ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕೋಟ್ಯಾಧಿಪತಿ ಯೋಗ ! 2024ರ ರಾಶಿ ಭವಿಷ್ಯ ಇಲ್ಲಿದೆ !

New Year Horoscope : ಮುಂಬರುವ 2024ರ ಜಾತಕ ಫಲ ಹೇಗಿದೆ ? ಯಾರಿಗೆ ಸಿಹಿ ಯಾರಿಗೆ ಕಹಿ ನೋಡೋಣ. 

New Year Horoscope : ಹೊಸ ವರ್ಷ 2024ಕ್ಕೆ ಕೆಲವೇ ದಿನಗಳು ಬಾಕಿ ಇವೆ.  ಈ ಹಿನ್ನೆಲೆಯಲ್ಲಿ 2024ರ  ರಾಶಿ ಭವಿಷ್ಯ ಹೇಗಿರಲಿದೆ ಎಂದು ತಿಳಿದುಕೊಳ್ಳುವ ತವಕ ಎಲ್ಲರಲ್ಲಿಯೂ ಇರುತ್ತದೆ. ಮುಂಬರುವ 2024ರ ಜಾತಕ ಫಲ ಹೇಗಿದೆ ? ಯಾರಿಗೆ ಸಿಹಿ ಯಾರಿಗೆ ಕಹಿ ನೋಡೋಣ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /11

ಮೇಷ ರಾಶಿ : ಮೇಷ ರಾಶಿಯವರರಿಗೆ 2024 ರಲ್ಲಿ ವಿವಾಹ ಭಾಗ್ಯ ಕೂಡಿ ಬರಲಿದೆ. ಮಕ್ಕಳಿಲ್ಲದವರಿಗೆ ಖಂಡಿತವಾಗಿಯೂ ಮಕ್ಕಳ ಭಾಗ್ಯ ದೊರೆಯುತ್ತದೆ. ಹಣಕಾಸಿನ ವಿಚಾರದಲ್ಲಿಯೂ ಉತ್ತಮವಾಗಿರಲಿದೆ. 

2 /11

ವೃಷಭ ರಾಶಿ : ವೃಷಭ ರಾಶಿಯು ವರ್ಷದ ಅದೃಷ್ಟದ ರಾಶಿಗಳಲ್ಲಿ ಒಂದಾಗಿದೆ. ಈ ವರ್ಷವು ಸಮೃದ್ಧಿ ಮತ್ತು ಐಷಾರಾಮದಿಂದ ತುಂಬಿರುತ್ತದೆ. ವಿಶೇಷವಾಗಿ ಮೇ ಅಂತ್ಯದವರೆಗೆ ನೀವು ಮುಟ್ಟಿದ್ದೆಲ್ಲಾ ಚಿನ್ನ ಎನ್ನುವಂಥ ಕಾಲ. ವರ್ಷವಿಡೀ ಅದೃಷ್ಟ ನಿಮ್ಮ ಕಡೆ ಇರುತ್ತದೆ.

3 /11

ಮಿಥುನ ರಾಶಿ: 2024 ರ ವರ್ಷವು ಮಿಥುನ ರಾಶಿಯವರಿಗೆ ಉತ್ತಮ ಅವಕಾಶಗಳನ್ನು ತರುವಂತಹ ವರ್ಷವಾಗಲಿದೆ. ವಿವಾಹಿತರಿಗೆ ಸಂತಾನ ಭಾಗ್ಯ ದೊರೆಯಲಿದೆ. ಆರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತವೆ. 

4 /11

ಕರ್ಕ ರಾಶಿ: 2024 ರ ಆರಂಭಿಕ ದಿನಗಳಲ್ಲಿ, ವೃತ್ತಿಜೀವನದಲ್ಲಿ ದೊಡ್ಡ ಗೆಲುವು ಇರುವುದಿಲ್ಲ. ಏಪ್ರಿಲ್ ವರೆಗೆ ಕರ್ಕ ರಾಶಿಯವರು ಸ್ವಲ್ಪ ಕಷ್ಟ ಪಡಬೇಕಾಗುತ್ತದೆ. ಸತತ ಹೋರಾಟ ನಡೆಸಿದರೆ ಯಶಸ್ಸು ಸಾಧ್ಯ. ಹೊಸ ಆಸ್ತಿಗಳನ್ನು ಖರೀದಿಸಬಹುದು. ಆದರೆ ಬಹಳ ಎಚ್ಚರಿಕೆಯಿಂದ ಇರುವುದು ಉತ್ತಮ.  

5 /11

ಸಿಂಹ ರಾಶಿ : ಸಿಂಹ ರಾಶಿಯವರಿಗೆ 2024 ಅದ್ಭುತ ವರ್ಷ. ಒಳ್ಳೆಯ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಆದರೆ ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿರುವವರು ಜಾಗರೂಕರಾಗಿರಬೇಕು.

6 /11

ತುಲಾ ರಾಶಿ : ತುಲಾ ರಾಶಿಯವರಿಗೆ 2024ರಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗಿರುತ್ತದೆ. ಕುಲದೇವತೆಯ ಸಂಪೂರ್ಣ ಅನುಗ್ರಹ ನಿಮ್ಮ ಮೇಲೆ ಇರಲಿದೆ. ಆಸ್ತಿ ಮಾರಾಟದಿಂದ ಲಾಭವಾಗುವುದು. ಒಳ್ಳೆಯ ವಿಚಾರಗಳಿಗೆ ಹಣ ಖರ್ಚು ಮಾಡಬೇಕಾಗಬಹುದು.   

7 /11

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು 2024 ರಲ್ಲಿ ತಮ್ಮ ವೃತ್ತಿಜೀವನವನ್ನು ಗಮನಾರ್ಹವಾಗಿ ವಿಸ್ತರಿಸುವ ಅವಕಾಶವನ್ನು ಪಡೆಯಬಹುದು. ಒಂದರ ನಂತರ ಒಂದರಂತೆ ಪ್ರಯೋಜನಗಳನ್ನು ಪಡೆಯುತ್ತೀರಿ. ವ್ಯವಹಾರದಲ್ಲಿ ಉತ್ತಮ ಸಾಧನೆಗಳನ್ನು ಸಾಧಿಸಬಹುದು. ಜೀವನದಲ್ಲಿ ನೆಮ್ಮದಿ ಹೆಚ್ಚಲಿದೆ.

8 /11

ಧನು ರಾಶಿ : ನಿಮ್ಮ ಮೇಲೆ ಹಣದ ಸುರಿಮಳೆಯಾಗಲಿದೆ. ಈ ವರ್ಷ ಬುದ್ಧಿವಂತಿಕೆ ಅತ್ಯಗತ್ಯ. ಬುದ್ಧಿವಂತಿಕೆಯ ಸರಿಯಾದ ಬಳಕೆಯಿಂದ ನೀವು ಜಗತ್ತನೇ ಗೆಲ್ಲುವುದು ಸಾಧ್ಯ. 

9 /11

ಮಕರ ರಾಶಿ : ಈ ವರ್ಷ ಮಕರ ರಾಶಿಯವರಿಗೆ ಯೋಗದಾಯಕ ವರ್ಷ. ಮನೆ, ಕಾರು ಮುಂತಾದ ವಸ್ತುಗಳನ್ನು  ಖರೀದಿಸುವಿರಿ. ಶನಿಯ ದಯೆಯಿಂದ ಹಣಕಾಸಿನ ಸಮಸ್ಯೆ ದೂರವಾಗಲಿದೆ.  

10 /11

ಕುಂಭ ರಾಶಿ : ಫೆಬ್ರವರಿ 14, 2024 ನಿಮ್ಮ ಜೀವನದಲ್ಲಿ ಒಂದು ಮೈಲಿಗಲ್ಲು. ಸಮಾಜದ ಮೇಲೆ ನಿಮ್ಮ ಪ್ರಭಾವ ಹೆಚ್ಚಾಗಿರುತ್ತದೆ. ಮಂಗಳನು ನಿಮ್ಮ ಜೀವನವನ್ನೇ ಬೆಳಗುತ್ತಾನೆ. ನಿಮ್ಮ ಪ್ರೀತಿ ಜೀವನದ ಮೇಲೆ ಬುಧ ಸ್ವಲ್ಪ ಮಟ್ಟಿನ ಪ್ರಭಾವ ಬೀರಬಹುದು.   

11 /11

ಮೀನ ರಾಶಿ : 2024ರಲ್ಲಿ ನೀವು ಬಯಸುವ ಪ್ರೀತಿ ನಿಮ್ಮ ಜೀವನ ಪ್ರವೇಶಿಸುತ್ತದೆ. ಎಲ್ಲಾ ಸಂಬಂಧಗಳು ಹೊಂದಾಣಿಕೆಯಾಗುತ್ತವೆ. ಹಣಕಾಸಿನ ಸಮಸ್ಯೆ ಎದುರಾಗಬಹುದು. ವರ್ಷದ ಕೊನೆಯಲ್ಲಿ,  ಎಲ್ಲವೂ ಸರಿ ಹೋಗುತ್ತದೆ.