ಮೂರು ಗ್ರಹಗಳು ಸೇರಿ ನವಪಂಚಮ ರಾಜಯೋಗ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಧನರಾಶಿ !

Navapanchama Rajayoga  Effects :3 ಗ್ರಹಗಳಿಂದ ಹಲವು ವರ್ಷಗಳ ನಂತರ ಇಂತಹ ಶಕ್ತಿಶಾಲಿ ನವಪಂಚಮ ರಾಜಯೋಗ ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಚಕ್ರದ ಜನರಿಗೆ ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಮತ್ತು ಹಣವನ್ನು ನೀಡುತ್ತದೆ.
 

ಬೆಂಗಳೂರು : ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸ್ಥಾನಗಳು ಅನೇಕ ಶುಭ ಮತ್ತು ಅಶುಭ ಯೋಗಗಳನ್ನು ಸೃಷ್ಟಿಸುತ್ತವೆ. ಅದು  ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತಾರೆ. ನವಪಂಚಮ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ ನೋಡೋಣ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

 ಸೂರ್ಯ, ಮಂಗಳ ಮತ್ತು ಗುರು ಬಹಳ ವಿಶೇಷ ಸ್ಥಾನದಲ್ಲಿದ್ದು, ನವಪಂಚಮ ರಾಜಯೋಗವನ್ನು ರೂಪಿಸುತ್ತಿದ್ದಾರೆ. ಜ್ಯೋತಿಷಿಗಳ ಪ್ರಕಾರ ಈ 3 ಗ್ರಹಗಳಿಂದ ಹಲವು ವರ್ಷಗಳ ನಂತರ ಇಂತಹ ಶಕ್ತಿಶಾಲಿ ನವಪಂಚಮ ರಾಜಯೋಗ ಸೃಷ್ಟಿಯಾಗುತ್ತಿದೆ. ಇದು ಕೆಲವು ರಾಶಿಯ ಜನರಿಗೆ ಉದ್ಯೋಗ-ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಮತ್ತು ಹಣವನ್ನು ನೀಡುತ್ತದೆ. ನವಪಂಚಮ ರಾಜಯೋಗವು ಯಾವ ರಾಶಿಯವರಿಗೆ ಅದೃಷ್ಟವನ್ನು ನೀಡುತ್ತದೆ ನೋಡೋಣ. 

2 /5

ಮೇಷ ರಾಶಿ : ನವಪಂಚಮ ರಾಜಯೋಗವು ಮೇಷ ರಾಶಿಯವರಿಗೆ ಬಹಳ ಶುಭ ಫಲವನ್ನು ನೀಡಲಿದೆ. ವಿಶೇಷವಾಗಿ ವೃತ್ತಿಯ ವಿಷಯದಲ್ಲಿ, ಈ ರಾಶಿಯವರು ಬಲವಾದ ಪ್ರಯೋಜನಗಳನ್ನು ಪಡೆಯುತ್ತಾರೆ. ಉದ್ಯೋಗ ಅಥವಾ ವ್ಯವಹಾರ ಎರಡರಲ್ಲೂ ಪ್ರಗತಿ ಇರಲಿದೆ. ಆದಾಯವೂ ಹೆಚ್ಚಲಿದೆ. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಹಣಕಾಸಿನ  ಪ್ರಯೋಜನವಾಗಲಿದೆ. ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. 

3 /5

ಮಿಥುನ ರಾಶಿ : ಮಿಥುನ ರಾಶಿಯವರು ಈ ಹಿಂದೆ ಅನುಭವಿಸುರುವ ಎಲ್ಲಾ ಕಷ್ಟದಿಂದ ಮುಕ್ತಿ ಸಿಗಲಿದೆ. ವೃತ್ತಿಜೀವನದಲ್ಲಿ ಹೊಸ ಯುಗ ಪ್ರಾರಂಭವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಮೂಲಕ ಮನಸ್ಸಿಗೆ ಸಮಾಧಾನ ಸಿಗುವುದು. ಈ ರಾಶಿಯವರ ಕೌಟುಂಬಿಕ  ಜೀವನವೂ ಉತ್ತಮವಾಗಿರುತ್ತದೆ. 

4 /5

ಕರ್ಕಾಟಕ ರಾಶಿ: ಈ ನವಪಂಚಮ ರಾಜಯೋಗವು ಕರ್ಕಾಟಕ ರಾಶಿಯ ಜನರ ವ್ಯಕ್ತಿತ್ವದಲ್ಲಿ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ವರ್ಚಸ್ಸು ಉತ್ತುಂಗದಲ್ಲಿರಲಿದೆ. ಮನಸ್ಸಿನ ದೊಡ್ಡ ಆಸೆಗಳು ಈಡೇರುವ ಸಮಯ. ವೃತ್ತಿಯಲ್ಲಿ ವಿತ್ತೀಯ ಲಾಭ ಮತ್ತು ಪ್ರಗತಿಯನ್ನು ಪಡೆಯುವ ಬಲವಾದ ಅವಕಾಶಗಳಿವೆ. 

5 /5

ಕನ್ಯಾ: ಈ ನವಪಂಚಮ ರಾಜಯೋಗವು ಕನ್ಯಾ ರಾಶಿಯವರ ಆರ್ಥಿಕ ಸ್ಥಿತಿಯಲ್ಲಿ ದೊಡ್ಡ ಮಟ್ಟದ ಸುಧಾರಣೆಯನ್ನು ತರುತ್ತದೆ. ಹೊಸ ಆದಾಯದ ಮೂಲಗಳು ಹುಟ್ಟಿಕೊಳ್ಳುತ್ತವೆ. ಕುಟುಂಬದಲ್ಲಿ ಕೆಲವು ಶುಭ ಕಾರ್ಯಕ್ರಮಗಳು ನಡೆಯಬಹುದು.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)