Most Poisonous Snake: ಭಾರತದಲ್ಲಿದೆ ವಿಶ್ವದ ಅತ್ಯಂತ ಅಪಾಯಕಾರಿ ಹಾವು, ಕುತ್ತಿಗೆ ಕತ್ತರಿಸಿದರೂ, ಹಾರಿ ಜೀವ ತೆಗೆಯುತ್ತದೆ

King Cobra Snake: ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನರು ಹಾವುಗಳ  (Snakes) ಕಡಿತದಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿಯೂ ಹಾವು ಕಚ್ಚಿ  (Snake Bite) ಜನರು ಸಾಯುವುದು ಸಾಮಾನ್ಯ. 

King Cobra Snake: ಪ್ರತಿ ವರ್ಷ ವಿಶ್ವಾದ್ಯಂತ ಲಕ್ಷಾಂತರ ಜನರು ಹಾವುಗಳ  (Snakes) ಕಡಿತದಿಂದ ಸಾವನ್ನಪ್ಪುತ್ತಾರೆ. ಭಾರತದಲ್ಲಿಯೂ ಹಾವು ಕಚ್ಚಿ  (Snake Bite) ಜನರು ಸಾಯುವುದು ಸಾಮಾನ್ಯ. ಇಂದು ನಾವು ನಿಮಗೆ ಮಾಹಿತಿ ನೀಡಲು ಹೊರಟಿರುವ ಭಾರತದಲ್ಲಿ ಕಂಡುಬರುವ ಹಾವು (King Cobra Snake Facts), ಅದರ ಕುತ್ತಿಗೆ ಕತ್ತರಿಸಿದ ಬಳಿಕವೂ ಕೂಡ ಅದು ಗಾಳಿಯಲ್ಲಿ ಹಾರಿ ಜನರ ಪ್ರಾಣ ತೆಗೆಯುತ್ತದೆ.

 

ಇದನ್ನೂ ಓದಿ-ಅಡುಗೆ ಮನೆಗೆ ನುಗ್ಗಿದ ದೈತ್ಯ ನಾಗರಹಾವು, ಬೆಚ್ಚಿ ಬೀಳಿಸುವ King Cobra Ka Video ಇದು

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ಎಲ್ಲಕ್ಕಿಂತ ಅಪಾಯಕಾರಿ ಕಿಂಗ್ ಕೋಬ್ರಾ ಹಾವು - ಜಗತ್ತಿನಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವುಗಳಲ್ಲಿ ಕಿಂಗ್ ಕೋಬ್ರಾ ಹಾವು ಕೂಡ ಒಂದು.ಕಿಂಗ್ ಕೋಬ್ರಾ ಭಾರತದಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವು. ಇದರ ಕಚ್ಚುವಿಕೆಯ ಅರ್ಧ ಗಂಟೆಯೊಳಗೆ ಒಬ್ಬ ವ್ಯಕ್ತಿಯು ಸಾವನ್ನಪ್ಪುತ್ತಾನೆ. ಕಿಂಗ್ ಕೋಬ್ರಾವನ್ನು 'ನಾಗ್' ಎಂದೂ ಕರೆಯುತ್ತಾರೆ. ಭಾರತದಲ್ಲಿ, ಹಾವು ಕಡಿತದಿಂದ ಗರಿಷ್ಠ ಸಂಖ್ಯೆಯ ಸಾವುಗಳು ನಾಗರಹಾವಿನ ಕಡಿತದಿಂದ ಸಂಭವಿಸುತ್ತವೆ.

2 /6

2. ಕೋಬ್ರಾ ಕಡಿತದಿಂದ ವ್ಯಕ್ತಿಗೆ ಪಾರ್ಶ್ವವಾಯು ಸಂಭವಿಸುತ್ತದೆ - ಕಾರ್ಡಿಯೋಟಾಕ್ಸಿನ್ ಮತ್ತು ಸಿನೊಪ್ಟಿಕ್ ನ್ಯೂರೋಟಾಕ್ಸಿನ್‌ (Cardiotoxin and Synoptic Neurotoxins) ವಿಷಗಳು  ಕಿಂಗ್ ಕೋಬ್ರಾದಲ್ಲಿ ಕಂಡುಬರುತ್ತವೆ. ನಾಗರ ಹಾವು ಕಚ್ಚಿದ ತಕ್ಷಣ ದೇಹದ ನರವ್ಯೂಹವು ಕೆಲಸ ಮಾಡುವುದನ್ನು ನಿಲ್ಲಿಸುತ್ತದೆ. ಇದರ ನಂತರ ವ್ಯಕ್ತಿಯು ಪಾರ್ಶ್ವವಾಯುವಿಗೆ ಒಳಗಾಗುತ್ತಾನೆ. ಕಿಂಗ್ ಕೋಬ್ರಾ ಹಾವಿನ ವಿಷ ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ ಅದರಿಂದ ಕಣ್ಣುಗಳು ದೃಷ್ಟಿಯನ್ನೇ ಕಳೆದುಕೊಳ್ಳುತ್ತವೆ.

3 /6

3. ಕೋಬ್ರಾ ಹಾವಿನಲ್ಲಿ 300 ಪ್ರಜಾತಿಗಳಿವೆ - ನಾಗರ ಹಾವಿನ ಉದ್ದ ಒಂದರಿಂದ ಒಂದೂವರೆ ಮೀಟರ್ ವರೆಗೆ ಇರುತ್ತದೆ. ನಾಗರ ಪ್ರಜಾತಿಯಲ್ಲಿ 300 ಬಗೆಯ ಹಾವುಗಳಿವೆ. ಈ ಹಾವುಗಳ ವಿಷವು ಮಾನವ ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ನಾಗರಹಾವು ವ್ಯಕ್ತಿಯನ್ನು ಕಚ್ಚಿದ ತಕ್ಷಣ, ಮನುಷ್ಯನ ಶ್ವಾಸಕೋಶ ಮತ್ತು ಹೃದಯವು ಕೆಲಸ ಮಾಡುವುದನ್ನು ನಿಲ್ಲಿಸುತ್ತವೆ. ಇದರ ನಂತರ ವ್ಯಕ್ತಿ ಸಾಯುತ್ತಾನೆ.

4 /6

4. ಕುತ್ತಿಗೆ ಕತ್ತರಿಸಿದ ಬಳಿಕವೂ ಗಾಳಿಯಲ್ಲಿ ಹಾರಿ ಪ್ರಾಣ ತೆಗೆಯುತ್ತದೆ - ನಾಗರ ಹಾವಿನ ಕಟ್ಟು ಕತ್ತರಿಸಿದ ಬಳಿಕವೂ ಅದು ಮನುಷ್ಯನ ಪ್ರಾಣ ತೆಗೆಯುತ್ತದೆ ಎಂಬ ಸಂಗತಿಯನ್ನು ಕೇಳಿ ನೀವು ಆಶ್ಚರ್ಯಕ್ಕೆ ಒಳಗಾಗುವಿರಿ. ಕೆಲ ತಿಂಗಳ ಹಿಂದೆ ಚೀನಾದಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿತ್ತು. ಬಾಣಸಿಗನೊಬ್ಬ ನಾಗರ ಹಾವಿನ ಕತ್ತು ಕೊಯ್ದು ಸೂಪ್ ಮಾಡಲು ಹೊರಟಿದ್ದ. ಆ  ವೇಳೆ ನಾಗರ ಹಾವಿನ ಕುತ್ತಿಗೆ ಹಾರಿ ಬಾಣಸಿಗನಿಗೆ ಕಚ್ಚಿದ್ದು, ಬಳಿಕ ಆತ ಪ್ರಾಣ ಕಳೆದುಕೊಂಡಿದ್ದಾನೆ. ಸತ್ತ ನಾಗರ ಹಾವಿನ ಕಡಿತದಿಂದ ಮನುಷ್ಯ ತಪ್ಪಿಸಿಕೊಳ್ಳುವುದು ಅಸಾಧ್ಯವೆಂದು ಪರಿಗಣಿಸಲಾಗಿದೆ.

5 /6

5. ಹಾವಿನ ಕಡಿತ ತುಂಬಾ ಅಪಾಯಕಾರಿಯಾಗಿದೆ - ಹಾವು ಕಡಿತದಲ್ಲಿ ಒಟ್ಟು ಎರಡು ವಿಧಗಳಿವೆ. ಒಂದು ಡ್ರೈ ಬೈಟ್ (Dry Bite) ಮತ್ತು ಇನ್ನೊಂದು ವಿಷಕಾರಿ ಬೈಟ್  (Venomous Snake Bite). ವಿಷಪೂರಿತ ಹಾವುಗಳು ಕಚ್ಚುವಿಕೆಯೊಂದಿಗೆ ಮಾನವ ದೇಹದಲ್ಲಿ ವಿಷವನ್ನು ಹೊರಹಾಕುತ್ತವೆ. ಆದರೆ ಒಣ ಕಚ್ಚುವಿಕೆಯೊಂದಿಗಿನ ಹಾವುಗಳು ಇದನ್ನು ಮಾಡುವುದಿಲ್ಲ. ಯಾವುದೇ ರೀತಿಯ ಹಾವು ಕಡಿತಕ್ಕೆ ತಕ್ಷಣ ಚಿಕಿತ್ಸೆ ನೀಡಬೇಕು ಎಂದು ವೈದ್ಯಕೀಯ ವಿಜ್ಞಾನ ಹೇಳುತ್ತದೆ.  

6 /6

6. ಅಮೇರಿಕಾದಲ್ಲಿ ಅತಿ ಹೆಚ್ಚು ಪ್ರಕರಣಗಳು ವರದಿಯಾಗುತ್ತವೆ - ಭಾರತವನ್ನು 'ಹಾವಾಡಿಗರ ದೇಶ' ಎಂದು ಕರೆಯಲಾಗಿದ್ದರೂ, ಹಾವು ಕಡಿತದ ಪ್ರಮಾಣವು ಅಮೆರಿಕದಲ್ಲಿ ವಿಶ್ವದಲ್ಲೇ ಹೆಚ್ಚು. ಆದರೆ, ಅಮೆರಿಕಾದಲ್ಲಿ ಉತ್ತಮ ಚಿಕಿತ್ಸೆಯಿಂದಾಗಿ, ಕೆಲವೇ ಜನರು ಸಾಯುತ್ತಾರೆ. WHO ಪ್ರಕಾರ, ವಿಶ್ವಾದ್ಯಂತ ಪ್ರತಿ ವರ್ಷ 5 ಮಿಲಿಯನ್ ಹಾವು ಕಡಿತದ ಪ್ರಕರಣಗಳು ವರದಿಯಾಗುತ್ತಿದ್ದು, ಇದರಲ್ಲಿ ಸುಮಾರು 1 ಲಕ್ಷ ಜನರು ಸಾಯುತ್ತಾರೆ ಎನ್ನಲಾಗಿದೆ.