Venus Transit: 2023: ಈ ದಿನ ಮಂಗಳನ ಅಂಗಳಕ್ಕೆ ಶುಕ್ರನ ಎಂಟ್ರಿ, 5 ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

Venus Transit In Aris 2023: ಬರುವ ಮಾರ್ಚ್ 12ರಂದು ಶುಕ್ರ ಗೋಚರ ನೆರವೇರಲಿದೆ. ಪ್ರಸ್ತುತ ಶುಕ್ರ ಮೀನ ರಾಶಿಯಲ್ಲಿದ್ದು, ಮಾರ್ಚ್ 12 ರಂದು ಮಂಗಳನ ಅಧಿಪತ್ಯದ ಮೇಷ ರಾಶಿಗೆ ಪ್ರವೇಶಿಸಲಿದ್ದಾನೆ. ಜೋತಿಷ್ಯ ಶಾಸ್ತ್ರದಲ್ಲಿ ಶುಕ್ರನನ್ನು ಸಮೃದ್ಧಿ, ಸುಖ-ಸಂಪನ್ನತೆ ಹಾಗೂ ಪ್ರೇಮ-ಸೌಂದರ್ಯದ ಕಾರಕ ಗ್ರಹ ಎಂದು ಪರಿಗಣಿಸಲಾಗುತ್ತದೆ. ಶುಕ್ರನ ಈ ಗೋಚರ ಕೆಲ ರಾಶಿಗಳ ಜನರ ಪಾಲಿಗೆ ಅತ್ಯಂತ ಉತ್ತಮ ಫಲಿತಾಂಶಗಳನ್ನು ತರಲಿದೆ. ಇನ್ನೊಂದೆಡೆ ಈ ಗೋಚರದಿಂದ ಕೆಲವರು ತುಂಬಾ ಎಚ್ಚರಿಕೆಯಿಂದ ಇರಬೇಕಾದ ಕಾಲ ಬರಲಿದೆ. ಶುಕ್ರನ ಈ ಗೋಚರ ಯಾವ ರಾಶಿಗಳ ಜನರ ಪಾಲಿಗೆ ವಿತ್ತೀಯ ಲಾಭಗಳನ್ನು ತರಲಿದೆ ತಿಳಿದುಕೊಳ್ಳೋಣ ಬನ್ನಿ,

Shukra Rashi Parivartan 2023: ಜೋತಿಷ್ಯ ಶಾಸ್ತ್ರದಲ್ಲಿ 9 ಗ್ರಹಗಳಲ್ಲಿ ಶುಕ್ರನನ್ನು ಅತ್ಯಂತ ಶುಭ ಗ್ರಹ ಎಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರ ದೆಸೆ ಇದ್ದರೆ ಜೀವನದಲ್ಲಿ ಪ್ರೇಮ ಹಾಗೂ ಭೌತಿಕ ಸುಖಕ್ಕೆ ಯಾವುದೇ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಇನ್ನೊಂದೆಡೆ ಜಾತಕದಲ್ಲಿ ಶುಕ್ರನ ಸ್ಥಾನ ದುರ್ಬಲವಾಗಿದ್ದರೆ ಪ್ರತಿಯೊಂದು ಕೆಲಸದಲ್ಲಿ ನಿರಾಸೆ ಕೈಸೇರುತ್ತದೆ ಎನ್ನಲಾಗುತ್ತದೆ. ಶುಕ್ರ ಗೊಚರದ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಬೀಳುತ್ತದೆ. ಮಾರ್ಚ್ 12 ರಂದು ಮೀನ ರಾಶಿಯನ್ನು ತೊರೆದು ಶುಕ್ರ ಮೇಷ ರಾಶಿಯನ್ನು ಪ್ರವೇಶಿಸಿಸಲಿದೆ. ಶುಕ್ರನ ಈ ಮೇಷ ಗೋಚರ ಬೆಳಗ್ಗೆ 8 ಗಂಟೆ ೧೩ ನಿಮಿಷಕ್ಕೆ ನೆರವೇರಲಿದೆ. ಈ ಮೊದಲು ಫೆಬ್ರುವರಿ 15ರಂದು ಶುಕ್ರನ ಮೀನ ಗೋಚರ ನೆರವೇರಿತ್ತು. ಮೇಷ ರಾಶಿಯಲ್ಲಿ ಈಗಾಗಲೇ ಛಾಯಾಗ್ರಹ ರಾಹುವಿನ ಉಪಸ್ಥಿತಿ ಇದೆ. ಹೋಳಿ ಹಬ್ಬದ ಬಳಿಕ ಒಂದೊಮ್ಮೆ ಮೇಷ ರಾಶಿಯನ್ನು ಪ್ರವೇಶಿಸುವ ಶುಕ್ರ ಹಲವು ಜಾತಕದವರಿಗೆ ಶುಭ ಫಲಿತಾಂಶಗಳನ್ನು ನೀಡಲಿದ್ದಾನೆ. ಇನ್ನೊಂದೆಡೆ ಇದು ಕೆಲ ರಾಶಿಗಳ ಜನರ ಮೇಲೆ ನಕಾರಾತ್ಮಕ ಪ್ರಭಾವ ಕೂಡ ಬೀರಲಿದೆ. ಶುಕ್ರನ ಈ ಗೋಚರ ಯಾವ 5 ರಾಶಿಗಳ ಜನರ ಪಾಲಿಗೆ ಶುಭಫಲಪ್ರದ ಸಾಬೀತಗಲಿದೆ ತಿಳಿಯೋಣ ಬನ್ನಿ,

 

ಇದನ್ನೂ ಓದಿ-ಛಾಯಾಗ್ರಹ ರಾಹುವಿನ ನಕ್ಷತ್ರದಲ್ಲಿ ಶನಿ ಪ್ರವೇಶ, 3 ರಾಶಿಗಳ ಜನರಿಗೆ ಭಾರಿ ವಿತ್ತೀಯ ಲಾಭ, ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

1. ಮೇಷ: ಶುಕ್ರ ಮೇಷ ರಾಶಿಯನ್ನು ಪ್ರವೆಶಿಸಲಿದ್ದಾನೆ. ಇದರಿಂದ ಮೇಷ ರಾಶಿಯ ಜನರಿಗೆ ಸಾಕಷ್ಟು ಲಾಭ ಸಿಗಲಿದೆ. ನಿಮ್ಮ ಪರ್ಸ್ನ್ಯಾಲಿಟಿಯಲ್ಲಿ ಬದಲಾವಣೆ ಕಂಡುಬರಲಿದೆ. ಬಂಧು-ಮಿತ್ರರಿಂದ ನಿಮಗೆ ಸಾಕಷ್ಟು ಬೆಂಬಲ ಸಿಗಲಿದೆ. ಪ್ರೇಮ ಸಂಬಂಧ ಕೂಡ ಗಟ್ಟಿಯಾಗಲಿದೆ. ವಿವಾಹಿತರಿಗೆ ಸಂಗಾತಿಯ ಭರಪೂರ ಸಾಥ್ ಸಿಗಲಿದೆ. ಈ ಅವಧಿಯಲ್ಲಿ ನಿಮಗೆ ಹಲವು ಆರ್ಥಿಕ ಲಾಭಗಳು ಸಿಗಲಿವೆ. ಬಿಸ್ನೆಸ್ ನಲ್ಲಿಯೂ ಕೂಡ ನಿಮಗೆ ಲಾಭದ ಸಂಕೇತಗಳಿವೆ.  

2 /5

2. ಮಿಥುನ: ಶುಕ್ರ ಗೋಚರ ಮಿಥುನ ರಾಶಿಯವರ ಪಾಲಿಗೆ ಅತ್ಯಂತ ಒಳ್ಳೆಯ ಫಲಗಳನ್ನು ತರಲಿದೆ. ಹೊಸ ಜನರ ಜೊತೆಗೆ ನಿಮ್ಮ ಸಂಪರ್ಕ ಬೆಳೆಯಲಿದೆ. ಇದರಿಂದ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಮಕ್ಕಳ ಕಡೆಯಿಂದ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ. ಶುಕ್ರನ ಈ ಗೋಚರ ವಿದ್ಯಾರ್ಥಿ ವರ್ಗದ ಜನರಿಗೆ ಅತ್ಯಂತ ಅದ್ಭುತವಾಗಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಭೌತಿಕ ಸುಖವನ್ನು ಆನಂದಿಸುವಿರಿ. ಶಿಕ್ಷಣದಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ನೀವು ಯಶಸ್ವಿಯಾಗುವಿರಿ.  

3 /5

3. ಸಿಂಹ: ಸಿಂಹ ರಾಶಿಯ ಜಾತಕದವರ ಪಾಲಿಗೆ ಶುಕ್ರ ಗೋಚರ ಅತ್ಯುತ್ತಮ ಸಾಬೀತಾಗಲಿದೆ.  ವಿವಾಹಿತರಿಗೆ ಈ ಗೋಚರ ಲಾಭಕಾರಿಯಾಗಿದೆ. ಹೊಸ ಕೆಲಸ ಪ್ರಾರಂಭಿಸಲು ಬಯಸುವವರಿಗೆ ಈ ಸಮಯ ಅನುಕೂಲಕರವಾಗಿದೆ. ವಿದೇಶ ಯಾತ್ರೆಯ ಯೋಗ ನಿರ್ಮಾಣಗೊಳ್ಳುತ್ತಿದೆ. ನೌಕರಿಯ ಹುಡುಕಾಟದಲ್ಲಿರುವ ಜನರ ಹುಡುಕಾಟಕ್ಕೆ ತೆರೆಬೀಳಲಿದೆ. ಉತ್ತಮ ನೌಕರಿಯ ಪ್ರಸ್ತಾಪ ಸಿಗಬಹುದು. ಕಿರಿಯ ಸಹೋದರ-ಸಹೋದರಿಯರ ಬೆಂಬಲ ಸಿಂಹ ರಾಶಿಯ ಜಾತಕದವರಿಗೆ ಸಿಗಲಿದೆ.  

4 /5

4. ಧನು: ಜನವರಿ 17 ರಿಂದ ಶನಿಯ ಸಾಡೆಸಾತಿಯಿಂದ ಮುಕ್ತಿ ಹೊಂದಿದ ಧನು ಜಾತಕದವರಿಗೆ ಶುಕ್ರಗೋಚರ ಅತ್ಯಂತ ಲಾಭಕಾರಿ ಸಾಬೀತಾಗಲಿದೆ. ಅದರಲ್ಲಿಯೂ ವಿಶೇಷವಾಗಿ ವಿದ್ಯಾರ್ಥಿ ವರ್ಗದ ಜನರಿಗೆ ಉತ್ತಮ ಫಲಿತಾಂಶಗಳು ಪ್ರಾಪ್ತಿಯಾಗಲಿವೆ. ವಿವಾಹಿತರಿಗೆ ಗುಡ್ ನ್ಯೂಸ್ ಸಿಗುವ ಸಾಧ್ಯತೆ ಇದೆ. ಹಳೆ ವಿವಾದ ಅಂತ್ಯವಾಗಲಿದೆ. ಹಣಕಾಸಿನ ಮುಗ್ಗಟ್ಟು ನಿವಾರಣೆಯಾಗಲಿದೆ. ವಿವಿಧ ಮೂಲಗಳಿಂದ ಹಣ ಗಳಿಸುವಲ್ಲಿ ನೀವು ಯಶಸ್ವಿಯಾಗುವಿರಿ. ನೌಕರಿಯಲ್ಲಿರುವವರಿಗೆ ಪದೋನ್ನತಿಯ ಜೊತೆಗೆ ಇನ್ಕ್ರೀಮೆಂಟ್ ಸಿಗುವ ಸಾಧ್ಯತೆ ಇದೆ.  

5 /5

5. ಮೀನ: ಮೀನ ಜಾತಕದವರ ಮೇಲೆ ಶುಕ್ರನ ಸಂಪೂರ್ಣ ಕೃಪೆ ಇರಲಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಹಣ ಉಳಿತಾಯ ಮಾಡುವಲ್ಲಿ ಯಶಸ್ವಿಯಾಗುವಿರಿ. ಪಾರ್ಟ್ನರ್ ಶಿಪ್ ವ್ಯವಹಾರದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ಅತ್ತೆ ಮನೆಯವರ ಜೊತೆಗಿನ ಸಂಬಂಧದಲ್ಲಿ ಸುಧಾರಣೆ ಕಾಣಲು ಸಿಗಲಿದೆ. ಈ ಅವಧಿಯಲ್ಲಿ ಜನರನ್ನು ನೀವು ನಿಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗುವಿರಿ. ಇದರಲ್ಲಿ ನಿಮ್ಮ ವಾಣಿಯ ಪ್ರಭಾವ ಹೆಚ್ಚಾಗುವುದನ್ನು ನೀವು ನೋಡಬಹುದು. ಆರ್ಥಿಕ ವಿಷಯದಲ್ಲಿ ತುಂಬಾ ಯೋಚಿಸಿ ಮುಂದುವರೆಯುವುದು ಉತ್ತಮ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಟಿಕರಿಸುವುದಿಲ್ಲ)