ODI World Cup 2023: ಕೊನೆಯ ಏಕದಿನ ವಿಶ್ವಕಪ್ ಕ್ರಿಕೆಟ್ ಆಡುವ ಆಟಗಾರರಿವರು...!

ಈ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್ ನಡೆಯಲಿದ್ದು, ಸಾಕಷ್ಟು ಅನುಭವಿ ಕ್ರಿಕೆಟಿಗರು ನಿವೃತ್ತಿ ಹೊಂದುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಹಿರಿಯ ಆಟಗಾರರಾದ ಸ್ಟೀವ್ ಸ್ಮಿತ್, ವಿರಾಟ್ ಕೊಹ್ಲಿ ಮತ್ತು ಹೆಚ್ಚಿನವರಿಗೆ ಕೊನೆಯ  2023 ರ 50 ಓವರ್‌ಗಳ ವಿಶ್ವಕಪ್   ಕೊನೆಯ ವಿಶ್ವಕಪ್ ಆಗುವ ಸಾಧ್ಯತೆ ಇದೆ.. ಈ ಚಿತ್ರಗಳ ಸಂಗ್ರಹದಲ್ಲಿ, ತಮ್ಮ ಕೊನೆಯ ಏಕದಿನ ವಿಶ್ವಕಪ್‌ನಲ್ಲಿ ಆಡುವ ಸಾಧ್ಯತೆಯಿರುವ ಕೆಲವು ಆಟಗಾರರನ್ನು ನೋಡೋಣ.

1 /5

ಶೀಘ್ರದಲ್ಲೇ 37 ವರ್ಷಕ್ಕೆ ಕಾಲಿಡಲಿರುವ ಡೇವಿಡ್ ವಾರ್ನರ್ ಆಸ್ಟ್ರೇಲಿಯಾ ಪರ 142 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಖಂಡಿತವಾಗಿ, ಇದು ಈ ವರ್ಷ ಕೊನೆಯ ಏಕದಿನ ವಿಶ್ವಕಪ್ ಆಗಿರುತ್ತದೆ. (ಚಿತ್ರ ಮೂಲ: ಟ್ವಿಟರ್)

2 /5

ಬಾಂಗ್ಲಾದೇಶದ ಮಾಜಿ ನಾಯಕ, ಶಕೀಬ್ ಅಲ್ ಹಸನ್ 2006 ರಲ್ಲಿ ತಮ್ಮ ಮೊದಲ ಏಕದಿನ ಪಂದ್ಯವನ್ನು ಆಡಿದರು ಮತ್ತು ಅವರು ಒಟ್ಟಾರೆಯಾಗಿ 234 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ತಮ್ಮ ಕೊನೆಯ ಏಕದಿನ ವಿಶ್ವಕಪ್ ಅನ್ನು ತಮ್ಮ ದೇಶಕ್ಕಾಗಿ ಆಡುವ ಸಾಧ್ಯತೆಯಿದೆ. (ಚಿತ್ರ ಮೂಲ: ಟ್ವಿಟರ್)

3 /5

ತವರಿನಲ್ಲಿ ನಡೆಯುತ್ತಿರುವ ಈ ವರ್ಷದ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಅವರ ಮೇಲೆ  ಭಾರತೀಯರು ಸಾಕಷ್ಟು ನಿರೀಕ್ಷೆ ಇಟ್ಟಿದ್ದು, ರೋಹಿತ್ ಈಗ ಭಾರತದ ನಾಯಕನಾಗಿದ್ದು, ಅವರು ಖಂಡಿತವಾಗಿಯೂ ಟ್ರೋಫಿಯ ಮೇಲೆ ಕಣ್ಣಿಟ್ಟಿದ್ದಾರೆ (ಚಿತ್ರ ಮೂಲ: ಟ್ವಿಟರ್)

4 /5

34 ವರ್ಷದ ಸ್ಟೀವ್ ಸ್ಮಿತ್ ಆಸ್ಟ್ರೇಲಿಯಾ ಪರ 142 ಏಕದಿನ ಪಂದ್ಯಗಳನ್ನಾಡಿದ್ದು 44.5 ಸರಾಸರಿಯಲ್ಲಿ 4939 ರನ್ ಗಳಿಸಿದ್ದಾರೆ, ಇದು ಆಸೀಸ್‌ಗೆ ಸ್ಮಿತ್‌ಗೆ ಕೊನೆಯ ಏಕದಿನ ವಿಶ್ವಕಪ್ ಆಗುವ ಸಾಧ್ಯತೆಯಿದೆ. (ಚಿತ್ರ ಮೂಲ: ಟ್ವಿಟರ್)

5 /5

ಕಿಂಗ್ ಕೊಹ್ಲಿ ಈಗಾಗಲೇ ಟೀಂ ಇಂಡಿಯಾ ಪರ 282 ಏಕದಿನ ಪಂದ್ಯಗಳನ್ನು ಆಡಿದ್ದಾರೆ. 47 ODI ಶತಕಗಳನ್ನು ಮತ್ತು  67 ಅರ್ಧಶತಕಗಳನ್ನು ಹೊಂದಿದ್ದಾರೆ.(ಚಿತ್ರ ಮೂಲ: ಟ್ವಿಟರ್)