ಹನ್ನೆರಡು ವರ್ಷಗಳ ಬಳಿಕ ಗುರು-ಸೂರ್ಯರಿಂದ 'ನವಪಂಚಮ ಯೋಗ' ನಿರ್ಮಾಣ, ಲಕ್ಷ್ಮಿ ಕೃಪೆಯಿಂದ ಈ ಜನರಿಗೆ ಲಗ್ಜರಿ ಲೈಫ್ ಪ್ರಾಪ್ತಿ!

Navpancham Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಧನು ರಾಶಿ ಗೋಚಾರದಿಂದ ನವಪಂಚಮ ರಾಜಯೋಗ ರೂಪುತೊಳ್ಳುತ್ತಿದೆ. ಇದು ಕೆಲ ರಾಶಿಗಳ ಜನರಿಗೆ ಅಪಾರ ಸಿರಿ-ಸಂಪತ್ತನ್ನು ಕರುಣಿಸಲಿದ್ದು, ಅವರ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. (Spiritual News In Kannada)
 

ಬೆಂಗಳೂರು: ಗ್ರಹಗಳ ರಾಜ ಸೂರ್ಯ ಒಂದು ನಿಶ್ಚಿತ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುತ್ತಾನೆ. ಇದರ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಜಾತಕದವರ ಮೇಲೆ ಉಂಟಾಗುತ್ತದೆ. ಗುರುವಿನ ರಾಶಿಯಾಗಿರುವ ಧನು ರಾಶಿಗೆ ಸೂರ್ಯ ಡಿಸೆಂಬರ್ 16 ರಂದು ಪ್ರವೇಶಿಸಿದ್ದಾನೆ. ಹೀಗಿರುವಾಗ ಸೂರ್ಯ ದೇವಗುರು ಬೃಹಸ್ಪತಿಯಿಂದ ತ್ರಿಕೋನ ಭಾವದಲ್ಲಿರಲಿದ್ದಾನೆ. ಇದರಿಂದ ಧನು ರಾಶಿಯಲ್ಲಿ ನವಪಂಚಮ ರಾಜಯೋಗ ರೂಪುತೊಳ್ಳುತ್ತಿದೆ. ಹನ್ನೆರಡು ವರ್ಷಗಳ ಸುದೀರ್ಘ ಅವಧಿಯ ಬಳಿಕ ಈ ಎರಡೂ ಗ್ರಹಗಳು ಹತ್ತಿರಕ್ಕೆ ಬಂದಿವೆ. ಈ ನವಪಂಚಮ ರಾಜಯೋಗ ರಚನೆಯಿಂದ ಕೆಲ ರಾಶಿಗಳ ಜನರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಇದರ ಜೊತೆಗೆ ಅರ್ಧಕ್ಕೆ ನಿಂತ ಕೆಲಸಗಳೂ ಪೂರ್ಣಗೊಳ್ಳಲಿವೆ. ಆದಾಯದ ಹೊಸ ಮಾರ್ಗಗಳ ತೆರವಿನಿಂದ ಆರ್ಥಿಕ ಸ್ಥಿತಿ ಸಾಕಷ್ಟು ಬಲವಾಗಲಿದೆ. ನವಪಂಚಮ ರಾಜಯೋಗ ನಿರ್ಮಾಣದಿಂದ ಯಾವ ರಾಶಿಗಳ ಜನರ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ ತಿಳಿದುಕೊಳ್ಳೋಣ ಬನ್ನಿ, (Spiritual News In Kannada)

 

ಇದನ್ನೂ ಓದಿ-ಹೊಸ ವರ್ಷದ ಮೊದಲ ನಾಲ್ಕು ತಿಂಗಳಲ್ಲಿ ಮೇಷ ರಾಶಿಯಲ್ಲಿ ಗುರುವಿನ ಸಂಚಾರ, ಈ ಜನರ ಧನ-ಸಂಪತ್ತಿನಲ್ಲಿ ಅಪಾರ ವೃದ್ದಿ!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Navpancham Rajyog 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯನ ಧನು ರಾಶಿ ಗೋಚಾರದಿಂದ ನವಪಂಚಮ ರಾಜಯೋಗ ರೂಪುತೊಳ್ಳುತ್ತಿದೆ. ಇದು ಕೆಲ ರಾಶಿಗಳ ಜನರಿಗೆ ಅಪಾರ ಸಿರಿ-ಸಂಪತ್ತನ್ನು ಕರುಣಿಸಲಿದ್ದು, ಅವರ ಪಾಲಿಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. (Spiritual News In Kannada)

2 /5

ಮೇಷ ರಾಶಿ: ನಿಮ್ಮ ಗೋಚರ ಜಾತಕದ ನವಮ ಭಾವದಲ್ಲಿ ಸೂರ್ಯನ ಈ ಸಂಕ್ರಮಣ ನೆರವೇರಿದೆ. ಇದಲ್ಲದೆ ಗುರು ಕೂಡ ನಿಮ್ಮ ಜಾತಕದ ಪ್ರಥಮ ಭಾವದಲ್ಲಿ ವಿರಾಜಮಾನನಾಗಿದ್ದಾನೆ. ಹೀಗಾಗಿ ನವಪಂಚಮ ರಾಜಯೋಗದಿಂದ ಈ ರಾಶಿಯ ಜಾತಕದವರ ಮೇಲೆ ಗುರುವಿನ ಜೊತೆಗೆ ಸೂರ್ಯನ ಸಕಾರಾತ್ಮಕ ಫಲಿತಾಂಶ ಬೀರಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಧಾರ್ಮಿಕ ಕಾಯಕ್ರಮಗಳಲ್ಲಿ ಮುಂಚೂಣಿಯಲ್ಲಿದ್ದು ಪಾಲ್ಗೊಳ್ಳುವಿರಿ. ವೃತ್ತಿಗೆ ಸಂಬಂಧಿಸಿದಂತೆ ನಿಮಗಿದ್ದ ಕಂಫ್ಯೂಶನ್ ದೂರಾಗಲಿದೆ. ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶ ನಿಮಗೆ ಸಿಗಲಿದೆ. ವ್ಯಾಪಾರದಲ್ಲಿ ಹಲವು ಪಟ್ಟು ಆರ್ಥಿಕ ಫಲ ಪ್ರಾಪ್ತಿಯಾಗಲಿದೆ. ಕುಟುಂಬ ಸದಸ್ಯರ ಬೆಂಬಲದಿಂದ ನೀವು ಪ್ರತಿಯೊಂದು ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. 

3 /5

ಸಿಂಹ ರಾಶಿ: ನವಪಂಚಮ ರಾಜಯೋಗ ನಿಮ್ಮ ಗೋಚರ ಜಾತಕದ ಪಂಚಮ ಭಾವದಲ್ಲಿ ರಚನೆಯಾಗುತ್ತಿದೆ. ಇದರಿಂದ ಈ ಜಾತಕದವರ ಶಿಕ್ಷಣ, ಸಂತಾನ, ಪ್ರೇಮ ಸಂಬಂಧ ಕ್ಷೇತ್ರಗಳ ಮೇಲೆ ಶುಭ ಪರಿಣಾಮಗಳು ಉಂಟಾಗಲಿವೆ. ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ಜನರಿಗೆ ಇದರಿಂದ ಭಾರಿ ಲಾಭ ಸಿಗಲಿದೆ. ನಿಮ್ಮ ಪರಿಶ್ರಮಕ್ಕೆ ಸಂಪೂರ್ಣ ಫಲ ಪ್ರಾಪ್ತಿಯಾಗಲಿದೆ. ಸಾಧನೆಗಳಿಂದ ನೀವು ಗರ್ವವನ್ನು ಅನುಭವಿಸುವಿರಿ. ಇದರ ಜೊತೆಗೆ ಆರ್ಥಿಕ ಶ್ತಿತಿ ಕೂಡ ಬಲವಾಗಲಿದ್ದು, ಕುಟುಂಬ ಸದಸ್ಯರ ಜೊತೆಗೆ ನೀವು ಉತ್ತಮ ಕಾಲ ಕಳೆಯುವಿರಿ. 

4 /5

ವೃಶ್ಚಿಕ ರಾಶಿ: ನವಪಂಚಮ ಯೋಗ ನಿಮ್ಮ ಪಾಲಿಗೆ ವರದಾನ ಸಾಬೀತಾಗಲಿದೆ. ಕುಟುಂಬ ಸದಸ್ಯ್ರ ಜೊತೆಗೆ ನೀವು ಉತ್ತಮ ಕಾಲವನ್ನು ಕಳೆಯುವಿರಿ ಮತ್ತು ಅವರ ಜೊತೆಗಿನ ನಿಮ್ಮ ಸಂಬಂಧ ಸಾಕಷ್ಟು ಬಲವಾಗಲಿದೆ. ಕೆಲಸ ಕಾರ್ಯಗಳ ನಿಮಿತ್ತ ಯಾತ್ರೆ ಸಂಭವಿಸುವ ಸಾಧ್ಯತೆ ಇದ್ದು, ಇದರಲ್ಲಿ ನಿಮಗೆ ನಿಮ್ಮ ಬಾಲಸಂಗಾತಿಯ ಬೆಂಬಲ ಪ್ರಾಪ್ತಿಯಾಗಲಿದೆ. ನೌಕರಿಯ ಸಿದ್ಧತೆಯಲ್ಲಿರುವವರಿಗೆ ನೌಕರಿ ಭಾಗ್ಯ ಪ್ರಾಪ್ತಿಯಾಗಬಹುದು. ನೌಕರ ವರ್ಗದ ಜನರಿಗೆ ಅವರ ಕೆಲಸಕ್ಕೆ ಪ್ರಶಂಸೆ ದೊರೆಯಲಿದ್ದು, ಪದೋನ್ನತಿಯ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ. ವ್ಯಾಪಾರಿಗಳಿಗೂ ಕೂಡ ವ್ಯಾಪಾರದಲ್ಲಿ ಉತ್ತಮ ಲಾಭ ಸಿಗಲಿದೆ. 

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)