Yash: ಯಶ್‌ಗೆ ಏಪ್ರಿಲ್ 14 ಯಾಕಿಷ್ಟು ಸ್ಪೆಷಲ್? ರಾಕಿ ಭಾಯ್‌ ಲೈಫ್‌ಗೆ ಟರ್ನಿಂಗ್‌ ಪಾಯಿಂಟ್‌ ಆದ ಈ ದಿನ!

KGF Chapter 2: ರಾಕಿಂಗ್ ಸ್ಟಾರ್ ಯಶ್ ಇಂದು ವಿಶ್ವಾದ್ಯಂತ ಪ್ರಸಿದ್ಧಿ ಪಡೆದ ನಟ. ಗಾಂಧಿನಗರದಲ್ಲಿ ತಮ್ಮ ಛಾಪು ಮೂಡಿಸುವ ಕನಸು ಕಡಿದ್ದ ಯಶ್‌ ವೃತ್ತಿಜೀವನಕ್ಕೆ ತಿರುವು ನೀಡಿದ್ದು, ಈ ದಿನ. ಏಪ್ರಿಲ್‌ 14 ಯಶ್‌ ಕನಸು ನನಸಾದ ದಿನ. ಯಶ್‌ ಎಂಬ ವ್ಯಕ್ತಿ ಇಡೀ ವಿಶ್ವಕ್ಕೆ ಪರಿಚಯವಾಗಿ, ಜನಮಾಸದಲ್ಲಿ ನೆಲೆಯೂರಿದ ದಿನ. 
 

KGF Chapter 2: ಯಶ್‌ ಅಭಿನಯ, ಗತ್ತು, ಗಾಂಭೀರ್ಯ ಎಲ್ಲವೂ ಸಿನಿಪ್ರಿಯರ ಮನಗೆದ್ದಿವೆ. ಹ್ಯಾಂಡ್ಸಮ್‌ ಹಂಕ್‌ ಯಶ್‌ ತಮ್ಮ ನಟನೆಯಿಂದಲೂ ಜನರ ಹೃದಯಗೆದ್ದವರು. ರಾಕಿ ಭಾಯ್‌ ಆಗಿ ಮಿಂಚಿದ ಯಶ್‌ ಜೀವನದ ಚಿತ್ರಣವನ್ನೇ ಬದಲಿಸಿದ್ದು ಏಪ್ರಿಲ್‌ 14. ಈ ದಿನ ಆ ಘಟನೆ ನಡೆಯದೇ ಹೋಗಿದ್ದರೆ, ರಾಕಿಂಗ್ ಸ್ಟಾರ್ ಯಶ್ ರಾಕಿ ಭಾಯ್ ಆಗ್ತಾನೂ ಇರಲಿಲ್ಲ. ಸತತ ಪ್ರಯತ್ನದ ಫಲ, 2018 ರಲ್ಲಿ ಯಶ್‌ ಕಂಡ ದೊಡ್ಡ ಕನಸು ನನಸಾಗೇ ಬಿಟ್ಟಿತು ನೋಡಿ. 
 

1 /8

ನಟ ಯಶ್‌ ವೃತ್ತಿ ಜೀವನದಲ್ಲಿ ಕೆಜಿಎಫ್ ತುಂಬಾ ಮಹತ್ವದ ಸಿನಿಮಾ. 2018 ರಲ್ಲಿ ಕೆಜಿಎಫ್ ಮೂಲಕ ರಾಕಿ ಭಾಯ್ ಸಿನಿರಂಗದಲ್ಲಿ ದಾಖಲೆ ಬರೆಯು ಸಜ್ಜಾದರು. ಇಡೀ ಕನ್ನಡ ನಾಡನ್ನ ಜಗತ್ತಿಗೆ ಪರಿಚಯಿಸಿದರು.   

2 /8

ಕೆಜಿಎಫ್ ಸಿನಿಮಾದ ಮೊದಲ ಭಾಗ ಹುಟ್ಟಿಸಿದ್ದ ಆ ಕ್ರೇಜ್‌ನ್ನು ಕೆಜಿಎಫ್‌ 2 ಇಮ್ಮಡಿ ಮಾಡಿತು. ಯಶ್ ಸಿನಿ ಜೀವನಕ್ಕೆ ದೊಡ್ಡ ತಿರುವು ನೀಡಿದ್ದು, ಕೆಜಿಎಫ್‌ ಸಿನಿಮಾ. ಈ ಚಿತ್ರ ರಿಲೀಸ್‌ ಆಗಿ ಹೆಚ್ಚು ಕಡಿಮೆ ಐದು ವರ್ಷಗಳೇ ಕಳೆದಿವೆ.  

3 /8

ಕನ್ನಡದ ಕೆಜಿಎಫ್ ಸಿನಿಮಾ ಭಾರತದಲ್ಲಿ ಮಾತ್ರವಲ್ಲ ಪರ ದೇಶದಲ್ಲೂ ಸಿಕ್ಕಾಪಟ್ಪೆ ಹವಾ ಹುಟ್ಟಿಸಿತು.  ಪಾಕಿಸ್ತಾನದಲ್ಲೂ ರಿಲೀಸ್ ಆಗಿ ಹೊಸ ದಾಖಲೆ ನಿರ್ಮಿಸಿತು.   

4 /8

ಕೆಜಿಎಫ್ ಚಾಪ್ಟರ್‌ 1 ಅಮಲಿನಲ್ಲಿದ್ದ ಜನರಿಗೆ ಮತ್ತಷ್ಟು ಕಿಕ್‌ ಕೊಟ್ಟಿದ್ದು, ಕೆಜಿಎಫ್ ಚಾಪ್ಟರ್‌ 2 ಬರೋಬ್ಬರಿ 100 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಈ ಸಿನಿಮಾ, ವಿಶ್ವಾದ್ಯಂತ ಹಿಟ್‌ ಆಯಿತು.   

5 /8

ಏಪ್ರಿಲ್ 14 ರಂದು ಕೆಜಿಎಫ್‌ 2 ಎಲ್ಲೆಡೆ ರಿಲೀಸ್‌ ಆಯಿತು. ಕೆಜಿಎಫ್ ಚಾಪ್ಟರ್‌ 1 ಗಿಂತಲೂ ಕೆಜಿಎಫ್ ಚಾಪ್ಟರ್‌ 2 ಜನರಿಗೆ ತುಂಬಾ ಇಷ್ಟವಾಯಿತು. ಕೆಜಿಎಫ್ 1 ಸಿನಿಮಾದಲ್ಲಿ ನರಾಚಿ ವಶಪಡಿಸಿಕೊಳ್ಳುವ ಕತೆ ಹೇಳಿತ್ತು. ಕೆಜಿಎಫ್‌ 2 ನಲ್ಲಿ ರಾಕಿಯ ಗೆಲುವಿನ ಕತೆ ಸಿನಿಪ್ರಿಯರ ಹೃದಯಗೆದ್ದಿತು.   

6 /8

ಕೆಜಿಎಫ್ 2 ಜರನ್ನು ಬೇರೆಯದ್ದೇ ರೀತಿಯಲ್ಲಿ ಸೆಳೆಯಿತು. ರಾಕಿ ಭಾಯ್ ಇಡೀ ಸಿನಿಮಾರಂಗದಲ್ಲಿ ಹೊಸ ಅಲೆ ಎಬ್ಬಿಸಿದರು. ಬಾಕ್ಸಾಫೀಸ್‌ನಲ್ಲಿ ಕೋಟಿ ಕೋಟಿ ಕಲೆ ಹಾಕಿ, ನೂತನ ದಾಖಲೆ ಬರೆದರು.   

7 /8

ಕೆಜಿಎಫ್‌ 2 ಮೂಲಕ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆದರು. ವಿಶ್ವಾದ್ಯಂತ ಜನರು ಅವರ ನಟನೆಯನ್ನು ಮೆಚ್ಚಿದರು. ಸೌತ್‌ ಸ್ಟಾರ್‌ ಆಗಿದ್ದ ಯಶ್‌ ಕೆಜಿಎಫ್‌ 2 ಮೂಲಕ ವಿಶ್ವಾದ್ಯಂತ ಚಿರಪರಿಚಿತರಾದರು.   

8 /8

ಸ್ಯಾಂಡಲ್‌ವುಡ್‌ನ್ನು ಮತ್ತೊಂದು ಲೆವೆಲ್‌ಗೆ ಕೊಂಡಯ್ದರು. ಇದೇ ಕಾರಣಕ್ಕೆ ಕೆಜಿಎಫ್‌ 2 ರಿಲೀಸ್‌ ಆದ ಏಪ್ರಿಲ್‌ 14 ಯಶ್‌ ಜೀವನದಲ್ಲಿ ಮಹತ್ವ ಪಡೆಯಿತು.