Mysuru Dasara 2022: ಮೈಸೂರು ಅರಮನೆಯಲ್ಲಿ ಆಯುಧ ಪೂಜೆ, ಖಾಸಗಿ ದರ್ಬಾರ್ ಸಂಭ್ರಮ

Mysuru Dasara 2022 : ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು. 

Mysuru Dasara 2022: ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು. ಪ್ರಾತಃಕಾಲ 5.30 ರಿಂದ ಆರಂಭಗೊಂಡ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ‌ಗಂಟೆ ವರೆಗೂ ನೆರವೇರಿತು. ಅರಮನೆಯ ಆವರಣದಲ್ಲಿ ಆಯುಧ ಪೂಜೆ ನಡೆಯಿತು. 

1 /6

ಮೈಸೂರು ಅರಮನೆಯಲ್ಲಿ ಇಂದು ರಾಜ ಪರಂಪರೆ ಸಂಪ್ರದಾಯದಂತೆ ಆಯುಧ ಪೂಜೆ ನೆರವೇರಿಸಲಾಯಿತು.

2 /6

ಪ್ರಾತಃಕಾಲ 5.30 ರಿಂದ ಆರಂಭಗೊಂಡ ಪೂಜಾ ಕೈಂಕರ್ಯಗಳು, ಮಧ್ಯಾಹ್ನ 1 ‌ಗಂಟೆ ವರೆಗೂ ನೆರವೇರಿತು. ಅರಮನೆಯ ಆವರಣದಲ್ಲಿ ಆಯುಧ ಪೂಜೆ ನಡೆಯಿತು. 

3 /6

ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಬಂದ ಆಯುಧಗಳಿಗೆ ಪೂಜೆ ಮಾಡಲಾಯಿತು. ಮೊದಲು ಸಾಲಿಗ್ರಾಮ ಪೂಜೆ, ಪಟ್ಟದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳಿಗೆ ಪೂಜೆ ಮಾಡಿದರು.

4 /6

ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಶುಚಿ ಮಾಡಿದರು. ಬಳಿಕ ಕೋಡಿ ಸೋಮೇಶ್ವರ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. 

5 /6

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಆಯುಧ ಪೂಜೆ ಮತ್ತು ಖಾಸಗಿ ದರ್ಬಾರ್‌ ನಡೆಸಿದರು. ರಾಜಪುರೋಹಿತರ ಮಾರ್ಗದರ್ಶನದಂತೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪೂಜೆ ಸಲ್ಲಿಸಿದರು.  

6 /6

ಪಟ್ಟದ ಆನೆ, ಫಟ್ಟದ ಕುದುರೆ, ಪಟ್ಟದ ಒಂಟೆ, ಪಟ್ಟದ ಹಸುಗಳು, ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆ ಸಲ್ಲಿಸಿದರು.