Kotak Mahindra Smart EMI: ಯಾವುದೇ ಕಾಗದ ಪತ್ರಗಳಿಲ್ಲದೆ ಸುಲಭವಾಗಿ ಸಾಲ ನೀಡಲಿದೆ ಈ ಬ್ಯಾಂಕ್

ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಸ್ಮಾರ್ಟ್ ಇಎಂಐ ಕಾರ್ಡ್ ಆಯ್ಕೆಯನ್ನು ಕೂಡ ತೆಗೆದುಕೊಳ್ಳಬಹುದು. 

ನವದೆಹಲಿ : Kotak Mahindra Smart EMI : ಗ್ರಾಹಕರ ಅಗತ್ಯತೆಗಳನ್ನು ಗಮನದಲ್ಲಿಟ್ಟುಕೊಂಡು, ಕೋಟಕ್ ಮಹೀಂದ್ರಾ ಬ್ಯಾಂಕ್ ಹೊಸ ಆಫರ್ ತಂದಿದೆ. ಇದರಲ್ಲಿ ಗ್ರಾಹಕರು ಯಾವುದೇ ಕಾಗದಪತ್ರವಿಲ್ಲದೆ ತಮ್ಮ ಡೆಬಿಟ್ ಕಾರ್ಡ್‌ ಮೂಲಕ 5,000 ರೂಪಾಯಿ ಅಥವಾ ಹೆಚ್ಚಿನ ಮೌಲ್ಯದ ವಸ್ತುಗಳ ಮೇಲೆ ಸುಲಭ ಕಂತುಗಳಲ್ಲಿ ಸಾಲವನ್ನು ಪಡೆಯಬಹುದು. ಇದಕ್ಕಾಗಿ, ಗ್ರಾಹಕರು ಕೋಟಕ್ ಮಹೀಂದ್ರಾ ಅವರ ಸ್ಮಾರ್ಟ್ ಇಎಂಐ ಯೋಜನೆಯ ಲಾಭವನ್ನು ಪಡೆಯುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಟೆಲಿವಿಷನ್‌ನಿಂದ ಪೀಠೋಪಕರಣಗಳವರೆಗೆ ಯಾವುದೇ ಉತ್ಪನ್ನವನ್ನು ಸುಲಭವಾದ ಇಎಂಐ ಕಂತುಗಳಲ್ಲಿ ಖರೀದಿಸಬಹುದು. ಇದಕ್ಕಾಗಿ ಬ್ಯಾಂಕ್ 15 ಲಕ್ಷದವರೆಗೆ ಹಣಕಾಸಿನ ಸೌಲಭ್ಯವನ್ನು ನೀಡುತ್ತಿದೆ.

2 /5

ಕೋಟಕ್ ಬ್ಯಾಂಕಿನಿಂದ ಪಡೆದ ಮಾಹಿತಿಯ ಪ್ರಕಾರ, ಈ ಸ್ಮಾರ್ಟ್ ಇಎಂಐ ಯೋಜನೆಯಡಿಯಲ್ಲಿ, ಇಎಂಐನಲ್ಲಿ ಶಾಪಿಂಗ್ ಮಾಡುವ ಅನುಕೂಲವನ್ನು ಕಲ್ಪಿಸಲಾಗಿದೆ. ಇದಕ್ಕಾಗಿ, ನೀವು ನಿಮ್ಮ ಹತ್ತಿರದ ಬ್ಯಾಂಕಿನಪಾರ್ಟ್ನರ್ ಸ್ಟೋರ್ ಗೆ ಭೇಟಿ ನೀಡಬೇಕು. ಅಲ್ಲಿ ತಮ್ಮ ಮಾಹಿತಿಯನ್ನು ನೀಡಬೇಕು. ಇದನ್ನು ಪರಿಶೀಲಿಸಿದ ನಂತರ, ಸಾಲಕ್ಕೆ ಅನುಮೋದನೆ ಸಿಗುತ್ತದೆ. 

3 /5

ಸ್ಮಾರ್ಟ್ ಇಎಂಐ ಸೌಲಭ್ಯವನ್ನು ಪಡೆಯಲು  ಸಣ್ಣ ಕಾಗದಪತ್ರಗಳನ್ನಷ್ಟೇ ನೀಡಬೇಕಾಗುತ್ತದೆ ಎಂದು ಕೋಟಕ್ ಮಹೀಂದ್ರಾ ಬ್ಯಾಂಕ್ ಹೇಳಿದೆ. ಇಲ್ಲಿ ನಿಮಗೆ ಬೇಕಾಗಿರುವುದು ಪ್ಯಾನ್ ಕಾರ್ಡ್ ಮತ್ತು ಕೆವೈಸಿ ದಾಖಲೆ.

4 /5

Smat EMI ಅಡಿಯಲ್ಲಿ, ನೀವು ಅನೇಕ ಉತ್ಪನ್ನಗಳ ಮೇಲೆ  NIL ಡೌನ್ ಪೇಮೆಂಟ್ ಮಾಡಬೇಕಾಗುತ್ತದೆ.  ಗ್ರಾಹಕರ  ಅನುಕೂಲಕ್ಕೆ ತಕ್ಕಂತೆ 6 ತಿಂಗಳಿಂದ 24 ತಿಂಗಳವರೆಗೆ EMI ಅನ್ನು ಪಡೆಯಬಹುದು. 

5 /5

ಕೋಟಕ್ ಮಹೀಂದ್ರಾ ಬ್ಯಾಂಕ್ ಗ್ರಾಹಕರು ಸ್ಮಾರ್ಟ್ ಇಎಂಐ ಕಾರ್ಡ್ ಆಯ್ಕೆಯನ್ನು ಕೂಡ ತೆಗೆದುಕೊಳ್ಳಬಹುದು. ಬ್ಯಾಂಕ್ ಸೂಚಿಸಿರುವ 40 ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಈ ಕಾರ್ಡ್ ಅನ್ನು ಸುಲಭವಾಗಿ ಬಳಸಬಹುದು. ಈ ಕಾರ್ಡ್ ಬಳಸಿ ಮಾಡಿದ ಶಾಪಿಂಗ್ ಅನ್ನು ಸುಲಭವಾಗಿ ಇಎಂಐ ಆಗಿ ಪರಿವರ್ತಿಸಲಾಗುತ್ತದೆ.