನ ಮಾಡುತ್ತಾರೆ. ಈ ಜನರು ಯಾವಾಗಲೂ ಇತರರಿಗೆ ಸಹಾಯ ಮಾಡಲು ಮುಂದೆ ಇರುತ್ತಾರೆ.
5. ಅದೃಷ್ಟದ ರೇಖೆಯ ಕೊನೆಯ ಭಾಗವು ಮೇಲಕ್ಕೆ ಎದ್ದಿರುವಂತೆ ಇದ್ದರೆ, ಇಂತಹ ಜನರು ಜೀವನದಲ್ಲಿ ತುಂಬಾ ಸಂತೋಷವಾಗಿರುತ್ತಾರೆ. ಇತರ ಜನರು ಸಹ ಈ ಜನರ ಕಡೆಗೆ ಸುಲಭವಾಗಿ ಆಕರ್ಷಿತರಾಗುತ್ತಾರೆ (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)