ಕ್ರಿಕೆಟ್ ಇತಿಹಾಸ ಕಂಡ ಅತ್ಯಂತ ವೇಗದ ಬೌಲರ್ ಯಾರು ಗೊತ್ತಾ? ಗಂಟೆಗೆ 161.3 ಕಿಮೀ ವೇಗದಲ್ಲಿ ಬೌಲಿಂಗ್ ಮಾಡುವ ಡೇಂಜರಸ್ ಕ್ರಿಕೆಟಿಗ ಈತನೇ

fastest ball bowled in history of cricket: ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲರ್‌ ಎಂಬ ದಾಖಲೆ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೆಸರಿನಲ್ಲಿದೆ. 2003 ರಲ್ಲಿ, ಅಖ್ತರ್ ಗಂಟೆಗೆ 161.3 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ್ದರು. ಇದು ಸಂಭವಿಸಿ ಅದಾಗಲೆ 21 ವರ್ಷಗಳು ಕಳೆದಿವೆ ಆದರೆ ಇಲ್ಲಿಯವರೆಗೆ ಯಾವುದೇ ಬೌಲರ್ ಈ ಸಾಧನೆಯನ್ನು ಮುಟ್ಟಲು ಸಾಧ್ಯವಾಗಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ವಿಶ್ವ ಕ್ರಿಕೆಟ್‌ನಲ್ಲಿ ಅತಿ ವೇಗದ ಬೌಲರ್‌ ಎಂಬ ದಾಖಲೆ ಪಾಕಿಸ್ತಾನದ ಕ್ರಿಕೆಟಿಗ ಶೋಯೆಬ್ ಅಖ್ತರ್ ಹೆಸರಿನಲ್ಲಿದೆ. 2003 ರಲ್ಲಿ, ಅಖ್ತರ್ ಗಂಟೆಗೆ 161.3 ಕಿಮೀ ವೇಗದಲ್ಲಿ ಚೆಂಡನ್ನು ಎಸೆಯುವ ಮೂಲಕ ಜಗತ್ತನ್ನು ಬೆಚ್ಚಿಬೀಳಿಸಿದ್ದರು. ಇದು ಸಂಭವಿಸಿ ಅದಾಗಲೆ 21 ವರ್ಷಗಳು ಕಳೆದಿವೆ ಆದರೆ ಇಲ್ಲಿಯವರೆಗೆ ಯಾವುದೇ ಬೌಲರ್ ಈ ಸಾಧನೆಯನ್ನು ಮುಟ್ಟಲು ಸಾಧ್ಯವಾಗಿಲ್ಲ

2 /7

ಆದರೆ ಕೆಲ ಬೌಲರ್‌ಗಳು ಈ ವೇಗದ ಎಸೆತಗಳನ್ನು ಎಸೆಯುವ ಪ್ರತಿಭೆಯನ್ನು ತೋರಿಸಿದ್ದರು. ಆದರೆ ಅಖ್ತರ್‌ ರೀತಿಯಲ್ಲಿ ಯಾರೊಬ್ಬರೂ ಸಹ ಯಶಸ್ವಿಯಾಗಲಿಲ್ಲ. ಇನ್ನು ತಮ್ಮ ವೇಗದ ಬೌಲಿಂಗ್‌ನಿಂದ ವಿಶ್ವ ಕ್ರಿಕೆಟ್‌ನಲ್ಲಿ ಅಚ್ಚರಿ ಮೂಡಿಸಿದ ವಿಶ್ವ ಕ್ರಿಕೆಟ್‌ ಟಾಪ್‌ ಬೌಲರ್‌ಗಳ ಬಗ್ಗೆ ಈ ವರದಿಯಲ್ಲಿ ತಿಳಿದುಕೊಳ್ಳೋಣ.

3 /7

ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ಶೋಯೆಬ್ ಅಖ್ತರ್ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ವೇಗದ ಎಸೆತದಲ್ಲಿ ಅಗ್ರಸ್ಥಾನದಲ್ಲಿದ್ದಾರೆ. 2003 ರಲ್ಲಿ ಇಂಗ್ಲೆಂಡ್ ವಿರುದ್ಧ 161.3 km/h (100.2 mph) ವೇಗದಲ್ಲಿ ಚೆಂಡನ್ನು ಬೌಲ್ ಮಾಡಿದ್ದರು. ಈ ದಾಖಲೆ ಮುರಿಯುವುದು ಬಹುತೇಕ ಕಷ್ಟ.

4 /7

2010 ರಲ್ಲಿ ಇಂಗ್ಲೆಂಡ್ ವಿರುದ್ಧ ಗಂಟೆಗೆ 161.2 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದರು. ಆಸ್ಟ್ರೇಲಿಯಾದ ಮಾಜಿ ವೇಗದ ಬೌಲರ್ ಶಾನ್ ಟೈಟ್ ಕೇವಲ ಕೂದಲೆಳೆ ಅಂತರದಲ್ಲಿ ಅಖ್ತರ್‌ ದಾಖಲೆ ಬ್ರೇಕ್‌ ಮಾಡುವಲ್ಲಿ ಮಿಸ್‌ ಆಗಿದ್ದರು.

5 /7

ಶಾನ್ ಟೈಟ್ ಮೊದಲು, ಆಸ್ಟ್ರೇಲಿಯಾದ ಬ್ರೆಟ್ ಲೀ ಕೂಡ ಅಖ್ತರ್ ಅವರ ದಾಖಲೆಯನ್ನು ಮುರಿಯಲು ಪ್ರಯತ್ನಿಸಿದ್ದರು. ಅಂತೆಯೇ ಇವರೂ ಕೂ ಅಖ್ತರ್ ದಾಖಲೆ ಸಮೀಪಕ್ಕೆ ಬಂದಿದ್ದರು. ಬ್ರೆಟ್ ಲೀ 2005 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗಂಟೆಗೆ 161.1 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದರು.

6 /7

ಶೋಯೆಬ್ ಅಖ್ತರ್, ಬ್ರೆಟ್ ಲೀ ಮತ್ತು ಶಾನ್ ಟೈಟ್ ಅವರಿಗಿಂತ ಮೊದಲು, ಆಸ್ಟ್ರೇಲಿಯಾದ ಜೆಫ್ರಿ ಥಾಂಪ್ಸನ್ ಅವರು 1975 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 160.6 kmph ವೇಗದಲ್ಲಿ ಬೌಲಿಂಗ್ ಮಾಡುವ ಮೂಲಕ ವಿಶ್ವ ಕ್ರಿಕೆಟ್ ಅನ್ನು ಬೆರಗುಗೊಳಿದ್ದರು. ಇನ್ನೊಂದೆಡೆ 160 kmph ಮಾರ್ಕ್ ಅನ್ನು ಮುಟ್ಟಿದ ಮೊದಲ ಬೌಲರ್ ಕೂಡ ಇವರೇ.  

7 /7

160 kmph ಕ್ಲಬ್‌ನಲ್ಲಿ ನಾಲ್ಕನೇ ಆಸ್ಟ್ರೇಲಿಯಾದ ವೇಗದ ಎಡಗೈ ಬೌಲರ್ ಮಿಚೆಲ್ ಸ್ಟಾರ್ಕ್, ಅವರು 2015 ರಲ್ಲಿ ನ್ಯೂಜಿಲೆಂಡ್ ವಿರುದ್ಧ 160.4 kmph ವೇಗದಲ್ಲಿ ಬೌಲಿಂಗ್ ಮಾಡಿದ್ದರು.