Morning Vastu Tips: ಬೆಳಿಗ್ಗೆ ಎದ್ದು ಈ ಕೆಲಸಗಳನ್ನು ಮಾಡುವುದರಿಂದ ಬೆಂಬಿಡದೆ ಕಾಡುತ್ತೆ ದಾರಿದ್ರ್ಯ

Morning Vastu Tips: ಸಾಮಾನ್ಯವಾಗಿ, ಕೆಲವು ಮನೆಗಳಲ್ಲಿ ರಾತ್ರಿ ಊಟವಾದ ನಂತರ ಪಾತ್ರೆಯನ್ನು ಸ್ವಚ್ಛಗೊಳಿಸದೆ ಹಾಗೆಯೇ ಬಿಡುತ್ತಾರೆ. ಮಾತ್ರವಲ್ಲ ಕೆಲವರು ಡೈನಿಂಗ್ ಟೇಬಲ್ ಅನ್ನು ಕೂಡ ಹಾಗೆ ಬಿಟ್ಟಿರುತ್ತಾರೆ. ಆ ಕೆಲಸವನ್ನು ಬೆಳಿಗ್ಗೆ ಮಾಡಿದರಾಯಿತು ಎಂಬ ಸೋಮಾರಿತನ ಕೆಲವರದ್ದು. ಆದರೆ, ವಾಸ್ತು ಪ್ರಕಾರ ನಿಮ್ಮ ಈ ಸ್ವಭಾವದಿಂದ ಬಡತನ ಬರಬಹುದು ಎಂದು ಹೇಳಲಾಗುತ್ತದೆ.  

Morning Vastu Tips: ಬೆಳಿಗ್ಗೆ ಚೆನ್ನಾಗಿ ಆರಂಭವಾದರೆ ಇಡೀ ದಿನವು ಆಹ್ಲಾದಕರ ಮತ್ತು ಯಶಸ್ವಿಯಾಗುತ್ತದೆ. ಅದೇ ಬೆಳಿಗ್ಗೆ ಏನಾದರು ಒಂದು ಅಶುಭವಾದರೆ ಇಡೀ ದಿನ ಒಂದಿಲ್ಲೊಂದು ತೊಂದರೆಗಳು ಕಾಡುತ್ತವೆ. ಒಂದಲ್ಲಾ ಒಂದು ಸಮಯದಲ್ಲಿ ಪ್ರತಿಯೊಬ್ಬರಿಗೂ ಇಂತಹ ಅನುಭವ ಆಗಿಯೇ ಇರುತ್ತದೆ. ಇದಕ್ಕೆ ನಮ್ಮ ಜೀವನಶೈಲಿಯೂ ಕೂಡ ಒಂದು ಪ್ರಮುಖ ಕಾರಣವಾಗಿರಬಹುದು. ಸಾಮಾನ್ಯವಾಗಿ, ಕೆಲವು ಮನೆಗಳಲ್ಲಿ ರಾತ್ರಿ ಊಟವಾದ ನಂತರ ಪಾತ್ರೆಯನ್ನು ಸ್ವಚ್ಛಗೊಳಿಸದೆ ಹಾಗೆಯೇ ಬಿಡುತ್ತಾರೆ. ಮಾತ್ರವಲ್ಲ ಕೆಲವರು ಡೈನಿಂಗ್ ಟೇಬಲ್ ಅನ್ನು ಕೂಡ ಹಾಗೆ ಬಿಟ್ಟಿರುತ್ತಾರೆ. ಆ ಕೆಲಸವನ್ನು ಬೆಳಿಗ್ಗೆ ಮಾಡಿದರಾಯಿತು ಎಂಬ ಸೋಮಾರಿತನ ಕೆಲವರದ್ದು. ಆದರೆ, ವಾಸ್ತು ಪ್ರಕಾರ ನಿಮ್ಮ ಈ ಸ್ವಭಾವದಿಂದ ಬಡತನ ಬರಬಹುದು ಎಂದು ಹೇಳಲಾಗುತ್ತದೆ.  ವಾಸ್ತು ಶಾಸ್ತ್ರದ ಪ್ರಕಾರ, ಬೆಳಿಗ್ಗೆ ಎದ್ದ ಕೂಡಲೇ ಕೆಲವು ಕೆಲಸಗಳನ್ನು ಮಾಡುವುದನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ, ಬೆಳಿಗ್ಗೆ ಎದ್ದು ಈ ಕೆಲಸಗಳನ್ನು ಮಾಡುವುದರಿಂದ ಅಂತಹ ಮನೆಯಲ್ಲಿ ದಾರಿದ್ರ್ಯ ಕಾಡುತ್ತದೆ ಎಂದು ಹೇಳಲಾಗುವುದು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
  

1 /5

ಕನ್ನಡಿ ನೋಡುವುದು: ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಕನ್ನಡಿ ನೋಡುವ ಅಭ್ಯಾಸ ಇರುತ್ತದೆ. ಆದರೆ ಇದನ್ನು ಮಾಡಬಾರದು. ಇದು ನಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ. ಬೆಳಿಗ್ಗೆ ಎದ್ದ ತಕ್ಷಣ ನಿಮ್ಮ ಅಂಗೈಯನ್ನು ನೋಡುವುದು ಉತ್ತಮ. ನಂತರ ನಿಮ್ಮ ಮುಖ ಮತ್ತು ಕೈಗಳನ್ನು ತೊಳೆದ ನಂತರ, ಕನ್ನಡಿ ನೋಡಿ. 

2 /5

ಕೊಳಕು ಪಾತ್ರೆಗಳು: ಬೆಳಿಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ನೋಡುವುದು ತುಂಬಾ ಅಶುಭ. ಆದ್ದರಿಂದ, ಯಾವಾಗಲೂ ರಾತ್ರಿಯಲ್ಲಿ ಅಡುಗೆಮನೆಯನ್ನು ಸ್ವಚ್ಛಗೊಳಿಸಿ ನಂತರ ಮಲಗಿ. ಬೆಳಿಗ್ಗೆ ಎದ್ದ ತಕ್ಷಣ ಕೊಳಕು ಪಾತ್ರೆಗಳನ್ನು ನೋಡುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ.

3 /5

ಕೆಟ್ಟ ಗಡಿಯಾರ: ಬೆಳಿಗ್ಗೆ ಎದ್ದ ತಕ್ಷಣ ಕೆಲಸ ಮಾಡದ ಅಂದರೆ ಕೆಟ್ಟಿರುವ ಗಡಿಯಾರವನ್ನು ನೋಡುವುದು ಒಳ್ಳೆಯದಲ್ಲ. ವಾಸ್ತು ಶಾಸ್ತ್ರದ ಪ್ರಕಾರ, ಕೆಟ್ಟಿರುವ ಗಡಿಯಾರವನ್ನು ಮನೆಯಲ್ಲಿ ಇಡುವುದರಿಂದ ವಾಸ್ತು ದೋಷ ಉಂಟಾಗುತ್ತದೆ. ಅಂತಹ ಪರಿಸ್ಥಿತಿಯನ್ನು ತಪ್ಪಿಸಿ. 

4 /5

ಹಿಂಸಾತ್ಮಕ ಪ್ರಾಣಿಗಳ ಚಿತ್ರ: ಹಿಂಸಾತ್ಮಕ ಪ್ರಾಣಿಗಳ ಚಿತ್ರ ಅಥವಾ ವಿಗ್ರಹವನ್ನು ಮನೆಯ ಇಡಬಾರದು. ವಾಸ್ತು ಶಾಸ್ತ್ರದ ಪ್ರಕಾರ, ಹಿಂಸಾತ್ಮಕ ಪ್ರಾಣಿಗಳ ಚಿತ್ರಗಳು ಮನೆಯಲ್ಲಿ ಗೊಂದಲ ಮತ್ತು ಅಪಶ್ರುತಿಯನ್ನು ಹೆಚ್ಚಿಸುತ್ತವೆ. ಅದೇ ಸಮಯದಲ್ಲಿ, ಮುಂಜಾನೆ ಎದ್ದ ತಕ್ಷಣ ಅವುಗಳನ್ನು ನೋಡುವುದು ನಿಮ್ಮ ಇಡೀ ದಿನವನ್ನು ಹಾಳುಮಾಡುತ್ತದೆ.

5 /5

ಡಸ್ಟ್ ಬಿನ್: ಬೆಳಿಗ್ಗೆ ಎದ್ದ ತಕ್ಷಣ ಡಸ್ಟ್ ಬಿನ್ ಎಂದರೆ ಕಸದ ರಾಶಿಯನ್ನು ನೋಡುವುದು ಕೂಡ ಅಶುಭ. ಹಾಗಾಗಿ, ಡಸ್ಟ್ ಬಿನ್ ಅನ್ನು ಎದ್ದ ಕೂಡಲೇ ಕಣ್ಣಿಗೆ ಕಾಣುವ ರೀತಿ ಇಡಬೇಡಿ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ