ನೋರಾ ಫತೇಹಿ ಡಾನ್ಸ್ ರಿಯಾಲಿಟಿ ಸೋನ ಸೆಟ್ ಗೆ ಚಂದ್ರಮುಖಿ ಗೆಟಪ್ ನಲ್ಲಿ ಆಗಮಿಸಿದ್ದಾರೆ.
ನವದೆಹಲಿ : ಬಾಲಿವುಡ್‌ನ ಅದ್ಭುತ ನರ್ತಕಿ ಮತ್ತು ನಟಿ ನೋರಾ ಫತೇಹಿ ಯಾವಾಗಲೂ ತನ್ನ ಗ್ಲಾಮರಸ್ ಲುಕ್‌ನಿಂದ ಜನರ ಹೃದಯವನ್ನು ಗೆಲ್ಲುತ್ತಾರೆ. ಆದರೆ, ಈ ಬಾರಿ ನೋರಾ ಫತೇಹಿ ಬೇರೆಯೇ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ದೇವದಾಸ್ ಚಿತ್ರದ ಡೋಲಾರೇ ಹಾಡಿನ ಮಾಧುರಿ ದೀಕ್ಷಿತ್ ಲುಕ್ ನಲ್ಲಿ ನೋರಾ ಕಾಣಿಸಿಕೊಂಡಿದ್ದಾರೆ. ಈ ಲುಕ್ ನಲ್ಲಿ ನೊರಾ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ನೋರಾ ಫತೇಹಿ ಡಾನ್ಸ್ ರಿಯಾಲಿಟಿ ಸೋನ ಸೆಟ್ ಗೆ ಚಂದ್ರಮುಖಿ ಗೆಟಪ್ ನಲ್ಲಿ ಆಗಮಿಸಿದ್ದಾರೆ. ಚಂದ್ರಮುಖಿ ಅವತಾರದಲ್ಲಿ ನೋರಾ ಅವರನ್ನು ನೋಡುತ್ತಿದ್ದಂತೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ದೇವದಾಸ್ ಚಿತ್ರದ ಪ್ರಸಿದ್ಧ ಹಾಡು 'ಡೋಲಾ ರೆ ಡೋಲಾ' ಲುಕ್ ನಲ್ಲಿ ಕಾಣಿಸಿಕೊಂಡು , ಮಾಧುರಿ ದೀಕ್ಷಿತ್ ಗೆ ಗೌರವ ಸಲ್ಲಿಸಲು ನೋರಾ ಫತೇಹಿ ನಿರ್ಧರಿಸಿದ್ದಾರೆ.
ಬಂಗಾಳಿ ಶೈಲಿಯಲ್ಲಿ ಹೆವಿ ಸೀರೆಯನ್ನು ಧರಿಸಿರುವುದು ಕಂಡುಬರುತ್ತದೆ. ಚಿನ್ನದ ಆಭರಣಗಳಿಂದ ಅಲಂಕರಿಸಿಕೊಂಡಿದ್ದಾರೆ. ಈಗ ನೋರಾ ಫತೇಹಿಯ ಈ ಫೋಟೋಗಳು ಮತ್ತು ವಿಡಿಯೋ ವೈರಲ್ ಆಗುತ್ತಿದೆ.
ನೋರಾ ಫತೇಹಿ ಮಾಧುರಿಯೊಂದಿಗೆ ಡಾನ್ಸ್ ರಿಯಾಲಿಟಿ ಶೋವೊಂದರಲ್ಲಿ ಕೆಲಸ ಮಾಡುವಾಗ ಮೊದಲ ಬಾರಿಗೆ ಮಾಧುರಿ ದೀಕ್ಷಿತ್ ನೆನೆ ಅವರನ್ನು ಭೇಟಿಯಾದ ಅನುಭವವನ್ನು ಹಂಚಿಕೊಂಡಿದ್ದಾರೆ. ಮಾಧುರಿ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ ನೋರಾ, ಮಾಧುರಿ ದೀಕ್ಷಿತ್ ಜೀವನಚರಿತ್ರೆಯನ್ನಾಧರಿಸಿದ ಚಿತ್ರದಲ್ಲಿ ನಟಿಸುವ ಚ್ಛೆಯನ್ನು ಕೂಡಾ ವ್ಯಕ್ತಪಡಿಸಿದ್ದರು. ಸದ್ಯ ನೋರಾ ತನ್ನ ಮುಂದಿನ ಚಿತ್ರ ಭುಜ್ ದಿ ಪ್ರೈಡ್ ಆಫ್ ಇಂಡಿಯಾ ಚಿತ್ರದ ಬಿಡುಗಡೆಯ ತಯಾರಿಯಲ್ಲಿದ್ದಾರೆ.