ಈ ಎಲೆಯ ಪುಡಿಯನ್ನು ತೆಂಗಿನೆಣ್ಣೆಯಲ್ಲಿ ಬೆರೆಸಿ ಹಲ್ಲುಜ್ಜಿ… ಹಳದಿ ಕಲೆ ಹೋಗಿ ಹಲ್ಲುಗಳು ಫಳಫಳ ಅಂತ ಹೊಳೆಯುತ್ತೆ!

Teeth Whitening Tips: ಸಾಮಾನ್ಯವಾಗಿ ದೇಹದ ಎಲ್ಲಾ ಭಾಗಗಳ ಸೌಂದರ್ಯವನ್ನು ನೋಡಿಕೊಳ್ಳುತ್ತೇವೆ, ಆದರೆ ಹಲ್ಲುಗಳ ಹಳದಿ ಬಣ್ಣವನ್ನು ನಿರ್ಲಕ್ಷಿಸುತ್ತೇವೆ. ಹಲ್ಲು ಬೆಳ್ಳಗಿಲ್ಲದಿದ್ದರೆ ನಗುವಾಗ ಅಥವಾ ಮಾತನಾಡುವಾಗ ಮುಜುಗರ ಎದುರಿಸಬೇಕಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /7

ಪ್ರತಿದಿನ ಬ್ರಷ್‌ ಮಾಡಿದರೂ ಸಹ ಬಯಸಿದ ಫಲಿತಾಂಶವನ್ನು ಪಡೆಯುವುದಿಲ್ಲ. ಹೀಗಾಗಿ ನಾವಿಂದು 5 ಮನೆಮದ್ದುಗಳ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. ಇವುಗಳು ಸುಲಭವಾಗಿ ಹಲ್ಲುಗಳನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ.

2 /7

ಒಂದು ಸಣ್ಣ ತುಂಡು ಶುಂಠಿಯನ್ನು ಮಿಕ್ಸರ್ ಗ್ರೈಂಡರ್’ನಲ್ಲಿ ರುಬ್ಬಿಕೊಳ್ಳಿ. ನಂತರ ಕಾಲು ಟೀ ಚಮಚ ಉಪ್ಪಿನೊಂದಿಗೆ ಮಿಶ್ರಣ ಮಾಡಿ. ಅದಕ್ಕೆ ಒಂದು ನಿಂಬೆಹಣ್ಣಿನ ರಸವನ್ನು ಕೂಡ ಮಿಶ್ರಣ ಮಾಡಿ. ಟೂತ್ ಬ್ರಶ್ ಬಳಸಿ ಈ ಮಿಶ್ರಣದ ಸಹಾಯದಿಂದ ಹಲ್ಲುಜ್ಜಿ.

3 /7

ಬೇವಿನ ಔಷಧೀಯ ಗುಣಗಳ ಬಗ್ಗೆ ನಮಗೆಲ್ಲರಿಗೂ ತಿಳಿದಿದೆ. ಅದರ ಎಲೆಗಳನ್ನು ಚೆನ್ನಾಗಿ ಕುದಿಸಿ, ನಂತರ ನೀರನ್ನು ಫಿಲ್ಟರ್ ಮಾಡಿ ತಣ್ಣಗಾಗುವವರೆಗೆ ಕಾಯಿರಿ. ಈಗ ಈ ನೀರಿನಿಂದ ಬಾಯಿ ಸ್ವಚ್ಛಗೊಳಿಸಿ, ಬೇವಿನ ಕಹಿ ಬಾಯಿ ಮತ್ತು ಹಲ್ಲುಗಳಲ್ಲಿ ಇರುವ ಸೂಕ್ಷ್ಮಾಣುಗಳನ್ನು ಕೊಲ್ಲುತ್ತದೆ.

4 /7

ಕೋಕೋ ಪೌಡರ್ ಅನ್ನು ನೀರು ಅಥವಾ ತೆಂಗಿನ ಎಣ್ಣೆಯೊಂದಿಗೆ ಬೆರೆಸಿ ಪೇಸ್ಟ್ ಆಗಿ ತಯಾರಿಸಿ. ನಂತರ ಬ್ರಷ್ ಸಹಾಯದಿಂದ ಹಲ್ಲುಗಳನ್ನು ಸ್ವಚ್ಛಗೊಳಿಸಿ. ಈ ಮಿಶ್ರಣವನ್ನು ಬಳಸುವುದರಿಂದ ನಿಮ್ಮ ಹಲ್ಲುಗಳ ಹೊಳಪನ್ನು ಮರಳಿ ತರುತ್ತದೆ.

5 /7

ಇದು ಸಾಮಾನ್ಯ ಉಪ್ಪಲ್ಲ, ಇದನ್ನು ಎಪ್ಸಮ್ ಸಾಲ್ಟ್ ಎಂದು ಕರೆಯಲಾಗುತ್ತದೆ. ಕಲ್ಲು ಉಪ್ಪಿನಂತೆ ಇದ್ದು ಪಿಂಕ್ ಬಣ್ಣದಲ್ಲಿರುತ್ತದೆ, ಸಾಮಾನ್ಯ ಭಾಷೆಯಲ್ಲಿ ಪಿಂಕ್ ಸಾಲ್ಟ್ ಎಂದೂ ಕರೆಯಲಾಗುತ್ತದೆ. ಈ ಉಪ್ಪು ಮತ್ತು ನೀರನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ. ನಂತರ ಟೂತ್ ಬ್ರಶ್ ಬಳಸಿ ಮಿಶ್ರಣವನ್ನು ಹಲ್ಲುಗಳ ಮೇಲೆ ಉಜ್ಜಿ. ನಂತರ ಬಾಯಿಯನ್ನು ತೊಳೆಯಿರಿ.

6 /7

ಪುದೀನವನ್ನು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. 3 ಅಥವಾ 4 ಎಲೆಗಳನ್ನು ಪುಡಿಮಾಡಿ ತೆಂಗಿನ ಎಣ್ಣೆಯೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಬ್ರಷ್ ಬಳಸಿ ಚೆನ್ನಾಗಿ ಹಲ್ಲುಗಳ ಮೇಲೆ ಉಜ್ಜಿಕೊಳ್ಳಿ. ಹೀಗೆ ಮಾಡಿದರೆ ತಕ್ಷಣವೇ ಹಳದಿ ಕಲೆಗಳು ದೂರವಾಗಿ ಹಲ್ಲುಗಳು ಬಿಳಿಯಾಗುತ್ತವೆ.

7 /7

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)