ಅಕ್ಷಯ ತೃತೀಯದ ದಿನ ಡಿಜಿಟಲ್ ಗೋಲ್ಡ್ ಮೇಲೆ ಕೂಡಾ ಸುಲಭವಾಗಿ ಮಾಡಬಹುದು ಹೂಡಿಕೆ ..!

ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಡಿಜಿಟಲ್ ಚಿನ್ನದ ಈ ಕೆಲವು ಆಯ್ಕೆಗಳು ನಿಮಗೆ ದೊಡ್ಡ ಲಾಭವನ್ನು ನೀಡಬಹುದು.

 ಬೆಂಗಳೂರು : ಹಿಂದೂ ಧರ್ಮದಲ್ಲಿ ಅಕ್ಷಯ ತೃತೀಯವನ್ನು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ. ಇದನ್ನು ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯದಂದು ಆಚರಿಸಲಾಗುತ್ತದೆ. ಈ ವರ್ಷ ಈ ಹಬ್ಬವು ಮೇ 3 ರಂದು ಬರುತ್ತದೆ. ಈ ದಿನದಂದು ಚಿನ್ನವನ್ನು ಖರೀದಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಅಕ್ಷಯ ತೃತೀಯದಂದು ಚಿನ್ನವನ್ನು ಖರೀದಿಸಲು ಯೋಚಿಸುತ್ತಿದ್ದರೆ, ಡಿಜಿಟಲ್ ಚಿನ್ನದ ಈ ಕೆಲವು ಆಯ್ಕೆಗಳು ನಿಮಗೆ ದೊಡ್ಡ ಲಾಭವನ್ನು ನೀಡಬಹುದು.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಗೋಲ್ಡ್ ಇಟಿಎಫ್ ಒಂದು ಕಾಗದದ ಚಿನ್ನದ ಸೌಲಭ್ಯವಾಗಿದ್ದು, ನೀವು ಷೇರುಗಳಂತಹ ಘಟಕಗಳಲ್ಲಿ ಚಿನ್ನವನ್ನು ಖರೀದಿಸಬಹುದು. ಚಿನ್ನದ ಮೇಲೆ ಹೂಡಿಕೆ ಮಾಡಲು ಇದು ಅಗ್ಗದ ಆಯ್ಕೆಗಳಲ್ಲಿ ಒಂದಾಗಿದೆ. ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು,  ಡಿಮ್ಯಾಟ್ ಖಾತೆಯನ್ನು ಹೊಂದಿರಬೇಕು. ಇದರ ಮಾನದಂಡವೆಂದರೆ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಗಳು. ಮೂಲಭೂತವಾಗಿ ಇದು ಎಕ್ಸ್ಚೇಂಜ್ ಟ್ರೇಡೆಡ್ ಫಂಡ್ ಆಗಿದೆ. ಇದನ್ನು ಸ್ಟಾಕ್ ಎಕ್ಸ್ಚೇಂಜ್ನಲ್ಲಿ ಘಟಕಗಳಲ್ಲಿ ಖರೀದಿಸಬಹುದು. ಇದರಲ್ಲಿ ಚಿನ್ನದ ಭೌತಿಕ ವಿತರಣೆ ಇರುವುದಿಲ್ಲ. 

2 /5

ಚಿನ್ನದ ಮೇಲೆ ಹೂಡಿಕೆ ಮಾಡಲು ಸಾವರಿನ್ ಗೋಲ್ಡ್ ಬಾಂಡ್  ಉತ್ತಮ ಆಯ್ಕೆಯಾಗಿದೆ. ಚಿನ್ನದ ಬಾಂಡ್‌ಗಳಲ್ಲಿ ಹೂಡಿಕೆ ಮಾಡಲು SGB ಗಳನ್ನು ಭಾರತ ಸರ್ಕಾರವು ಆಗೊಮ್ಮೆ ಈಗೊಮ್ಮೆ ನೀಡುತ್ತದೆ. ಚಿನ್ನದ ಬಾಂಡ್‌ಗಳು ಎಂಟು ವರ್ಷಗಳ ಮೆಚುರಿಟಿ ಅವಧಿ ಮತ್ತು ಐದು ವರ್ಷಗಳ ಲಾಕ್-ಇನ್ ಅವಧಿಯನ್ನು ಹೊಂದಿರುತ್ತವೆ. ಮುಕ್ತಾಯದವರೆಗೆ SGB ಅನ್ನು ಹೊಂದಿದ್ದರೆ, ನೀವು ಹೂಡಿಕೆಯ ಮೇಲೆ ಯಾವುದೇ ಕ್ಯಾಪಿಟಲ್ ಗೈನ್ ಪಾವತಿಸಬೇಕಾಗಿಲ್ಲ. ಇದರೊಂದಿಗೆ, ನೀವು ವಾರ್ಷಿಕ 2.5 ಶೇಕಡಾ ಬಡ್ಡಿಯನ್ನು ಸಹ ಪಡೆಯುತ್ತೀರಿ. 

3 /5

ಡಿಜಿಟಲ್ ಚಿನ್ನವನ್ನು ಖರೀದಿಸಲು ನೀವು ಸುಲಭವಾದ ಆಯ್ಕೆಯನ್ನು ಹುಡುಕುತ್ತಿದ್ದರೆ, ನಿಮ್ಮ ಸ್ಮಾರ್ಟ್‌ಫೋನ್‌ನಿಂದಲೂ ಚಿನ್ನವನ್ನು ಖರೀದಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿರುವ Paytm, Google Pay, PhonePe ನಂತಹ ಮೊಬೈಲ್ ವ್ಯಾಲೆಟ್‌ಗಳಲ್ಲಿ ನೀವು ಈ ಸೌಲಭ್ಯವನ್ನು ಪಡೆಯುತ್ತೀರಿ. ಇದಕ್ಕಾಗಿ ನಿಮಗೆ ಹೆಚ್ಚಿನ ಹೂಡಿಕೆ ಅಗತ್ಯವಿಲ್ಲ. 

4 /5

ನೀವು ಇಟಿಎಫ್‌ಗಳ ಮೂಲಕ ಮಾತ್ರವಲ್ಲದೆ ಮ್ಯೂಚುವಲ್ ಫಂಡ್‌ಗಳ ಮೂಲಕವೂ ಚಿನ್ನದಲ್ಲಿ ಹೂಡಿಕೆ ಮಾಡಬಹುದು. ಗೋಲ್ಡ್ ಇಟಿಎಫ್‌ಗಳಿಗಿಂತ ಗೋಲ್ಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸುಲಭ. ನೀವು ಗೋಲ್ಡ್ ಮ್ಯೂಚುಯಲ್ ಫಂಡ್‌ಗಳಲ್ಲಿ ನೇರವಾಗಿ ಆನ್‌ಲೈನ್ ಮೋಡ್ ಮೂಲಕ ಅಥವಾ ಅದರ ವಿತರಕರ ಮೂಲಕ ಹೂಡಿಕೆ ಮಾಡಬಹುದು. ಗೋಲ್ಡ್ ಮ್ಯೂಚುವಲ್ ಫಂಡ್ ಮುಕ್ತ ಹೂಡಿಕೆ ಉತ್ಪನ್ನವಾಗಿದೆ.  ಅಂದರೆ ನೀವು ಯಾವಾಗ ಬೇಕಾದರೂ ಮಾರಾಟ ಮಾಡಬಹುದು. ಇದಕ್ಕೆ ಡಿಮ್ಯಾಟ್ ಖಾತೆ ಅಗತ್ಯವಿಲ್ಲ. ಗೋಲ್ಡ್ ಮ್ಯೂಚುಯಲ್ ಫಂಡ್‌ನಲ್ಲಿ, ನಿಮ್ಮ ಫಂಡ್ ಮ್ಯಾನೇಜರ್ ತನ್ನ ಕಾರ್ಪಸ್ ಅನ್ನು ಗೋಲ್ಡ್ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಾರೆ. SIP ಮೂಲಕ ಗೋಲ್ಡ್ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು.  

5 /5

ನೀವು ಭೌತಿಕ ಚಿನ್ನವನ್ನು ಖರೀದಿಸಲು ಹೋದಾಗ, ನೀವು ಚಿನ್ನದ ಶುದ್ಧತೆಯ ಬಗ್ಗೆ ವಿಶೇಷ ಗಮನ ಹರಿಸಬೇಕು. ಡಿಜಿಟಲ್ ಗೋಲ್ಡ್ ನಲ್ಲಿ ಅಂತಹ ಯಾವುದೇ ಸಮಸ್ಯೆ ಇಲ್ಲ. ಡಿಜಿಟಲ್ ಉತ್ಪನ್ನಗಳನ್ನು ಡಿಮ್ಯಾಟ್ ಖಾತೆಗಳ ಮೂಲಕ ಖರೀದಿಸಬಹುದು ಮತ್ತು ಇದು ಯಾವುದೇ ಸಮಯದಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ಸಾಧ್ಯವಾಗುತ್ತದೆ .