ಇಂಗ್ಲೆಂಡ್‌ನಲ್ಲಿ ಹೊಸ ವೈರಸ್ ಪತ್ತೆ: ರೋಗಲಕ್ಷಣ, ಚಿಕಿತ್ಸೆ, ಇತರ ವಿವರ ತಿಳಿಯಿರಿ

2018ರಲ್ಲಿ ಇಂಗ್ಲೆಂಡಿನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವು ವರದಿಯಾಗಿತ್ತು. ಆ ಸಮಯದಿಂದ ಇಲ್ಲಿವರೆಗೆ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ನವದೆಹಲಿ: ನೈಜೀರಿಯಾಕ್ಕೆ ತೆರಳಿದ್ದ ವ್ಯಕ್ತಿಯೊಬ್ಬನಿಗೆ ಮಂಕಿಪಾಕ್ಸ್ ಅಥವಾ ಮಂಗನ ಕಾಯಿಲೆ ವೈರಸ್ ಸೋಂಕು ತಗುಲಿದೆ. ಈ ಸುದ್ದಿಯನ್ನು ಇಂಗ್ಲೆಂಡ್‍ನ ಹೆಲ್ತ್ ಸೆಕ್ಯುರಿಟಿ ಏಜೆನ್ಸಿ (UKHSA) ದೃಢಪಡಿಸಿದೆ. ಮಂಕಿಪಾಕ್ಸ್ ಅಪರೂಪದ ವೈರಲ್ ಸೋಂಕಾಗಿದ್ದು, ಇದು ಸುಲಭವಾಗಿ ಹರಡುವುದಿಲ್ಲ ಎಂದು ಉಲ್ಲೇಖಿಸಿದೆ.

UKHSA ಪ್ರಕಾರ ಮಂಕಿಪಾಕ್ಸ್ ವೈರಸ್ ಸಾಮಾನ್ಯವಾಗಿ ಸೌಮ್ಯವಾದ ‘ಸ್ವಯಂ-ಸೀಮಿತ’ ಕಾಯಿಲೆಯಾಗಿದೆ. ಇದು ಕೆಲವು ಸಂದರ್ಭಗಳಲ್ಲಿ ಮಾತ್ರ ತೀವ್ರ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೆಚ್ಚಿನ ಸೋಂಕಿತ ರೋಗಿಗಳು ಅಲ್ಪಾವಧಿಯಲ್ಲಿ ಚೇತರಿಸಿಕೊಳ್ಳುತ್ತಾರಂತೆ. 2018ರಲ್ಲಿ ಇಂಗ್ಲೆಂಡಿನಲ್ಲಿ ಮೊದಲ ಮಂಕಿಪಾಕ್ಸ್ ಪ್ರಕರಣವು ವರದಿಯಾಗಿತ್ತು. ಆ ಸಮಯದಿಂದ ಇಲ್ಲಿವರೆಗೆ ಕೇವಲ ಬೆರಳೆಣಿಕೆಯಷ್ಟು ಪ್ರಕರಣಗಳನ್ನು ಆರೋಗ್ಯ ಅಧಿಕಾರಿಗಳು ದೃಢಪಡಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

1 /4

ಮಂಕಿಪಾಕ್ಸ್‌ನ ಲಕ್ಷಣಗಳು ಸಿಡುಬಿನಂತೆಯೇ ಇರುತ್ತವೆ. ಇದರಿಂದ ಜ್ವರ, ಸ್ನಾಯು ನೋವುಗಳು, ಊದಿಕೊಂಡ ದುಗ್ಧರಸ ಗ್ರಂಥಿಗಳು, ತಲೆನೋವು, ಶೀತ ಮತ್ತು ಬಳಲಿಕೆಗೆ ಕಾರಣವಾಗಬಹುದು. ಸಿಡುಬಿಗಿಂತ ಕಡಿಮೆ ತೀವ್ರತೆಯಿರುವಾಗ ಮಂಕಿಪಾಕ್ಸ್ ದೇಹದಾದ್ಯಂತ ದದ್ದುಗಳನ್ನು ಉಂಟುಮಾಡಬಹುದು. ಈ ದದ್ದುಗಳು ಹುರುಕುಗಳಾಗಿ ರೂಪಾಂತರಗೊಳ್ಳುವ ಮೊದಲು ಬೇರೆ ಬೇರೆ ಹಂತಗಳಲ್ಲಿ ವಿವಿಧ ಬದಲಾವಣೆಗಳಿಗೆ ಒಳಗಾಗುತ್ತವೆ.

2 /4

ಸೋಂಕಿತ ವ್ಯಕ್ತಿಯೊಂದಿಗೆ ನಿಕಟ ಸಂಪರ್ಕದಲ್ಲಿರುವವರು ವೈರಸ್‌ಗೆ ತುತ್ತಾಗಬಹುದು. ಇದು ಚರ್ಮ, ಉಸಿರಾಟದ ಪ್ರದೇಶ ಅಥವಾ ಕಣ್ಣು, ಮೂಗು ಮತ್ತು ಬಾಯಿಯ ಮೂಲಕ ಪ್ರವೇಶಿಸಬಹುದು. ಇದು ಸೋಂಕಿತ ಪ್ರಾಣಿಗಳ ಸಂಪರ್ಕಕ್ಕೆ ಬರುವ ಮೂಲಕವೂ ಹರಡಬಹುದು. ಇವುಗಳು ವೈರಸ್ನ ವಾಹಕಗಳಾಗಿರಬಹುದು ಅಥವಾ ವೈರಸ್-ಕಲುಷಿತ ವಸ್ತುಗಳ ಮೂಲಕವೂ ಹರಡುತ್ತದೆ. ಹೆಚ್ಚಿನ ಮಂಕಿಪಾಕ್ಸ್ ಪ್ರಕರಣಗಳು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ ಕಂಡುಬಂದಿವೆ. ಆಫ್ರಿಕಾದ ಹೊರಗಿನವರು ಹೆಚ್ಚಾಗಿ ಅಂತಾರಾಷ್ಟ್ರೀಯ ಪ್ರಯಾಣ ಅಥವಾ ಆಮದು ಮಾಡಿಕೊಂಡ ಪ್ರಾಣಿಗಳಿಂದಾಗಿ ವೈರಸ್‍ಗೆ ತುತ್ತಾಗಿದ್ದಾರೆ.

3 /4

ಮಂಗನ ಕಾಯಿಲೆಗೆ ಸದ್ಯಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಆದರೆ ಈ ಕಾಯಿಲೆಯನ್ನು ತಡೆಗಟ್ಟುವಲ್ಲಿ ಸಿಡುಬು ಲಸಿಕೆಯು ಶೇ.85ರಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

4 /4

ಮಂಕಿಪಾಕ್ಸ್ ಅಪರೂಪದ ಕಾಯಿಲೆಯಾಗಿದ್ದು, ಇದು ಸಿಡುಬು-ಉಂಟುಮಾಡುವ ವೆರಿಯೊಲಾ ವೈರಸ್ ಅನ್ನು ಒಳಗೊಂಡಿರುವ ಅದೇ ಆರ್ಥೋಪಾಕ್ಸ್ವೈರಸ್ ಕುಲಕ್ಕೆ ಸೇರಿದ ವೈರಸ್‍ನಿಂದ ಉಂಟಾಗುತ್ತದೆ. 1958ರಲ್ಲಿ ಮೊದಲ ಬಾರಿಗೆ ಪತ್ತೆಯಾದ ಈ ರೋಗವು ‘ಜೂನೋಸಿಸ್' ಅಂದರೆ ಇದು ಸೋಂಕಿತ ಪ್ರಾಣಿಗಳಿಂದ ಮನುಷ್ಯರಿಗೆ ಹರಡುತ್ತದೆ. ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ಪ್ರಕಾರ, ಸಂಶೋಧನೆಗಾಗಿ ಇರಿಸಲಾಗಿದ್ದ ಕೋತಿಗಳಲ್ಲಿ ಮಂಗನ ಕಾಯಿಲೆ ರೋಗವು ಕಂಡುಬಂದಿತ್ತು. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚಾಗಿ ಮಂಕಿಪಾಕ್ಸ್ ವೈರಸ್ ಅನ್ನು ಹೊಂದಿರುವ ಪ್ರಾಣಿಗಳು ವಾಸಿಸುವ ಉಷ್ಣವಲಯದ ಮಳೆಕಾಡುಗಳಿಗೆ ಹತ್ತಿರದಲ್ಲಿ  ಕಂಡುಬಂದಿದೆ. ಸಂಶೋಧನೆಯ ಆಧಾರದ ಮೇಲೆ ಅಳಿಲುಗಳು, ಇಲಿಗಳು ಮತ್ತು ಕೆಲ ನಿರ್ದಿಷ್ಟ ಜಾತಿಯ ಕೋತಿಗಳಲ್ಲಿ ಈ ಸೋಂಕನ್ನು ಗುರುತಿಸಲಾಗಿದೆ.